District Consumer Disputes Redressal Commission ಅಪಘಾತಕ್ಕೊಳಗಾಗಿ ಹಾನಿಯಾಗಿದ್ದ ಕಾರನ್ನು ದುರಸ್ತಿಪಡಿಸಿದ ನಂತರ ಅದರ ಖರ್ಚನ್ನು ಸಂದಾಯ ಮಾಡುವಂತೆ ಮನವಿ ಮಾಡಿದ್ದರೂ ಹಣ ನೀಡದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡುವಂತೆ ಆದೇಶಿಸಿದೆ.
ಅರ್ಜಿದಾರರಾದ ನಿತೇಶ್ ಟಿ. ನಾಯಕ್ ಎಂಬುವವರು ಶ್ರೀರಾಮ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ಜಯಪುರ, ರಾಜಸ್ತಾನ ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಾಹನ ವಿಮಾ ಪಾಲಿಸಿಯ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರರ ಟೊಯೋಟೊ ಇಟಿಯೋಸ್ ಕಾರ್ ಸೆ.೨೭,೨೦೨೨ ರಂದು ಅಪಘಾತಕ್ಕೊಳಗಾಗಿ ಹಾನಿಯಾಗಿದ್ದು, ಈ ಸಂಬಂಧ ಶ್ರೀರಾಮ್ ಜನರಲ್ ಇನ್ಸೂರೆನ್ಸ್ ಕಂಪೆನಿಯನ್ನು ಸಂಪರ್ಕಿಸಿ ಎಸ್ಟಿಮೇಟ್ ಪ್ರಕಾರ ರಿಪೇರಿ ಖರ್ಚು ರೂ. ೧,೫೩,೩೯೭/- ಗಳ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿದ್ದರು. ಆದರೆ ಕಂಪನಿಯವರು ವಾಹನಕ್ಕೆ ಉಂಟಾದ ಹಾನಿಗಳು ವಾಹನದ ಪೂರ್ವ ತಪಾಸಣೆಗೆ ಮುಂಚೆ ಉಂಟಾಗಿರುವಂತ ಹಾನಿಗಳಾದ್ದರಿಂದ ಅಪಘಾತ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಪರಿಹಾರ ಮೊತ್ತ ನೀಡಲು ನಿರಾಕರಿಸಿದ್ದರು.
District Consumer Disputes Redressal Commission ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಅರ್ಜಿದಾರರ ಸಾಕ್ಷ್ಯ ವಿಚಾರಣೆಯ ವಿವರ ಮತ್ತು ಹಾಜರುಪಡಿಸಲಾದ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ. ಎದುರುದಾರು ಅರ್ಜಿದಾರರಿಗೆ ರೂ. ೩೦,೨೨೬ ಗಳನ್ನು ವಾಹನ ರಿಪೇರಿಗಾಗಿ ತಗುಲಿದ ಖರ್ಚು-ವೆಚ್ಚಗಳ ಬಾಬ್ತು ಎಂದು ಲೀಗಲ್ ನೋಟೀಸ್ ನೀಡದ ದಿ:೦೨/೦೬/೨೦೨೩ ರಿಂದ ಶೇ.೯% ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.೨೫,೦೦೦ ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. ೧೦,೦೦೦ ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.
District Consumer Disputes Redressal Commission ಆ್ಯಕ್ಸಿಡೆಂಟ್ ಕಾರು ದುರಸ್ತಿ: ಪರಿಹಾರ ನೀಡಲು ಆದೇಶ
Date: