K.B.Prasanna Kumar ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಾತನಾಡುತ್ತಿಲ್ಲ. ಹಿಂದಿನ ಘಟನೆಗಳನ್ನೆಲ್ಲ ಅವರು ಮರೆತಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ ಬಿ ಪ್ರಸನ್ನಕುಮಾರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಈಶ್ವರಪ್ಪನವರ ವಿರುದ್ಧ ಆಪಾದನೆ ಬಂದಾಗ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ಅವರ ಮೌನಕ್ಕೆ ಜಾರಿದ್ದೇಕೆ? ವಾಲ್ಮೀಕಿ ಅಭಿವೃದ್ಧಿ ನಿಗಮ ನಿರ್ವಹಿಸುವ ಸಚಿವರ ರಾಜೀನಾಮೆ ಪಡೆಯಬೇಕು. ಅಧಿಕಾರದಲ್ಲಿ ಇದ್ದಾಗ ಒಂದು ರೀತಿ ಅಧಿಕಾರ ಇಲ್ಲದ ರೀತಿ ಸರಿಯಲ್ಲ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಭಯವನ್ನುಂಟು ಮಾಡುವ ವಾತಾವರಣ ನಿರ್ಮಿಸಿದೆ. ಇದಕ್ಕೆ ಹತ್ತಾರು ಉದಾಹರಣೆಗಳಿವೆ. ಅದಕ್ಕೆ ಚಂದ್ರಶೇಖರ್ ಆತ್ಮಹತ್ಯೆ ಉದಾಹರಣೆಯಾಗಿದೆ. ಅವರ ಡೆತ್ ನೋಟ್‌ನಲ್ಲಿ ನಾನು ಹೇಡಿಯಲ್ಲ ಎಂದಿದ್ದಾರೆ. ಅಧೀಕ್ಷಕ ಮಟ್ಟದ ಅಧಿಕಾರಿಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಇನ್ನು ಉಳಿದವರ ಪಾಡೇನು ಎಂದು ಪ್ರಶ್ನಿಸಿದರು.
ಜೀವನದಲ್ಲಿ ಹೇಳಿಕೊಳ್ಳಲು ನಿರ್ಮಾಣವಾಗದ ಸ್ಥಿತಿ ನಿರ್ಮಾಣವಾಗಿದೆ. ಸಾಯುವ ಪರಿಸ್ಥಿತಿಯಲ್ಲಿ ವ್ಯಕ್ತಿ ಯಾವ ಭಾವನೆಯಲ್ಲಿ ಮಾತನಾಡುತ್ತಾನೆ ಎನ್ನುವುದು ಪ್ರಮುಖವಾಗಿದೆ. ಆದರೆ ಸರ್ಕಾರ ಏನೂ ಆಗೇ ಇಲ್ಲ ಎಂಬAತೆ ವರ್ತಿಸುತ್ತಿದೆ ಎಂದ ಅವರು, ಕಾನೂನು ಸುವ್ಯವಸ್ಥೆ ಕುಸಿದಿದೆ. ಶಾಲೆ ಮಕ್ಕಳು ಸುರಕ್ಷಿತವಾಗಿ ಮನೆಗೆ ಬಂದರೆ ಸಾಕ್ಪ ಎನ್ನುವ ಸ್ಥಿತಿನಿರ್ಮಾಣವಾಗಿದೆ. ಗ್ಯಾಂಗ್ ವಾರ್ ನಡೆಯುತ್ತಿದೆ.. ಗಾಂಜಾ ಹೊಗೆ ಎಲ್ಲೆಡೆ ಆವರಿಸಿಕೊಂಡಿದೆ. ಅಧಿಕಾರಿಗಳು ಹೆದರಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಇವತ್ತು ಶಿವಮೊಗ್ಗ ನಾಳೆ ಎಲ್ಲಡೆ ನಡೆಯಲಿದೆ ಎಂದರು.
K.B.Prasanna Kumar ಯಾವುದೇ ವಿಚಾರ ಬಂದರೆ ರಾಜಕೀಯವಾಗಿ ನೋಡಬಾರದು. ಸರ್ಕಾರ, ಯಾವುದನ್ನೂ ಕಾನೂನು ಪಾಲನೆಗೆ ಬಿಡುತ್ತಿಲ್ಲ. ಚಂದ್ರಶೇಖರ್ ಅವರು ಸಚಿವರ ಹೆಸರು ಉಲ್ಲೇಖಿಸಿದ್ದಾರೆ. ಯಾವ ಸಚಿವರು ಎಂದು ಅವರು ಹೇಳಿಲ್ಲ ಎನ್ನುತ್ತಿದ್ದಾರೆ. ನಿಗದಿತ ನಿಗಮಕ್ಕೆ ಸಚಿವರು ಇರ್ತಾರೆ, ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳು ಗೋಪಾಲ, ನಗರಾಧ್ಯಕ್ಷ ದೀಪಕ್ ಸಿಂಗ್, ಸಿದ್ದಪ್ಪ, ರಮೇಶ್, ಕಾರ್ಯಾಧ್ಯಕ್ಷ ರಾಮಕೃಷ್ಣ, ಸಂಗಯ್ಯ, ವಕ್ತಾರ ನರಸಿಂಹ ಗಂಧದ ಮನೆ, ಮಂಜುನಾಥ್, ತ್ಯಾಗರಾಜ್, ದಯಾನಂದ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.
K.B.Prasanna Kumar ಆತ್ಮಹತ್ಯೆ ಡೆತ್ ನೋಟ್ ಪ್ರಕಾರ ಸಚಿವರ ರಾಜಿನಾಮೆಯನ್ನ ಸರ್ಕಾರ ಪಡೆಯಲಿ – ಕೆ.ಬಿ.ಪ್ರಸನ್ನ ಕುಮಾರ್
Date: