The Institute of Indian Foundrymen ದಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್, ದಕ್ಷಿಣ ಭಾರತದ ೨೦೨೩-೨೪ನೇ ಸಾಲಿನ 63ನೇ ವಾರ್ಷಿಕ ಸಭೆ ರ‍್ಪೋರ್ಟ್ ರಸ್ತೆಯ ಮಲ್ನಾಡ್ ಶೈರ್‌ನಲ್ಲಿ ನಡೆಯಿತು. ಕೈಗಾರಿಕೋದ್ಯಮಿ ಶ್ರೀ ಡಿ.ಜಿ ಬೆನಕಪ್ಪರವರು ದಕ್ಷಿಣ ಭಾರತದ ದಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಪೌಂಡ್ರಿಮೆನ್‌ನ ಛೆರ್ಮೆನ್ ರಾಗಿ 2024-25ನೇ ಸಾಲಿಗೆ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಶ್ರೀಯುತ ಸೌರೆನ್‌ಪಾಲ್ ಎಸ್‌ಸಿಎಂ-ಹೆಡ್, ಮೆ. ಔಮಾ ಇಂಡಿಯಾ ಪ್ರೈ.ಲಿ ಬೆಂಗಳೂರು ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಉದ್ಯಮಿ ಶ್ರೀಯುತ ಡಿ.ಎಸ್. ಚಂದ್ರಶೇಖರ್ ರಾಷ್ಟ್ರೀಯ ಅಧ್ಯಕ್ಷರು, ದಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಪೌಂಡ್ರಿಮೆನ್ ಮತ್ತು ವೈಸ್ ಛೆರ್ಮೆನ್ ಮೆ. ಶಾಂತಲಾ ಸ್ಪೇರೋಕ್ಯಾಸ್ಟ್ ಪ್ರೈ. ಲಿ ಮಾಚೇನಹಳ್ಳಿ ಇವರು ಉಪಸ್ಥಿತರಿದ್ದರು.
The Institute of Indian Foundrymen ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್‌ರವರು ಶ್ರೀಯುತರಿಗೆ ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿ ಎಂ. ರಾಜು, ನಿಕಟಪೂರ್ವ ಅಧ್ಯಕ್ಷರಾದ ಜೆ.ಆರ್ ವಾಸುದೇವ, ಮಾಜಿ ಅಧ್ಯಕ್ಷರಾದ ಡಿ.ಎಂ. ಶಂಕರಪ್ಪ, ನಿರ್ದೇಶಕರಾದ ರಮೇಶ್ ಹೆಗಡೆ, ಉದ್ಯಮಿ ಗಿರಿಮಾಜಿ ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು.