Tuesday, October 1, 2024
Tuesday, October 1, 2024

kote Police ಅಕ್ರಮ ಬಡ್ಡಿ ವ್ಯವಹಾರ ಜಾಲದ ವಿರುದ್ಧ ನಿಲ್ಲದ ಖಾಕಿ ಯುದ್ಧ

Date:

kote Police ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿದ್ದವರ ವಿರುದ್ಧ ಕೋಟೆ ಪೊಲೀಸರು ದಾಳಿ ನಡೆಸಿದ್ದಾರೆ.

ಇದರಿಂದ ಬಡ್ಡಿ ವ್ಯವಹಾರಗಳ ವಿರುದ್ಧ ಪೊಲೀಸರ ಸಮರ ಮುಂದುವರೆದಿದೆ.
ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯಾಂಕ್ ಮೊಹಲ್ಲಾದ ಮಹಿಳೆಯೊಬ್ಬರು 04 ವರ್ಷಗಳ ಹಿಂದೆ ಶಿವಮೊಗ್ಗ ಟೌನ್ ಟ್ಯಾಂಕ್ ಮೊಹಲ್ಲಾದ ವಾಸಿ ಸುಪ್ರಿಯಾರವರ ಹತ್ತಿರ 10% ಬಡ್ಡಿಯಂತೆ ಮತ್ತು ಶಿವಮೊಗ್ಗ ಟೌನ್ ಬಾಪೂಜಿ ನಗರದ ವಾಸಿ ವೆನಿಲಾ ರವರಿಂದ 15% ಬಡ್ಡಿಯಂತೆ ಸಾಲವನ್ನು ಪಡೆದುಕೊಂಡಿದ್ದರು.

ಹಣ ಪಡೆದ ಮಹಿಳೆಗೆ ಹಣವನ್ನು ಹಿಂದಿರುಗಿಸಿದರೂ, ಸಹಾ ಬಡ್ಡಿ ಬಾಕಿಯನ್ನು ಅಸಲಿನ ಮೊತ್ತಕ್ಕೆ ಸೇರಿಸಿ ಸಾಲದ ಮೊತ್ತವನ್ನು ಹೆಚ್ಚಿಸಿ ಪದೇ ಪದೇ ಆಸಲು ಮತ್ತು ಬಡ್ಡಿಯನ್ನು ಕೊಡುವಂತೆ ಪೀಡಿಸುತ್ತಿದ್ದರು. ಮಹಿಳೆಯ ಮನೆಯ ಹತ್ತಿರವೂ ಹೋಗಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ, ಆಕೆಯ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಲಾಗಿದೆ ಎಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ನೀಡಿದ ದೂರಿನ ಮೇರಗೆ ಕೋಟೆ ಪೊಲೀಸ್ ಠಾಣೆಯಲ್ಲಿ Karnataka Prevention of Charging Exorbitant Interest Act 2004, SC & ST (PA Act) ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಾಗಿತ್ತು.
ಗುರುಬಸವರಾಜ್ ಪಿಐ ಕೋಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು The Karnataka Prevention of Charging Exorbitant Interest Act-2004 ನ ಅಡಿಯಲ್ಲಿ ಆರೋಪಿತರಾದ ಸುಪ್ರಿಯಾ ಮತ್ತು ವೆನಿಲಾ ರವರ ಮನೆಗಳ ಮೇಲೆ ದಾಳಿ ನಡೆಸಿದೆ.

kote Police ದಾಳಿಯಲ್ಲಿ 54 ಚೆಕ್ ಗಳು, 25 ಬಾಂಡ್ ಪೇಪರ್ ಗಳನ್ನು ಮತ್ತು 1 ಅಗ್ರಿಮೆಂಟ್ ಪೇಪರ್ ಅನ್ನು ವಶಪಡಿಸಿಕೊಂಡು ವಸಪಡಿಸಿಕೊಳ್ಳಲಾಗಿದೆ.‌ ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಅಥವಾ ಅಕ್ರಮ ಬಡ್ಡಿ ವ್ಯವಹಾರ ಮಾಡಿ ತೊಂದರೆಕೊಡುತ್ತಿದ್ದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆ/ 112 ಸಹಾಯವಾಣಿಗೆ ಮಾಹಿತಿ ಅಥವಾ ದೂರನ್ನು ನೀಡಲು ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ...

Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ...

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ...

Shivamogga Cycle Club ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮಶಾಲೆ- ಎನ್.ಗೋಪಿನಾಥ್

Shivamogga Cycle Club ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ...