MESCOM ಗುಡುಗು-ಸಿಡಿಲು ಬಿರುಗಾಳಿಯಿಂದ ಕೆಲವು ಕ್ಷಣ ಏನಾಗುತ್ತಿದೆ ಎಂದು ನೋಡುತ್ತಿದ್ದಂತೆ ತಾಳಗುಪ್ಪ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಪ್ಲೈವುಡ್ ಪ್ಯಾಕ್ಟರಿ ಸಮೀಪ ಬೃಹತ್ ಗಾತ್ರದ ಮಾವಿನ ಮರವೊಂದ ಹಲವು ರಂಬೆಗಳು ತುಂಡಾಗಿ ನೆಲಕ್ಕೆ ಅಪ್ಪಳಿಸಿದ ಪರಿಣಾಮ 4-5 ಮೆಸ್ಕಾಂ ವಿದ್ಯುತ್ ಕಂಬಗಳು ತುಂಡು ತುಂಡಾಗಿ ಮುರಿದು ನೆಲಕ್ಕುರುಳಿದವು.
ಮಧ್ಯಾಹ್ನ ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಗಾಳಿಯ ರಭಸದಿಂದ ಜನಸಾಮಾನ್ಯರು ಭಯದಿಂದ ವೀಕ್ಷಿಸುತ್ತಿದ್ದಂತೆ ಹೆದ್ದಾರಿ ಸಂಚಾರ ಬಂದ್ ಆಯಿತು.ತಾಳಗುಪ್ಪದ ಗೌರಿ ಕೆರೆ ಏರಿಯಲ್ಲಿನ ಹೆದ್ದಾರಿ ಅಂಚಿನ ಮಾವಿನ ಮರದ ಕೊಂಬೆ ಮುರಿದು ಬಿದ್ದಿದೆ. ಗೌರಿ ಕೆರೆ ಏರಿಯಿಂದ ತಾಳಗುಪ್ಪ ಪಟ್ಟಣ ಮತ್ತು ಹೆದ್ದಾರಿಯ ಮರತ್ತೂರು-ಬಲೆಗಾರು ವರೆಗೂ ರಸ್ತೆ ಅಂಚಿನ ನೀಲಗಿರಿ ಮರ ಸೇರಿದಂತೆ ಸಾಲುಮರಗಳು ಬುಡಸಮೇತ ಕಿತ್ತುಬಿದ್ದಿರುವ ಘಟನೆ ವರದಿಯಾಗಿದೆ.
ಹೆದ್ದಾರಿಯ 3-4ಕಡೆ ಹೆದ್ದಾರಿ ಸಂಚಾರ ಬಂದ್ ಆಯಿತು.ಪ್ರಯಾಣಿಕರು ವಾಹನ ಸವಾರರು ರಸ್ತೆಯ ಲ್ಲಿಯೇ ಪರದಾಡು ವಂತಾಯಿತು.
ವಾಹನಗಳ ಸರದಿ ಸಾಲುಗಟ್ಟಿದವು.ರಸ್ತೆಯಲ್ಲಿ ಜನಜಾತ್ರೆಯಂತೆ ನಿಲ್ಲುವಂತಾ ಯಿತು.ಇನ್ನೇನು ಮಳೆ ಸುರಿಯುತ್ತದೆ ಎನ್ನುವಷ್ಟರಲ್ಲಿ ಬಿರುಗಾಳಿಯಲ್ಲಿ ಅನಾಹುತ ಸೃಷ್ಟಿಸಿ ಮರಗಳನ್ನು ಉರುಳಿಸಿ ಮಳೆ ಹನಿಯೊಂದಿಗೆ ಮೋಡ ಗಳು ಮಾಯವಾದವು.
MESCOM ವಿಷಯ ತಿಳಿದ ಆಡಳಿತ ಹೆದ್ದಾರಿ ತೆರವು ಕೈಗೊಳ್ಳುವ ಮೂಲಕ ಕೆಲವು ಸಮಯಗಳ ನಂತರ ಹೆದ್ದಾರಿ ತೆರವುಗೊಳಿಸಲಾಯಿತು. ಬಿರುಗಾಳಿಯಿಂದ ಅನಾಹುತ ವಾದ 5-6 ಕಿ.ಮೀ ವ್ಯಾಪ್ತಿಯಲ್ಲಿ ಮಳೆ ಸುರಿ ಯಲಿಲ್ಲ. ಚೂರಿಕಟ್ಟೆಯಿಂದ ಜೋಗ-ಕಾರ್ಗಲ್‌ವರೆಗೂ ಮಳೆ ಸುರಿಯಿತು.ಹೀಗೆ ಜೋಗ ವ್ಯಾಪ್ತಿಯಲ್ಲಿ ಸುರಿದ ಮಳೆ ತಾಳಗುಪ್ಪದಿಂದ ಸಾಗರದವರೆಗೂ ಸುರಿಯ ಲಿಲ್ಲ. ಕೇವಲ ಮೋಡಕವಿದ ವಾತವರಣವಿದ್ದು,ಮಳೆ ಬೀಳಬಹುದು ಎನ್ನುವಂತಾಗಿತ್ತು.