Karnataka Kshatriya Maratha Parishath ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ನಿಲಯದ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಭೂಮಿ ಪೂಜೆ ಕಾರ್ಯಕ್ರಮ ಮೇ 26 ರ ಬೆಳಿಗ್ಗೆ 10:30ಕ್ಕೆ ಹಮ್ಮಿಕೊಳ್ಳ ಲಾಗಿದೆ ಎಂದು ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಹೆಚ್.ಬಿ. ರಮೇಶ್‌ಬಾಬು ಜಾಧವ್ ತಿಳಿಸಿದರು.
ಪತ್ರಿಕಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಗೋಸಾಯಿ ಮರಾಠ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಸಾನಿಧ್ಯ ವಹಿಸಿ ವಿದ್ಯಾರ್ಥಿ ನಿಲಯ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಪರಿಷತ್‌ನ ರಾಜ್ಯ ಗೌರ್‍ನಿಂಗ್ ಕೌನ್ಸಿಲ್ ಛೇರ್ಮನ್ ಎಸ್.ಆರ್.ಸಿಂಧ್ಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ಸುನೀಲ್ ಚವಾಣ್, ಖಜಾಂಚಿ ಟಿ.ಆರ್. ವೆಂಕಟರಾವ್ ಚವಾಣ್, ಕರ್ನಾಟಕ
ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್ ಆರ್. ಪಾಗೋಜಿ ಆಗಮಿಸುವರು.
ಛತ್ರಾಪತಿ ಶಿವಾಜಿ ಮರಾಠ ಟ್ರಸ್ಟ್‌ನ ಅಧ್ಯಕ್ಷ ಹೆಚ್.ಸಿದ್ದೋಜಿರಾವ್ ಜಾಧವ್, ಶಿವಮೊಗ್ಗದ ಕ್ಷತ್ರಿಯ ಮರಾಠ ಸಹಕಾರ ಸಂಘದ ಆರ್.ಬಿ.
ಸುರೇಶ್ ಬಾಬು ಮೋರೆ, ಪರಿಷತ್‌ನ ಬಿ.ಕೆ.ದಿನೇಶ್‌ರಾವ್ ನಗರಾಧ್ಯಕ್ಷ ಚವಾಣ್, ಶಿವಮೊಗ್ಗ ತಾಲ್ಲೂಕು ಗ್ರಾಮಾಂತರ ಅಧ್ಯಕ್ಷರು ದೇವರಾಜ್ ಶಿಂಧೆ ಎಂ.ಡಿ. ಆಗಮಿಸಲಿದ್ದಾರೆ ಎಂದರು.
ರಾಜ್ಯಾಧ್ಯಕ್ಷೆ ಎಸ್. ಸುರೇಶ್ ರಾವ್ ಸಾಠ ವಹಿಸಲಿದ್ದಾರೆ ಎಂದರು.
Karnataka Kshatriya Maratha Parishath ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ಸುರೇಶ್‌ಬಾಬು ಮೋರೆ ಮಾತನಾಡಿ, ಸೂಡಾದಿಂದ ನಿವೇಶನ ಖರೀದಿಸಲಾಗಿದ್ದು, ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯದಲ್ಲಿ 29 ಕೊಠಡಿಗಳಿದ್ದು, ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾ ಸಕ್ಕೆ ನೀಡಲಾಗುವುದು ಎಂದರು.