Adhichunchanagiri Mahasamsthana Muth ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಇವರ ಸಹಯೋಗದಲ್ಲಿ 19 ನೇ ವರ್ಷದ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಮನೆ-ಮನ ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆ 225 ನೆಯ ತಿಂಗಳ ಕಾರ್ಯಕ್ರಮ ಜೂನ್ 7ನೆಯ ಶುಕ್ರವಾರ ಏರ್ಪಡಿಸಲು ತೀರ್ಮಾನ ಮಾಡಲಾಗಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರೊಂದಿಗೆ ನಡೆದ ಸಮಾಲೋಚನೆ ನಂತರ ದಿನಾಂಕ ನಿಗದಿ ಪಡಿಸಲಾಯಿತು ಎಂದು ಡಿ. ಮಂಜುನಾಥ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಮಕ್ಕಳು ಕಳೆದ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಮತ್ತು ಸೊರಬದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಅವರು ಭಾಗವಹಿಸಲು ಅವಕಾಶವಿದೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಕ್ಕಳು ಕನ್ನಡ ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿದ್ದಾರೆ. ಅವರಲ್ಲಿ ಕಥೆ, ಕವನ, ಪ್ರಬಂಧ ಬರೆಯುವ, ಯಾವುದೇ ವಿಚಾರವಾಗಿ ಸಮರ್ಥವಾಗಿ ಮಾತನಾಡುವ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಿದೆ.
ಆಸಕ್ತಿಯಿರುವ ಮಕ್ಕಳು, ಪೋಷಕರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮಕ್ಕಳ ಹೆಸರು, ತರಗತಿ, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಮಾಹಿತಿ ನೀಡಿ ನೋಂದಾಯಿಸಿ ಕೊಳ್ಳಲು ಡಿ. ಮಂಜುನಾಥ ಕೋರಿದ್ದಾರೆ.
Adhichunchanagiri Mahasamsthana Muth ಆಸಕ್ತರು ಡಿ. ಮಂಜುನಾಥ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಆರ್.ಟಿ.ಓ. ಕಚೇರಿ ರಸ್ತೆ, ಶಿವಮೊಗ್ಗ, ದೂರವಾಣಿ : 9449552795 ಸಂಪರ್ಕ ಮಾಡಲು ಕೋರಲಾಗಿದೆ.