High Court of Kerala ಕೇರಳ ಗವರ್ನರ್ ಆರಿಫ್ ಮೊಹಮ್ಮದ್ ಖಾನ್‌ಗೆ ಭಾರೀ ಹಿನ್ನಡೆಯಾಗಿದ್ದು, ಕೇರಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಮಾಡಿದ್ದ ನಾಲ್ವರು ಸದಸ್ಯರ ನಾಮನಿರ್ದೇಶನಗಳನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.
ರಾಜ್ಯಪಾಲರು ಎಬಿವಿಪಿ ಜೊತೆ ನಂಟಿನ ವಿದ್ಯಾರ್ಥಿಯನ್ನು ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ವಿವಾದ ಭಗಿಲೆದ್ದಿತ್ತು. ಕುಲಪತಿಯಾಗಿ, ಸೆನೆಟ್‌ಗೆ ನೇಮಕಾತಿಗಳನ್ನು ಮಾಡುವುದು ಅವರ ವಿವೇಚನೆಯಾಗಿದೆ ಎಂಬ ರಾಜ್ಯಪಾಲರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಧಿಕಾರದ ಯಾವುದೇ ಅನಿಯಂತ್ರಿತ ಬಳಕೆಯು ಭಾರತದ ಸಂವಿಧಾನದ 14ನೇ ಪರಿಚ್ಛೇದದಲ್ಲಿ ಪ್ರತಿಪಾದಿಸಲಾದ ‘ಸಮಾನತೆ’ ನಿಯಮವನ್ನು ಮಾತ್ರವಲ್ಲದೆ 16ನೇ ವಿಧಿಯಲ್ಲಿ ಅಂತರ್ಗತವಾಗಿರುವ ‘ತಾರತಮ್ಯ’ ನಿಯಮವನ್ನೂ ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
High Court of Kerala ಗವರ್ನರ್ ಸೆನೆಟ್‌ನಿಂದ ತೆಗೆದುಹಾಕಿರುವ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್‌ಎಫ್‌ಐ) ಜೊತೆ ನಂಟಿನ ನಾಲ್ವರು ವಿದ್ಯಾರ್ಥಿಗಳು ‘1974ರ ಕೇರಳ ವಿಶ್ವವಿದ್ಯಾಲಯ ಕಾಯ್ದೆಯ ಸೆಕ್ಷನ್ 17ರ’ ಅಡಿಯಲ್ಲಿ ಸಲ್ಲಿಸಿದ ಎರಡು ರಿಟ್ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಆರಿಫ್ ಮೊಹಮ್ಮದ್ ಖಾನ್ ಅವರು ನಾಮನಿರ್ದೇಶನಕ್ಕೆ ಸಾಮಾನ್ಯ ವಿಧಾನವನ್ನು ಅನುಸರಿಸಿಲ್ಲ ಮತ್ತು ಯಾವುದೇ ಅರ್ಹತೆ ಇಲ್ಲದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೇರಳ ವಿಶ್ವವಿದ್ಯಾನಿಲಯ ಕಾಯಿದೆಯ ಸೆಕ್ಷನ್ 17ರ ಪ್ರಕಾರ ಕುಲಪತಿಗಳು ನಾಲ್ವರು ವಿದ್ಯಾರ್ಥಿಗಳನ್ನು ಸೆನೆಟ್‌ಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಂದಿದ್ದಾರೆ, ಮಾನವಿಕ, ವಿಜ್ಞಾನ, ಕ್ರೀಡೆ ಮತ್ತು ಲಲಿತಕಲೆಗಳಲ್ಲಿ ಅವರ ಅಸಾಧಾರಣ ಶೈಕ್ಷಣಿಕ ಸಾಮರ್ಥ್ಯಗಳಿಂದ ಗುರುತಿಸಿ ಅವರನ್ನು ಸೆನೆಟ್‌ಗೆ ನೇಮಕ ಮಾಡಲಾಗುತ್ತದೆ.
High Court of Kerala ಕೇರಳ ವಿವಿ ಸೆನೆಟ್ ಗೆ ಎಬಿವಿಪಿಗೆ ಸೇರಿದ್ದ ಸದಸ್ಯರ ನಾಮನಿರ್ದೇಶನ, ರದ್ದು ಗೊಳಿಸಿದ ಹೈಕೋರ್ಟ್
Date: