Ayanur Manjunath ಧ್ವನಿ ಇಲ್ಲದ ನೌಕರರನ್ನು ಗುರುತಿಸಿದ್ದೇನೆ. ಅವರ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸಿದ್ದೇನೆ. ಅದೇ ರೀತಿ ನೌಕರರೂ ಕೂಡ ತನ್ನ ಹೋರಾಟವನ್ನು ಗಮನಿಸಿ ಮನ್ನಣೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ತನ್ನ ಗೆಲುವಿಗೆ ಉತ್ತಮ ವಾತಾವರಣವಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಉಮೇದುವಾರ ಆಯನೂರು ಮಂಜುನಾಥ ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲೇ ೨೬ ಸಾವಿರ ಮತ ಪಡೆದು ದಾಖಲೆ ನಿರ್ಮಿಸಿದ್ದೇನೆ. ಇಲ್ಲಿಯವರೆಗೆ ಯಾರೂ ಅಷ್ಟೊಂದು ಮತವನ್ನು ಮೊದಲ ಸುತ್ತಿನಲ್ಲಿ ಗಳಿಸಿರಲಿಲ್ಲ. ಈ ಬಾರಿ ಇದು ಇನ್ನೂ ಹೆಚ್ಚಲಿದೆ. ಮೊದಲ ಸುತ್ತಿನಲ್ಲೇ ಜಯ ಸಿಗಲಿದೆ ಎಂದರು.
ಯಾವ ಎದುರಾಳಿಯನ್ನೂ ಲಘುವಾಗಿ ಪರಿಗಣಿಸಿಲ್ಲ. ಅವರವರ ಮತ ಅವರಿಗೆ ದಕ್ಕುತ್ತದೆ. ಕರಾವಳಿ ಭಾಗದಲ್ಲಿ ನನ್ನ ಪರ ಹೆಚ್ಚಿನ ಒಲವಿದೆ. ಪ್ರವಾಸ ಮಾಡಿದಾಗ ಇದು ವ್ಯಕ್ತವಾಗಿದೆ. ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಅಲ್ಲಿ ಉತ್ತಮ ಪ್ರಚಾರ ಮಾಡಲಾಗಿದೆ. ನೌಕರರ ಓಪಿಎಸ್, ಎನ್ ಪಿಎಸ್, ಕೆಲಸದ ¨sದ್ರತೆ, ಅತಿಥಿ ಉಪನ್ಯಾಸಕರ, ಶಿಕ್ಷಕರ ಸಮಸ್ಯೆ, ಪೊಲೀಸ್ ನೌಕರರ ಔರಾದ್‌ಕರ್ ವರದಿಯ ಸಮಸ್ಯೆ ಎಲ್ಲವನ್ನೂ ಪರಿಷತ್ತಿನಲ್ಲಿ ಚರ್ಚಿಸಿ ಅದಕ್ಕೆ ಸೂಕ್ತ ಪರಿಹಾರ ಕೊಡಿಸುವಲ್ಲಿ ಯಶಸ್ವಿ ಆಗಿರುವುದು ತನಗೆ ಹೆಚ್ಚಿನ ಮತಕ್ಕೆ ಅನುಕೂಲವಾಗಲಿದೆ ಎಂದರು.
Ayanur Manjunath ಶಿಕ್ಷಕರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಕೆಪಿಸಿಸಿ ಸೂಚನೆ ಮೇರೆಗೆ ವಾಪಸ್ ಪಡೆದು ಕಾಂಗ್ರೆಸ್ ಉಮೇದುವಾರ ಕೆ ಕೆ ಮಂಜುನಾಥಕುಮಾರ್ ಅವರಿಗೆ ಬೆಂಬಲ ನೀಡಿರುವÀ ಜಿಲ್ಲಾ ಕಾಂಗ್ರೆಸ್ ವಕ್ತ್ತಾರ ಶಂಕರಘಟ್ಟದ ರಮೇಶ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಈ ಹಿನ್ನೆಲೆಯಲ್ಲಿ ಸ ಲ್ಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದಿದ್ದೇನೆ. ಶಿಕ್ಷಕರ ಕ್ಷೇತ್ರ ಕಲುಷಿತಗೊಂಡಿದೆ. ಇದು ಪವಿತ್ರವಾಗಬೇಕೆನ್ನುವುದು ನನ್ನ ಆಶಯವಾಗಿತ್ತು. ಆ ಕಾರಣದಿಂದ ಕಣಕ್ಕಿಳಿದಿದ್ದೆ ಎಂದರು.
ಪದವೀಧರ ಕ್ಷೇತ್ರದ ಇನ್ನೊಬ್ಬ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿವಮೊಗ್ಗ ವಿದ್ಯಾನಗರದ ಇಂಜಿನಿಯರ್ ರಂಗಸ್ವಾಮಿ ಮಾತನಾಡಿ, ಆಯನೂರು ಮಂಜುನಾಥ್ ಅವರಿಗೆ ಬೆಂಬಲ ಸೂಚಿಸಿ ವರಿಷ್ಟರ ಆದೇಶದ ಮೇರೆಗೆ ನಾಮಪತ್ರ ವಾಪಸ್ ಪಡೆದಿದ್ದೇನೆ. ಆಯನೂರು ಗೆಲುವಿಗೆ ಯತ್ನಿಸುತ್ತೇನೆ. ಪಕ್ಷದ ಗೆಲುವು ಮುಖ್ಯ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಎಂ. ಶ್ರೀಕಾಂತ್, ಇಕ್ಕೇರಿ ರಮೇಶ್, ಶಾಂತವೀರ ನಾಯ್ಕ್, ಜಿ ಡಿ ಮಂಜುನಾಥ, ವೈ ಎಚ್ ನಾಗರಾಜ, ಶಿ ಜು ಪಾಶಾ, ಪದ್ಮನಾಭ ಮೊದಲಾದವರಿದ್ದರು
Ayanur Manjunath ಮೊದಲ ಸುತ್ತಿನಲ್ಲೇ ಜಯ ಸಿಗಲಿದೆ- ಅಭ್ಯರ್ಥಿ ಆಯನೂರು ಮಂಜುನಾಥ್
Date: