Thursday, October 3, 2024
Thursday, October 3, 2024

Bapuji Institute of Hi-Tech Education ಕೃತಕ ಬುದ್ದಿಮತ್ತೆಯ ಕ್ರಾಂತಿಯನ್ನ ಅಲಕ್ಷಿಸುವಂತಿಲ್ಲ- ಡಾ.ಬಿ.ಇ.ರಂಗಸ್ವಾಮಿ

Date:

Bapuji Institute of Hi-Tech Education ಕೃತಕ ಬುದ್ಧಿಮತ್ತೆಯು ಈಗ ಬಹು ಚರ್ಚಿತ ವಿಷಯವಾಗಿದ್ದು ಇದರ ಕ್ರಾಂತಿಯನ್ನು ಅಲಕ್ಷಿಸುವಂತಿಲ್ಲ, ಜಗತ್ತಿನ ಮುಂದುವರಿದ ರಾಷ್ಟ್ರಗಳು ಈ ಕ್ಷೇತ್ರದಲ್ಲಿ ದೊಡ್ಡ ಮೊತ್ತದ ಹೂಡಿಕೆಯ ಮುಂಚೂಣಿ ಯಲ್ಲಿದ್ದು ಭಾರತದಲ್ಲಿ 2027ರ ವೇಳೆಗೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸುಮಾರು 17 ಬಿಲಿಯನ್ ರುಪಾಯಿಗಳ ಹೂಡಿಕೆಯಾಗುವ ಯೋಜನೆ ಇದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಿಜಿಸ್ಟಾರ್ ಡಾ ಬಿ ಇ ರಂಗಸ್ವಾಮಿ ಹೇಳಿದರು.

ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ವಾಣಿಜ್ಯ ವಿಭಾಗದ ವತಿಯಿಂದ ಏರ್ಪಾಡಾಗಿರುವ “ಪ್ರಜ್ಞಾ” ‘ಕೃತಕ ಬುದ್ಧಿಮತ್ತೆ ಉದ್ಭವ ಹಾಗೂ ಅವಕಾಶಗಳ ರೂಪಾಂತರ’ ಎಂಬ ವಿಷಯವಾಗಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದರು.

1956ರಲ್ಲೇ ಕೆಲ ವಿಜ್ಞಾನಿಗಳು ಸಭೆ ಸೇರಿ ಯಂತ್ರಗಳೇ ಮಾನವ ರೀತಿಯಲ್ಲಿ ಕಾರ್ಯಗೈವ ಕೃತಕ ಬುದ್ಧಿಮತ್ತೆಯ ಅನ್ವೇಷಣೆ ಬಗ್ಗೆ ಚರ್ಚಿಸಿದ್ದರು, ಇದು ಈಗ ಅನುಷ್ಠಾನಕ್ಕೆ ಬರುತ್ತಿದ್ದು ಇದರಿಂದಾಗಿ ಮಾನವ ಉದ್ಯೋಗಗಳಿಗೆ ಸಂಚಕಾರ ಬರುತ್ತದೆ ಎಂಬ ಆತಂಕವಿದ್ದರೂ ಇದನ್ನೇ ಬಳಸಿ ಹೊಸ ಆವಿಷ್ಕಾರದ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳುವ ಅವಕಾಶವಿದ್ದು ಭವಿಷ್ಯದಲ್ಲಿ ನಮ್ಮ ದೇಶದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ನಾಲ್ಕುವರೆ ಲಕ್ಷಕ್ಕೂ ಹೆಚ್ಚು ಇಂಜಿನಿಯರ್ ಗಳು ಕಾರ್ಯನಿರ್ವಹಿಸಬಹುದಾಗಿದ್ದು ವಿಶ್ವದಲ್ಲಿ ಕೃತಕ ಬುದ್ಧಿಮತ್ತೆ ಕುರಿತಾದ 41 ಲಕ್ಷ ಪ್ರಕಟಣೆಗಳು ಹೊರಬಂದಿದ್ದರೆ ಭಾರತದಲ್ಲೇ ಸುಮಾರು 13 ಲಕ್ಷ ಪ್ರಕಟಣೆಗಳು ಬಂದಿವೆ. ಕೈಗಾರಿಕೋದ್ಯಮ ಕೃಷಿರಂಗವಲ್ಲದೇ ಅಡುಗೆ ಮನೆಯೊಳಗೂ ಸಹ ಕೃತಕ ಬುದ್ಧಿಮತ್ತೆಯ ಉಪಯೋಗ ಬರುವ ಕಾಲ ಸನ್ನಿಹಿತವಾಗಿದ್ದು ವೈದ್ಯಕೀಯ ಕ್ಷೇತ್ರದಲ್ಲೂ ಈಗಾಗಲೇ ಇದರ ಬಳಕೆಯಾಗುತ್ತಿದೆ.ಪ್ರಪಂಚದ 33 ದೇಶಗಳ ಸುಮಾರು 13 ಲಕ್ಷ ರೋಗಿಗಳು ಭಾರತಕ್ಕೆ ಬಂದು ಬೆಂಗಳೂರು ಚೆನ್ನೈ ಯಂತಹ ನಗರಗಳ ಆಸ್ಪತ್ರೆಗಳಲ್ಲಿ ಕೃತಕ ಬುದ್ಧಿಮತ್ತೆ ಸಹಕರಿತ ಚಿಕಿತ್ಸೆಯನ್ನು ಯಶಸ್ವಿಯಾಗಿ ಪಡೆದಿದ್ದಾರೆ ಎಂದರು.

ಸ್ವಾಗತ ಕೋರುತ್ತಾ ಪ್ರಾಕಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಹೆಚ್ ವಿ ವಾಣಿಜ್ಯೋದ್ಯಮ ಕೃಷಿ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ಅವಕಾಶದ ಕುರಿತು ವಿವರಿಸಿದರು.

ಈ ವಿಚಾರ ಸಂಕಿರಣದಲ್ಲಿ ರಾಜ್ಯದಾದ್ಯಂತದಿಂದ ಬಂದ ವಿದ್ಯಾರ್ಥಿಗಳು 50ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.

ಉಪಸ್ಥಿತರಿದ್ದು ಮಾತನಾಡಿದ ಪ್ರಾಂಶುಪಾಲ ಡಾ.ಬಿ. ವೀರಪ್ಪನವರು ಗಣಿತದಲ್ಲೂ ಉತ್ತಮ ತಿಳುವಳಿಕೆ ಇದ್ದಲ್ಲಿ ಮಾತ್ರ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋಧನೆ ಸಾಧ್ಯ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್ ವೀರಣ್ಣನವರು ಬರುವ ವರ್ಷದ ವೇಳೆಗೆ ಕೃತಕ ಬುದ್ಧಿಮತ್ತೆಯು ಶಿಕ್ಷಣದಲ್ಲೂ ಪ್ರಧಾನ ವಿಷಯವಾಗಬಹುದು, ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಕೃತಕ ಬುದ್ಧಿಮತ್ತೆಯ ಕ್ಷೇತ್ರದ ತಜ್ಞ ಇಂಜಿನಿಯರ್ ಗಳ
ಸಂಖ್ಯೆ ಕಡಿಮೆ ಇದೆ, ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಅಲ್ಲದೆ ಸಾಮಾನ್ಯ ಪದವಿಯಲ್ಲೂ ಕೃತಕ ಬುದ್ಧಿಮತ್ತೆಯ ಶಿಕ್ಷಣದ ಅಗತ್ಯವಿದೆ ಎಂದರು.

Bapuji Institute of Hi-Tech Education ಆದಿತ್ಯ ಎಮ್ ಕೆ ಮತ್ತು ಸಂಜನಾ ವಿ ಎನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಜ್ಞಾ ಎನ್ ಸಿ ಪ್ರಾರ್ಥನೆ ಹಾಡಿದರು ಮೆಹತಾಜ್, ಉಜ್ಮಾ ನಾಜ್ ಅತಿಥಿಗಳ ಪರಿಚಯ ಮಾಡಿದರು, ಮಂಜುನಾಥ್ ಬಿ ಬಿ, ಶ್ವೇತಾ ಬಿ ವಿ, ಲತಾ ಓ ಹೆಚ್, ನಾಗರಾಜ ಎಂ ಎಸ್, ಜ್ಞಾನೇಶ್ವರ ಸುಳಕೆ, ಕಾಂಚನ ಟಿ ಎಸ್, ನಿಶಾರಾಣಿ ಡಿ ಪಿ, ಮಂಜುಳಾ ಎ ಎನ್, ನರೇಂದ್ರ ಡಿ ಆರ್ ವಿಚಾರ ಸಂಕಿರಣದ ಸಹಯೋಜಕರಾಗಿದ್ದು ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ವಿಭಾಗದ ಶಿವಶಂಕರನಾಯಕ್ ಆಧುನಿಕ ನೀರಾವರಿ ವಿಧಾನ ಬಗ್ಗೆ, ಸ್ತ್ರೀ ಶಕ್ತಿ ಸಂಘದ ಸುಜಾತ ಅವರಗೊಳ್ಳ ಕೃಷಿ ತೋಟಗಾರಿಕೆಯಲ್ಲಿ ಡ್ರೋನ್ ಬಳಸಿ ಕೀಟನಾಶಕ ಸಿಂಪರಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

-ಚಿತ್ರ ಹಾಗೂ ವರದಿ: ಡಾ.ಎಚ್.ಬಿ.ಮಂಜುನಾಥ-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...