Thursday, March 19, 2026
Thursday, March 19, 2026

Hubballi Police ಪೊಲೀಸ್ ಪೇದೆ ಮತ್ತು ಮಹಿಳೆ ಈರ್ವರೂ ಒಂದೆಡೆ ಆತ್ಮಹತ್ಯೆ

Date:

Hubballi Police ಓರ್ವ ಮಹಿಳೆ ಜೊತೆ ಪೊಲೀಸ್ ಪೇದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನವನಗರದ ಶಿವಾನಂದನಗರದಲ್ಲಿ ನಡೆದಿದೆ.

ಮಹೇಶ್ ಹೆಸರೂರ್ (31), ವಿಜಯಲಕ್ಷ್ಮೀ ವಾಲಿ (30) ಮೃತ ದುರ್ದೈವಿಗಳು. ಮೃತ ಮಹೇಶ್ ಹೆಸರೂರ್ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿಯಾಗಿದ್ದು ಧಾರವಾಡದಲ್ಲಿ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ಮಾಡುತ್ತಿದ್ದ ಪೇದೆ.

ಇನ್ನು ಮೃತ ಮಹಿಳೆ ಚಿಕ್ಕ ಹೋಟೆಲ್ ಇಟ್ಟುಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇಬ್ಬರಿಗೂ ಸಂಬಂಧವಿತ್ತು ಎನ್ನಲಾಗಿದೆ.

ಪೊಲೀಸ್ ಪೇದೆ ವಿವಾಹಿತನಾಗಿದ್ದು, ಹೊಂದಾಣಿಕೆ ಆಗಿರಲಿಲ್ಲ. ಹೀಗಾಗಿ ಮೃತ ವಿಜಯಲಕ್ಷ್ಮಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.

Hubballi Police ಕಳೆದ ಒಂದು ವರ್ಷದ ಹಿಂದೆಯಷ್ಟೇ ಬಾಡಿಗೆ ಮನೆಗೆ ಬಂದಿದ್ದ ಕಾನ್ಸ್‌ಟೇಬಲ್.. ಮೃತ ಮಹಿಳೆಯೊಂದಿಗೆ ಪರಿಚಯವಾಗಿ ಸಂಬಂಧ ಹೊಂದಿದ್ದರು. ಆದರೆ ಯಾವ ಕಾರಣಕ್ಕೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ತಿಳಿದುಬಂದಿಲ್ಲ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಕೊಲೆ ಮಾಡಿ ನೇಣು ಹಾಕಿದ್ದಾರೋ ನಿಖರವಾಗಿ ತಿಳಿದುಬಂದಿಲ್ಲ. ಫೋಟೊದಲ್ಲಿ ಕಾಣಿಸುವ ಚಿಕ್ಕ ಬಾಟಲಿ ವಿಷದ ಬಾಟಲಿ ಇರುವ ಸಾಧ್ಯತೆ ಇದೆ. ಮೊದಲು ಮಹಿಳೆಗೆ ವಿಷ ಹಾಕಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...