Thursday, October 3, 2024
Thursday, October 3, 2024

K.S.Eshwarappa ಅಭ್ಯರ್ಥಿ ರಘುಪತಿ ಭಟ್ ಬೆಂಬಲಕ್ಕೆ ನಿಂತ ಈಶ್ವರಪ್ಪ ಬಣ

Date:

K.S.Eshwarappa ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧಿಸಿದ್ದಾರೆ. ಅವರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಬಲ‌ ನೀಡುವುದಾಗಿ ಈಶ್ವರಪ್ಪನವರ ನೇತೃತ್ವದ ರಾಷ್ಟ್ರಭಕ್ತ ಬಳಗ ಘೋಷಿಸಿದೆ.

ಈಶ್ವರಪ್ಪನವರ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರಭಕ್ತ ಬಳಗ ರಘುಪತಿ ಭಟ್ಗೆ ಬೆಂಬಲ‌ ನೀಡಿ, ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಲಾಯಿತು.

ಈ ವೇಳೆ ಮಾತನಾಡಿದ ರಾಷ್ಟ್ರಭಕ್ತ ಬಳಗದ ಕೆ. ಎಸ್ ಈಶ್ವರಪ್ಪನವರು, ರಘುಪತಿ ಭಟ್ ನಮ್ಮಂತೆ ಸಾಮಾನ್ಯ ಕಾರ್ಯಕರ್ತರು. ಅವರು ಪರಿಷತ್ಗೆ ಹೋಗಬೇಕು ಎಂದರು.‌

ಚುನಾವಣೆ ಅಂದ್ರೆ ಜಾತಿ ಕೇಳುತ್ತಾರೆ. ಅದು ಸಾಮಾನ್ಯವಾಗಿದೆ‌. ಜೀವನದಲ್ಲಿ ಜಾತಿ ಯಾವುದು ಅಂತ ಕಾಣದೇ ಇರುವ ವ್ಯಕ್ತಿ ಕೃಷ್ಣ, ಕನಕದಾಸ ಇಬ್ಬರ ಪ್ರತಿನಿಧಿಯಾಗಿ ರಘುಪತಿ ಭಟ್ ಬರುತ್ತಾರೆ. ಮೂರು ಜನ ಲಿಂಗಾಯತರು ನಿಂತಿದ್ದಾರೆ. ವೋಟು ಹಂಚಿ ಹೋಗುತ್ತದೆ. ಇದರಿಂದ ಬ್ರಾಹ್ಮಣ ಬರುತ್ತದೆ ಎಂಬ ಹುಚ್ಚು ಹುಚ್ಚು ಮಾತು‌ ಕೇಳಿದ್ದೇನೆ. ಮೂರು ಅಲ್ಲ 30 ಜನ ಲಿಂಗಾಯತರು ನಿಂತರೂ ಸಹ ಉಡುಪಿಯ ಕೃಷ್ಣ ಹಾಗೂ ಕನಕದಾಸರ ವಿಚಾರ ಒಪ್ಪುವಂತಹವರು ರಘುಪತಿ ಭಟ್ ಮತ ಹಾಕುತ್ತಾರೆ. ಇಲ್ಲಿ ಜಾತಿ ವಿಚಾರ ಇಲ್ಲ ಎಂದರು.
ರಘುಪತಿ ಭಟ್ ಗೆಲ್ಲುತ್ತಾರೆ. ಯಾವ ಜಾತಿ ಎಂದು ನೋಡದೇ ಪದವೀಧರರು ರಾಷ್ಟ್ರೀಯ ವಿಚಾರವಾದಿ ರಘುಪತಿ ಭಟ್ ಮತ ಹಾಕಿ ಎಂದರು.

ರಘುಪತಿ ಭಟ್ಗೆ ಇಂದು ನಾಳೆ ನೋಟಿಸ್ ಬರಬಹುದು. ಅವರಿಗೆ ನೋಟಿಸ್ ಬಂದ್ರೆ ನನಗೂ ಖುಷಿ ಆಗಬಹುದು ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. ಚುನಾವಣೆ ಹಿಂದಿನ ಎರಡು ದಿನದಲ್ಲಿ ನಕಲಿ ವಿಡಿಯೋ, ಆಡಿಯೋ ಕರಪತ್ರ ಬರಬಹುದು ಹುಷಾರಾಗಿರಿ ಎಂದರು. ರಘುಪತಿ ಹೆಜ್ಜೆ ಹಿಂದೆ ನಮ್ಮ ಹೆಜ್ಜೆ ಹಾಕುತ್ತೇವೆ. ರಾಜ್ಯದಲ್ಲಿ ಬಿಜೆಪಿ ಶುದ್ದೀಕರಣವಾಗಬೇಕು. ಜೊತೆಗೆ ರಘುಪತಿ ಭಟ್ ಗೆಲ್ಲಬೇಕು ಎಂದು ಹೇಳಿದರು.

ಹಿಂದೆ ಪಕ್ಷದಲ್ಲಿ ಎಲ್ಲ ತೀರ್ಮಾನವಾಗುತ್ತಿತ್ತು. ಆದರೆ ಈಗ ಅಪ್ಪ ಮಕ್ಕಳು ಮಾತ್ರ ತೀರ್ಮಾನ ಮಾಡುತ್ತಿದ್ದಾರೆ. ಬ್ರಹ್ಮ ಬಂದರೂ ಸಹ ರಘುಪತಿ ಭಟ್ ಗೆಲುವನ್ನು ತಡೆಯಲು ಆಗಲ್ಲ. ಎಲ್ಲ ಹಿಂದೂತ್ವವಾದಿಗಳ ಮನೆಗೆ ಹೋಗೋಣ ಮತ ಕೇಳೋಣ ಎಂದರು. ಆಯನೂರು ಮಂಜುನಾಥ್, ಯಡಿಯೂರಪ್ಪ ಎಷ್ಟು ಪಾರ್ಟಿಗೆ ಹೋಗಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ ಎಂದರು.

K.S.Eshwarappa ರಘುಪತಿ ಭಟ್ರು ರಾಷ್ಟೀಯವಾದಿಗಳು, ಅವರಿಗೆ ಒಂದು ವಿನಂತಿ ಏನಂದ್ರೆ ನೀವು ಗೆದ್ದ ಮೇಲೆ ಹೆಚ್ಚಿನ ಅನುದಾನ ನಮ್ಮ ಜಿಲ್ಲೆಗೆ ನೀಡಿ ಎಂದು ವಿನಂತಿಸಿಕೊಂಡರು. ಅತಿ ಹೆಚ್ಚು ಅಂತರದಲ್ಲಿ ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು. ಉಡುಪಿಗಿಂತ ಶಿವಮೊಗ್ಗ ಜಿಲ್ಲೆ ಹೆಚ್ಚಿನ ಲೀಡ್ ಕೊಡುತ್ತೇವೆ ಎಂದರು.

ನಾನು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿ, ಧನಂಜಯ್ ಸರ್ಜಿ ಬಿಜೆಪಿ ನಾಯಕರ ಅಭ್ಯರ್ಥಿ : ಬಿಜೆಪಿಯಲ್ಲಿ ಆಗುತ್ತಿರುವ ತಪ್ಪು ನಿರ್ಧಾರದ ಕುರಿತು ವರಿಷ್ಠರಿಗೆ ತಲುಪಿಸುವ ದೃಷ್ಟಿಯಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡಿ ಗೆಲ್ಲಬೇಕು ಅಂತ ಇದೆ ಅನ್ನಿಸುತ್ತದೆ. ನಾನು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ. ಧನಂಜಯ್ ಸರ್ಜಿ ಅವರು ಬಿಜೆಪಿ ನಾಯಕರ ಅಭ್ಯರ್ಥಿ ಎಂದು ಅಭ್ಯರ್ಥಿ ರಘುಪತಿ ಭಟ್ ಹೇಳಿದರು.

ಇಲ್ಲಿ ಪಕ್ಷದ ಚಿಹ್ನೆ ಇಲ್ಲದೇ ಇರುವುದು ನನ್ನ ಸ್ಪರ್ಧೆಗೆ ಅನುಕೂಲಕರವಾಗಲಿದೆ. ಪ್ರಜ್ಞಾವಂತ ಮತದಾರರು ಮತ ಚಲಾಯಿಸುತ್ತಾರೆ ಎಂದು ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ನಗರಸಭ ಚುನಾವಣೆ ಹಾಗೂ ಮೂರು ಬಾರಿ ಶಾಸಕನಾಗಿ ಒಟ್ಟು ನಾಲ್ಕು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಉಡುಪಿಯ ಕೃಷ್ಣ, ಅಯೋಧ್ಯೆಯ ಬಾಲರಾಮನ ಕೃಪೆ ನನ್ನ ಮೇಲೆ ಇದೆ ಎಂದರು.

ಹಿಂದೆ ಶಾಸಕನಾದಾಗ ನಾನು ಮಂತ್ರಿ ಹಾಗೂ ನಿಗಮ ಮಂಡಳಿಯ ಸ್ಥಾನವನ್ನೂ ಕೇಳಲಿಲ್ಲ. ನನಗೆ ಟಿಕೆಟ್ ಸಿಗದೇ ಹೋದಾಗ ಯಾವ ನಾಯಕರು ಮಾತನಾಡಲಿಲ್ಲ. ಇದುವರೆಗೂ ಸರ್ಜಿ ಅವರು ಸೌಜನ್ಯಕ್ಕೂ ಸಹ ನನ್ನೊಂದಿಗೆ ಮಾತನಾಡಿಲ್ಲ. ನಾನು ಪದವೀಧರ ಕ್ಷೇತ್ರದ ನೊಂದಣಿ ಮಾಡಿಸಿದ್ದೆ. ಈಶ್ವರಪ್ಪನವರು ನನ್ನ ಗೆಲುವಿನ ಪೂರ್ಣ ಶಕ್ತಿ ಎಂದು ಹೇಳಿದರು.

ನಾನು ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಭಕ್ತ ಬಳಗದ ವಿರುದ್ದ ಚುನಾವಣೆಯಲ್ಲಿ ಸ್ಫರ್ಧಿಸಿದರೂ ಸಹ ನೀವು ಪರಿಷತ್ ಚುನಾವಣೆಯಲ್ಲಿ ನನಗೆ ಬೆಂಬಲಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದರು. ನನಗೆ ಈ ಚುನಾವಣೆಯಲ್ಲಿ ಯಾರು ಬೆಂಬಲಿಸುತ್ತಾರೋ ಅವರನ್ನು ನಾನು ಜೀವಮಾನದಲ್ಲಿ ಮರೆಯುವುದಿಲ್ಲ ಎಂದರು‌.‌

ನಾನು ಗೆದ್ದ ಮೇಲೆ ಕ್ಷೇತ್ರದ ಪದವೀಧರ ಮತದಾರರ ಪರವಾಗಿ ಇರುತ್ತೇನೆ ಎಂದರು. ಚುನಾವಣೆಗೆ ಹೆಚ್ಚಿನ ಸಮಯ ಇಲ್ಲದ ಕಾರಣ ನೀವೇ ಅಭ್ಯರ್ಥಿಯಾಗಿ ಕೆಲಸ ಮಾಡಿ ಎಂದು ವಿನಂತಿಸಿಕೊಂಡರು. ಈ ವೇಳೆ ರಾಷ್ಟ್ರಭಕ್ತ ಬಳಗದ ಸದಸ್ಯರು, ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...