Akhila Karnataka Brahmin Mahasabha ಬದುಕಿಗೆ ಆದರ್ಶರಾಗಿರುವ ಮಾತಾಪಿತೃಗಳ ಜೀವನದ ಸಂಧ್ಯಾಕಾಲದಲ್ಲಿ ಅವರನ್ನು ಗೌರವದಿಂದ ನೋಡಿಕೊಳ್ಳುವ ಅವರ ಸೇವೆ ಮಾಡುವ ಸೌಭಾಗ್ಯದಿಂದ ವಂಚಿತರಾಗದಂತೆ ಸಮೀಪದಲ್ಲಿಯೇ ಉದ್ಯೋಗ ನಿರ್ವಹಿಸುವಂತಹ ವಾತವರಣ ಸೃಷ್ಟಿಯಾಗಬೇಕು.ಯುವ ಪೀಳಿಗೆ ಈ ದಿಕ್ಕಿನಲ್ಲಿ ಚಿಂತಿಸಬೇಕೆಂದು ಎಂದು ಕರ್ನಾಟಕದ ಉಚ್ಚನ್ಯಾಯಾಲಯದ ನ್ಯಾಯವಾದಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಅವರು ಸಾಗರ ಸಮೀಪದ ಐತಿಹಾಸಿಕ ಕ್ಷೇತ್ರ ಇಕ್ಕೇರಿ ರಾಮಭಟ್ಟರ ಮನೆ ಅಂಗಳದಲ್ಲಿ ಹೈಕೋರ್ಟ್ ನ್ಯಾಯವಾದಿ೦ ಆರ್.ಗೋಪಾಲಭಟ್ಟರು ಹಾಗೂ ಕುಟುಂಬದವರಿಂದ ಆಯೋಜಿಸಲಾಗಿದ್ದ “ಕಾಯಕ ಯೋಗಿ ಇಕ್ಕೇರಿ ರಾಮಭಟ್ಟರ ನೆನಪಿನ ಗ್ರಂಥ”ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ನುಡಿದಂತೆ ನಡೆಯು ವ ಮೂಲಕ ಸಮುದಾಯದ ಹಿಂದಿನ ಸಾಂಸ್ಕೃತಿಕ ಸಂಸ್ಕಾರಯುತ ಬಾಂಧವ್ಯದ ಬದುಕಿನಿಂದ ಮಾತ್ರ ಹವ್ಯಕ ಸಂಸ್ಕೃತಿ ಶ್ರೀಮಂತವಾಗಲಿದೆ. ಸಮಾಜದಲ್ಲಿ ಬಹುಮುಖಿ ವ್ಯಕ್ತಿತ್ವದ ಆದರ್ಶ ವ್ಯಕ್ತಿಯಾಗಿ ಬದುಕಿದ ಇಕ್ಕೇರಿ ರಾಮಭಟ್ಟರ ಜೀವನ ಅನುಕರಣೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
Akhila Karnataka Brahmin Mahasabha ಪ್ರಸ್ತುತ ರಾಮಭಟ್ಟರಂತಹ ಆದರ್ಶ ವ್ಯಕ್ತಿಗಳ ಕಳೆದುಕೊಂಡಿರುವ ನಮ್ಮ ಸಮುದಾಯ ಸ್ಥಳಿಯವಾಗಿ ಸಂಸ್ಕಾರಯುತ ಸಂಸಾರದ ಮಾರ್ಗದರ್ಶನದ ಕೊರತೆ ಎದುರಿಸುವಂತಾಗಿದೆ.ಯುವ ಪೀಳಿಗೆ ವಿದೇಶಗಳ ಉದ್ಯೋಗ ಎಂಬ ಬಿಸಿಲುಕುದುರೆ ಏರಿ ದೂರ ಸರಿಯುತ್ತಿರುವ ಕಾರಣ ಇಲ್ಲಿನ ಮಾತ-ಪಿತೃಗಳ ಯೋಗಕ್ಷೇಮ ನೋಡುವವರಿಲ್ಲದೇ ಅತ್ಯಂತ ಅಪಾಯದ ಸ್ಥಿತಿಯಲ್ಲಿ ಗ್ರಾಮೀಣ ಜನಜೀವನ ಸಂಸ್ಕೃತಿ ಸಂಸ್ಕಾರಗಳ ಕೊರತೆಯಿಂದ ನಲುಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಂಸ್ಕೃತ ಅಧ್ಯಾಪಕ ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟಾ ಪುಸ್ತಕದ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ವೇದಮೂರ್ತಿ ನಾಗೇಂದ್ರಭಟ್ಟರು ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಮೆಸ್ಕಾಂ ನಿವೃತ್ತ ಇಂಜಿನಿಯರ್ ಡಾ.ಗಜಾನನ ಶರ್ಮ ಹುಕ್ಕಲು, ವೇದಮೂರ್ತಿ ನರಹರಿಭಟ್ಟರು, ಲೇಖಕ ಗೃಂಥ ಕತೃ ತಿರುಮಲ ಮಾವಿನಕುಳಿ, ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ರಾಮಭಟ್ಟರ ಪುತ್ರ ಆರ್.ಗೋಪಾಲ್,ಡಾ.ಎಂ.ಆರ್.ಹೆಗಡೆ ಉಪಸ್ಥಿತರಿದ್ದರು.