Monday, February 2, 2026
Monday, February 2, 2026

Bhadravati Police ಮುದ್ದಿನ ಅಜ್ಜಿಯನ್ನ ಹಣದಾಸೆಗೆ ಮೊಮ್ಮಗನೇ ಕೊಂದ ಘಟನೆ

Date:

Bhadravati Police ಹಣಕ್ಕಾಗಿ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಅಂತರಗಂಗೆಯಲ್ಲಿ ನಡೆದಿದೆ.
ಅಂತರಗಂಗೆಯ ಭೋವಿಕೇರಿಯಲ್ಲಿ ರಾಮಕ್ಕ (72 ) ನನ್ನು ಮೊಮ್ಮಗನೇ ಹೊಂಚು ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಅಜ್ಜಿಯ ಸೊಂಟದಲ್ಲಿದ್ದ 20 ಸಾವಿರ ರೂ ಮತ್ತು ಕಿವಿ ಓಲೆ ಕಿತ್ತುಕೊಂಡು ಹೋಗಿದ್ದಾನೆ.

ಈ ಸಂಬಂಧ ಮೊಮ್ಮಗ ಚೇತನ್, ಭರತ್, ರೋಹಿತ್, ಆದರ್ಶ ವಿರುದ್ಧ ದೂರು ದಾಖಲಾಗಿದೆ.‌
ರಾಮಕ್ಕನವರ ಮಗ ಗೋವಿಂದ ಜೆಸಿಬಿ ಖರೀದಿಸಿದ್ದು, ಅದರ ಸಾಲದ ಕಂತು ಕಟ್ಟಲು ಅಮ್ಮನ ಬಳಿ 20 ಸಾವಿರ ಕಂತು ಹಣ ನೀಡಿ ಗೋವಿಂದ ದಾವಣಗೆರೆಗೆ ಹೋದಾಗ ಈ ಕೊಲೆ ಸಂಭವಿಸಿದೆ.

ಈ ಕೊಲೆಗೆ ಚೇತನ್, ಭರತ್, ರೋಹಿತ್, ಆದರ್ಶ ಕಾರಣವೆಂದು ಗೋವಿಂದ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚೇತನ್ ರಾಮಕ್ಕನವರ ಮಗ ಹನುಮಂತಪ್ಪನ ಮಗ ಆಗಿದ್ದಾನೆ. ಮೈತುಂಬ ಸಾಲ ಮಾಡಿಕೊಂಡಿದ್ದ ಚೇತನ್ ಅಜ್ಜಿಯ ಬಳಿ ಹಣವಿರುವುದನ್ನು ಗಮನಿಸಿದ್ದನು.

Bhadravati Police ತಂದೆ ಹನುಮಂತಪ್ಪನವರನ್ನು ಸ್ನೇಹಿತರೊಂದಿಗೆ ಪಾರ್ಟಿಗೆ ಕಳುಹಿಸಿ ಅಜ್ಜಿ ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ದೂರಿನಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...