Kuvempu University ಎನ್ ಎಸ್ ಎಸ್ ಜೀವನ ಪ್ರೀತಿಯನ್ನು ಕಲಿಸುತ್ತದೆ. ಹೆಣ್ಣು- ಗಂಡು ಎಂಬ ಬೇಧ ಭಾವಗಳಿಲ್ಲದೆ ಲಿಂಗಸಮಾನತೆಯನ್ನು ಅರಿಯಲು ಸಹಾಯವಾಗುತ್ತದೆ .ಮಾನವೀಯ ಸಂಬಂಧಗಳು ಆ ಮೂಲಕ ಗಟ್ಟಿಯಾಗಲು ನೆರವಾಗುತ್ತವೆ. ಆದ್ದರಿಂದ ರಾಸೇಯೋನಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಿ ಎಂದು ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಹೇಳಿದರು.
ವಿಶೇಷ ಶಿಬಿರಗಳಲ್ಲಿ ಭಾಗವಹಿಸುವುದರ ಮೂಲಕ ಹಲವಾರು ವಿಚಾರಗಳನ್ನು ಕಲಿಯಲು ಸಧ್ಯವಾಗುತ್ತದೆ.
ಅವರು ನಗರದ ಪಿಇಎಸ್‌ಐಎಎಮ್‌ಎಸ್ ಕಾಲೇಜಿನವರು ಹಾರನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ೭ ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
Kuvempu University ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಶಿಸ್ತು, ಸಂಯಮ, ಸಹಬಾಳ್ವೆ, ಸಹಕಾರ ಮೊದಲಾದ ಮೌಲ್ಯಗಳನ್ನು ಕಲಿಸುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಸಂಪೂರ್ಣ ನೆರವಾಗುತ್ತದೆ ಎಂದರು.
Kuvempu University ಎನ್ ಎಸ್ ಎಸ್ ಜೀವನ ಪ್ರೀತಿ ಕಲಿಸುತ್ತದೆ - ಡಾ.ಶುಭಾ ಮರವಂತೆ
Date: