Akshara Foundation ಇಂದಿನ ಶೈಕ್ಷಣಿಕ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತದ ಮೂಲಭೂತ ಪಾಠಗಳನ್ನು ಕಲಿಯಲು ತೀರಾ ಕಡಿಮೆ ಅವಕಾಶವಿದ್ದು ಈ ಹಿನ್ನೆಲೆಯಲ್ಲಿ ಗಣಿತ ಕೌಶಲ್ಯವನ್ನು ಉತ್ತಮಪಡಿಸಲು ಅಕ್ಷರ ಫೌಂಡೇಶನ್ ತಯಾರಿಸಿರುವ ‘ಬಿಲ್ಡಿಂಗ್ ಬ್ಲಾಕ್ಸ್ ಆ್ಯಪ್’ ನ್ನು ಮಕ್ಕಳಿಗಾಗಿ ತರಲಾಗಿದೆ.
ಈ ಚಟುವಟಿಕೆ ಆಧಾರಿತ ತಂತ್ರಾಂಶದಲ್ಲಿ ಪಠ್ಯಾಧಾರಿತ 1 ರಿಂದ 5 ಮತ್ತು 6 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳ ಗಣಿತ ಕಲಿಕೆಗೆ 2 ವಿಭಾಗಗಳಲ್ಲಿ ಅವಕಾಶ ನೀಡಲಾಗಿದೆ. ಆಟದ ಮೂಲಕ ಅಭ್ಯಾಸ ಮಾಡುವುದರಿಂದ ಶಾಶ್ವತ ಕಲಿಕೆ ಉಂಟಾಗುತ್ತದೆ. ಮಕ್ಕಳಿಗೆ ಗಣಿತದಲ್ಲಿ ಪರಿಣಿತಿ ಪಡೆಯಲು ಬೇಕಾದ ಕೌಶಲ್ಯ ಮತ್ತು ಆತ್ಮಸ್ಥೈರ್ಯ ಮೂಡಿಸಲು ಸಾಂಪ್ರದಾಯಿಕ ಕಲಿಕೆಗೆ ವಿಭಿನ್ನವಾಗಿ ಈ ಆ್ಯಪ್ ಸಿದ್ದಪಡಿಸಲಾಗಿದೆ.
Akshara Foundation ಗಣಿತ ಕಲಿಕೆಯನ್ನು ಎಲ್ಲ ಮಕ್ಕಳಿಗೂ ದೊರೆಯುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಇದು 400 ಕ್ಕೂ ಹೆಚ್ಚು ಸಂವಾದಾತ್ಮಕ ಆಟಳಗಳನ್ನು ಒಳಗೊಂಡಿದ್ದು ಎಲ್ಲ ಆಟಗಳನ್ನು ಎನ್‍ಸಿಇಆರ್‍ಟಿ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕಲಿಕೆಯಲ್ಲಿ ಅಭಿವೃದ್ದಿ ಹೊಂದಬೇಕು. ಈ ಆ್ಯಪ್ ಎಲ್ಲ ಆಂಡ್ರಾಯ್ಡ್ ಫೋನ್‍ಗಳಲ್ಲೂ ಲಭ್ಯವಿದೆ. ಅಪ್ಲಿಕೇಷನ್ ಡೌನ್‍ಲೋಡ್‍ಗಾಗಿ ಲಿಂಕ್ http://play.google.com/store/apps/details?id=com.akshara.easymath&hl+en IN&gl=US&pli+1 ನ್ನು ನೋಡಬಹುದಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕ(ಅಭಿವೃದ್ದಿ) ಬಸವರಾಜಪ್ಪ ತಿಳಿಸಿದ್ದಾರೆ.