Wednesday, November 27, 2024
Wednesday, November 27, 2024

Lok sabha Elections 2024 ವೋಟ್ ಮಾಡಿದ್ದು ಸೈಕಲ್ ಚಿನ್ಜೆಗೆ.‌ಆದರೆ ವಿವಿಪ್ಯಾಟ್ ತೋರಿಸಿದ್ದು‌ ಕಮಲ ಚಿನ್ಹೆ! ಮತದಾರರ ದೂರು- ಸಂಶಯ ದೂರಮಾಡಿದ ಚುನಾವಣಾಧಿಕಾರಿಗಳು

Date:

Lok sabha Elections 2024 ಉತ್ತರಪ್ರದೇಶದ ಲಕೀಮ್‌ಪುರ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಇವಿಎಂನಲ್ಲಿ ವಂಚನೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಸೈಕಲ್‌ ಚಿಹ್ನೆಗೆ ಮತ ಹಾಕಿದ್ರೆ ವಿವಿಪ್ಯಾಟ್‌ನಲ್ಲಿ ಕಮಲಕ್ಕೆ ಬಿದ್ದಿದೆ ಎಂದು ಮತದಾರರೋರ್ವರು ಆರೋಪಿಸಿದ್ದಾರೆ.

ಈ ಕುರಿತ ಆರೋಪದ ವಿಡಿಯೋ ವೈರಲ್‌ ಆಗಿದ್ದು, ನಾನು ಇವಿಎಂ ಮೆಷಿನ್‌ನಲ್ಲಿ ಸಮಾಜವಾದಿ ಪಕ್ಷದ ಸೈಕಲ್‌ ಚಿಹ್ನೆಗೆ ಮತವನ್ನು ಹಾಕಿದ್ದೇನೆ, ಆದರೆ ವಿವಿ ಪ್ಯಾಟ್‌ನಲ್ಲಿ ಬಿಜೆಪಿಯ ಕಮಲದ ಚಿಹ್ನೆ ತೋರಿಸಿದೆ.

ಯಾವುದೇ ಬಟನ್‌ ಒತ್ತಿದರೂ ವಿವಿಪ್ಯಾಟ್‌ನಲ್ಲಿ ಕಮಲದ ಚಿಹ್ನೆ ತೋರಿಸುತ್ತಿದೆ ಎಂದು ಮತದಾರರೋರ್ವರು ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ‘ಇವಿಎಂ’ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಇವಿಎಂ ಬಗ್ಗೆ ಜನರಲ್ಲಿ ಭುಗಿಲೆದ್ದಿರುವ ಸಂಶಯದ ಮಧ್ಯೆ ನಡೆದಿರುವ ಈ ಬೆಳವಣಿಗೆ ಇವಿಎಂ ಪಾರದರ್ಶಕತೆ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ವೋಟರ್-ವೆರಿಫೈಡ್ ಪೇಪರ್ ಆಡಿಟ್ ಟ್ರೈಲ್(ವಿವಿಪ್ಯಾಟ್ ) ಮತದಾರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ ಅಥವಾ ಪರಿಶೀಲಿಸಬಹುದಾದ ಪೇಪರ್ ರೆಕಾರ್ಡ್(VPR) ಮತದಾನ ವ್ಯವಸ್ಥೆಯನ್ನು ಬಳಸಿಕೊಂಡು (ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್) ಮತದಾರರಿಗೆ ಪ್ರತಿಕ್ರಿಯೆ ನೀಡುವ ಒಂದು ವಿಧಾನವಾಗಿದೆ.

Lok sabha Elections 2024 ವಿವಿಪ್ಯಾಟ್ ಗಳನ್ನು ಮತಯಂತ್ರಗಳಿಗೆ ಜೋಡಿಸಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್‌ನಲ್ಲಿ ಮತದಾನ ಮಾಡಿದ ತಕ್ಷಣ ಯಾವ ಅಭ್ಯರ್ಥಿಗೆ ಮತ್ತು ಪಕ್ಷಕ್ಕೆ ಮತ ಹಾಕಿದ್ದೇವೆ ಎನ್ನುವುದನ್ನು ತೋರಿಸುವ ಪ್ರಿಂಟ್ ಚೀಟಿಯೊಂದು ವಿವಿಪ್ಯಾಟ್ ಕಿಂಡಿಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅದರಲ್ಲೇ ಸಂಗ್ರಹವಾಗುತ್ತದೆ.

ಮತ ಎಣಿಕೆ ವೇಳೆ ಮತಯಂತ್ರದಲ್ಲಿ ದೋಷ, ಗೊಂದಲ ಕಂಡು ಬಂದಲ್ಲಿ ವಿವಿಪ್ಯಾಟ್ ಬಾಕ್ಸ್ ನಲ್ಲಿ ದಾಖಲಾದ ಮತಗಳನ್ನು(ಪ್ರಿಂಟ್ )ಎಣಿಕೆ ಮಾಡಬಹುದಾಗಿದೆ. ಚುನಾವಣಾ ವಂಚನೆ ಅಥವಾ ಅಸಮರ್ಪಕ ಕಾರ್ಯಾಚರಣೆಯನ್ನು ಪತ್ತೆಹಚ್ಚಲು ಮತ್ತು ಸಂಗ್ರಹಿಸಿದ ಎಲೆಕ್ಟ್ರಾನಿಕ್ ಫಲಿತಾಂಶಗಳನ್ನು ಆಡಿಟ್ ಮಾಡಲು, ಮತದಾರರು ತಮ್ಮ ಮತವನ್ನು ಸರಿಯಾಗಿ ಚಲಾಯಿಸಿರುವುದನ್ನು ಪರಿಶೀಲಿಸಲು ಮತದಾನ ಮಾಡುವ ಯಂತ್ರಗಳಿಗೆ ಸ್ವತಂತ್ರ ಪರಿಶೀಲನೆ ವ್ಯವಸ್ಥೆಯಾಗಿ ವಿವಿಪ್ಯಾಟ್ ಬಳಸಲಾಗುತ್ತದೆ.

ಇದು ಮತಗಳನ್ನು ಬದಲಾಯಿಸುವ ಅಥವಾ ನಾಶಮಾಡುವ ಹೆಚ್ಚುವರಿ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yuvanidhi Scheme ಯುವನಿಧಿ ಯೋಜ‌‌ನೆಗೆ ಆನ್ ಲೈನ್ ನೋಂದಾಯಿಸಲು ಆಹ್ವಾನ

Yuvanidhi Scheme ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣೆ ಚಾಲ್ತಿಯಲ್ಲಿದ್ದು, ಅರ್ಹರು...

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...

Shivamogga-Bhadravathi Urban Development Authority ಊರುಗಡೂರು ನಿವೇಶನ ಹಂಚಿಕೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿ.5 ಅಂತಿಮ ದಿನಾಂಕ

Shivamogga-Bhadravathi Urban Development Authority ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ...