Mamata Banerjee ಪಶ್ಚಿಮ ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲ್ಲವೂ ಹೊರಬಿದ್ದಿಲ್ಲ, ನನಗೆ ಪೆನ್ ಡ್ರೈವ್ ಸಿಕ್ಕಿದೆ. ಆನಂದ ಬೋಸ್ ರಾಜೀನಾಮೆ ನೀಡಬೇಕು, ನಾನು ರಾಜಭವನಕ್ಕೆ ಹೋಗುವುದಿಲ್ಲ ಮತ್ತು ಬೋಸ್ ಅವರ ಪಕ್ಕದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Mamata Banerjee ಹೂಗ್ಲಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ರಾಜಭವನಕ್ಕೆ ತೆರಳಿ ನಾನು ರಾಜ್ಯಪಾಲರನ್ನು ಭೇಟಿ ಮಾಡುವುದಿಲ್ಲ. ಅವರು ನನಗೆ ಕರೆ ಮಾಡಿದರೆ, ನಾನು ರಸ್ತೆಯಲ್ಲಿ ನಿಂತು ಅವರೊಂದಿಗೆ ಮಾತನಾಡುತ್ತೇನೆ, ಗೌರವಾನ್ವಿತ ರಾಜ್ಯಪಾಲರೇ, ನೀವು ರಾಜೀನಾಮೆ ನೀಡಬೇಕು, ಮಹಿಳೆಗೆ ಚಿತ್ರಹಿಂಸೆ ನೀಡಲು ನೀವು ಯಾರು? ಎಲ್ಲವೂ ಇನ್ನೂ ಹೊರಬಿದ್ದಿಲ್ಲ ನನಗೆ ಸಂಪೂರ್ಣ ವೀಡಿಯೊ ಮತ್ತು ಪೆನ್ ಡ್ರೈವ್ ಸಿಕ್ಕಿದೆ. ಇದು ಹಗರಣವಾಗಿದೆ ಎಂದು ಹೇಳಿದ್ದಾರೆ.
ಮೇ 7ರಂದು ಮೂರನೇ ಹಂತದ ಚುನಾವಣೆ ಮುಗಿದ ನಂತರ ಬಿಜೆಪಿ ಚುನಾವಣಾ ದುರಂತದ ವಾಸನೆಯನ್ನು ಗ್ರಹಿಸಿದೆ. ಮೂರನೇ ಹಂತದ ಮತದಾನದ ನಂತರ ಅವರು ಅಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಮಮತಾ ಹೇಳಿದ್ದಾರೆ.