Monday, February 2, 2026
Monday, February 2, 2026

Kundadri ಕುಂದಾದ್ರಿ ಪ್ರಪಾತಕ್ಕೆ ಧುಮುಕಲು ಬಂದ ಯುವಕನನ್ನ ಬದುಕಿಸಿದ ಘಟನೆ

Date:

Kundadri ಭದ್ರಾವತಿಯವನು ಎನ್ನಲಾದ ಯುವಕನ್ನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ನಿಶ್ಚಯಿಸಿ ಆಗುಂಬೆ ಸಮೀಪದ ಕುಂದಾದ್ರಿ ಪರ್ವತಕ್ಕೆ ಬಂದಿರುವ ವಿಷಯ ಅರಿತ ಸ್ಥಳೀಯ ಯುವಕರು ಆತನನ್ನು ರಕ್ಷಿಸಿ ಮನೆಗೆ ಕಳುಹಿಸಿದ ಘಟನೆ ವರದಿಯಾಗಿದೆ. ಈ ಯುವಕ
ಕುಂದಾದ್ರಿಯಲ್ಲಿ ಅನುಮಾನ ಬರುವ ಹಾಗೆ ಸಂಚರಿಸುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದವರು ಅಲ್ಲಿನ ದೇವಸ್ಥಾನದ ಅರ್ಚಕರಿಗೆ ಮಾಹಿತಿ ನೀಡಿದ್ದರು.
Kundadri ಕುಂದಾದ್ರಿ ಬೆಟ್ಟದ ಪ್ರಪಾತಕ್ಕೆ ಅಭಿಮುಖವಾಗಿ ಯುವಕನೊಬ್ಬ ಕೂತಿರುವ ಬಗ್ಗೆ ದೇವಸ್ಥಾನದ ಅರ್ಚಕ ಶಾಂತಿನಾಥ್ ಭಟ್ಟರು ಗಮನಿಸಿ ಸ್ಥಳೀಯ ಯುವಕರಾದ ಸೌಕಿನ್ ಹಳ್ಳಿ ಬೈಲು, ಸಂಜು ನಾಬಳ, ಸೃಜನ್ ಹಂಡಿಗೆ,ಮಣಿಕಂಠ ,ಹರೀಶ್ ಜೋಗಿತೋಟ, ಸುಮಂತ್, ರಾಹುಲ್ ವಾರಳಿ ಜೊತೆ ಬೆಟ್ಟಕ್ಕೆ ತೆರಳಿ ನಾಜೂಕಾಗಿ ಯುವಕನನ್ನು ರಕ್ಷಿಸಿ ದ್ದಾರೆ.
ಬೆಟ್ಟದಿಂದ ಕೆಳಗಿಳಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಅರ್ಚಕರ ಮತ್ತು ಸ್ಥಳೀಯ ಯುವಕರ ಸಮಯ ಪ್ರಜ್ಞೆ ಮತ್ತು ಶೀಘ್ರ ಕಾರ್ಯಾಚರಣೆಗೆ ಯುವಕನ ಪೋಷಕರು ಧನ್ಯವಾದಗಳು ಅರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...