JNNCE ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಯಾದ ಜೆ.ಎನ್.ಎನ್.ಸಿ. ಇ, ಕಾಲೇಜಿನ ಎಂಬಿಎ ವಿಭಾಗವು 16.05.2024, ಗುರುವಾರದಂದು ಒಂದು ದಿನದ ರಾಜ್ಯಮಟ್ಟದ ಅಂತರ ಕಾಲೇಜು ಸಂಶೋಧನಾ ಕ್ರೀಡಾ ಸಾಂಸ್ಕೃತಿಕ ಉತ್ಸವ “ಉತ್ಥಾನ -2K24” ಅನ್ನು ಆಯೋಜಿಸಿದೆ.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಸೃಜನಶೀಲತೆ ಕ್ರಿಯಾತ್ಮತೆಯನ್ನು ಬೆಳಕಿಗೆ ತರಲು ಸಹಕಾರಿಯಾಗಿದೆ.
ಸತತ ಕಳೆದ ಎಂಟು ವರ್ಷಗಳಿಂದ ಉತ್ಥಾನದ ವಿವಿಧ ಆವೃತ್ತಿಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಈ ಎಲ್ಲಾ ಆವೃತ್ತಿಗಳಲ್ಲಿ ಸಾವಿರಕ್ಕೂ ಮೀರಿ ವಿದ್ಯಾರ್ಥಿಗಳು ಪ್ರತಿ ವರ್ಷವೂ ಪಾಲ್ಗೊಳ್ಳುತ್ತಾರೆ. ಈ ವರ್ಷವೂ ಸಹ ಈ ಉತ್ಸವದಲ್ಲಿ ಭಾಗವಹಿಸಲು ಈಗಾಗಲೇ ಹಲವಾರು ವಿದ್ಯಾರ್ಥಿಗಳು ಕಾಲೇಜುಗಳಿಂದ ನೊಂದಣಿಯನ್ನು ಮಾಡಿರುತ್ತಾರೆ.
JNNCE ಈ ಕಾರ್ಯಕ್ರಮದಲ್ಲಿ ರಸಪ್ರಶ್ನೆ, ವೃಂದಗಾನ, ಸಮೂಹ ನೃತ್ಯ, ಸ್ಮಾರ್ಟ್ ಟ್ಯಾಂಕ್, ಫೇಸ್ ಪೇಂಟಿಂಗ್, ಟ್ರೆಶರ್ ಹಂಟ್, ವಿದ್ಯಾರ್ಥಿ ಸಂಶೋಧನಾ ಪ್ರಬಂಧಗಳ ಮಂಡನೆ, ಮೈಮ್, ಶಟಲ್ ಬ್ಯಾಡ್ಮಿಂಟನ್ ಹಾಗೂ ವಾಲಿಬಾಲ್ ಪಂದ್ಯಗಳನ್ನು ಆಯೋಜಿಸಿದೆ ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭಾನ್ವೇಷಣೆಯಲ್ಲಿ ಈ ಪಂದ್ಯಗಳು ಸಹಕರಿಸುತ್ತವೆ. ರಾಷ್ಟ್ರೀಯ ಆಡಳಿತ ಮಂಡಳಿಯ ಕಾರ್ಯಕಾರಿ ಸದಸ್ಯರೊಡನೆ ಪ್ರಸಿದ್ಧ ನಟಿಯಾದ ಕೂ. ನಿಧಿ ಸುಬ್ಬಯ್ಯ, ಕು. ರೆಚೆಲ್ ಡೇವಿಡ್, ಶ್ರೀ. ಋತ್ವಿಕ್ ಮುರುಳಿಧರ್ ಹಾಗೂ ನಿರ್ದೇಶಕರಾದ ಶ್ರೀ.ಆನಂದ್ ರಾಜ್ ರವರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸ್ಪರ್ಧೆಯಲ್ಲಿ ಕಾಲೇಜಿನ ಪ್ರಾಂಶುಪಾಲರ ಅನುಮತಿ ಪತ್ರದೊಂದಿಗೆ ಬರುವ ಎಲ್ಲಾ ಪದವಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬಹುದು. ಒಂದು ತಂಡದಲ್ಲಿ ಒಟ್ಟು 39 ಜನ ವಿದ್ಯಾರ್ಥಿಗಳು ಭಾಗವಹಿಸಬಹುದು.
ಆಸಕ್ತ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಬೋಧಕ ವರ್ಗದವರು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಕಾರ್ಯಕ್ರಮದ ಆಯೋಜಕರನ್ನು ಸಂಪರ್ಕಿಸಬಹುದು
JNNCE ಜೆಎನ್ ಎನ್ ಸಿ ಇ ಕಾಲೇಜಿನಲ್ಲಿ ಮೇ 16ರಂದು “ಉತ್ಥಾನ-2K24” ಉತ್ಸವ
Date: