B.Y.Raghavendra ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಚುನಾವಣೆ ಯಶಸ್ಸಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಕಾರಣ.ಈ ಬಾರಿಯ ಚುನಾವಣೆ ಹಲವು ರೀತಿಯ ವಿಶೇಷತೆಯಿಂದ ಕೂಡಿತ್ತು.
ವಿಕಸಿತ ಭಾರತಕ್ಕಾಗಿ ಈ ಬಾರಿ ಚುನಾವಣೆ ನಡೆದಿದೆ ಎಂದು ತಿಳಿಸಿದರು.
ಒಂದು ದಶಕದ ಹಿಂದೆ ಮೇಲೆದ್ದ ಭಾರತವನ್ನು ಸದೃಢವನ್ನಾಗಿ ಮಾಡಲು ಮತ ಚಲಾಯಿಸಿದ್ದಾರೆ.ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಘೋಷಣೆಗೆ ಮತದಾರರು ಕೈ ಜೋಡಿಸಿದ್ದಾರೆ.ಇನ್ನೊಂದೆಡೆ ದೇಶದ ಏಳಿಗೆಯನ್ನು ಸಹಿಸದ ವಿಚ್ಛಿದ್ರಕಾರಿ ಶಕ್ತಿಗಳು ತಲೆ ಎತ್ತದಂತೆ ಬೆಂಬಲ ನೀಡಿದ್ದಾರೆ ಎಂದರು.
ಇದಕ್ಕಾಗಿ ಶ್ರಮ ವಹಿಸಿದ ಸಂಘಟನೆಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ.
1952ರಿಂದ 2019ರ ತನಕ ನಡೆದ ಮತದಾನಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ.
ಈ ಬಾರಿ 78.32 ರಷ್ಟು ಮತದಾನವಾಗಿದೆ.
ಮೋದಿಯ ಸಂಕಲ್ಪಕ್ಕೆ ಜನರು ಕೈ ಜೋಡಿಸಿದೆ.ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದೆ ಎಂದು ಹೇಳಿದರು.
B.Y.Raghavendra ನಾವು ಒಂದು ರಾಷ್ಟ್ರಮಟ್ಟದ ರಾಜಕೀಯ ಪಕ್ಷವಾಗಿ ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಿದ್ದೇವೆ.ಮೈತ್ರಿ ಪಕ್ಷದ ಜೆಡಿಎಸ್ ನ ನಾಯಕರು ಸಾಕಷ್ಟು ಕೆಲಸ ಮಾಡಿದ್ದಾರೆ.
ಅನೇಕರು ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ದೇಶ ಪ್ರೇಮದ ಕಿಚ್ಚು ಮತ್ತು ಮೋದಿ ಮೇಲಿನ ಅಭಿಮಾನದಿಂದ ಮತದಾನವಾಗಿದೆ.
ಒಟ್ಟು 75 ಬಹಿರಂಗ ಸಭೆ ಹಾಗೂ 1 ಸಾವಿರಕ್ಕೂ ಸಭೆ ನಡೆಸಲಾಗಿದೆ.
ಮಹಿಳಾ ಮೋರ್ಚಾ ವತಿಯಿಂದಲೂ ಸಾಕಷ್ಟು ಸಭೆ ನಡೆಸಲಾಗಿತ್ತು.
ರಾಜ್ಯ ಮತ್ತು ರಾಷ್ಟ್ರಮಟ್ಟದ 21 ಸಭೆ ಆಯೋಜಿಸಲಾಗಿತ್ತು.
ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಮತದಾರ ಆಶೀರ್ವಾದ ಮಾಡಲಿದ್ದಾನೆ.
ಅಭಿವೃದ್ಧಿ, ಮೋದಿ ಮೇಲಿನ ಅಭಿಮಾನದ ಕಾರಣ ಹೆಚ್ಚಿನ ಲೀಡ್ ಸಿಗಲಿದೆ.
ಮೋದಿಯ ಗ್ಯಾರಂಟಿ ಚುನಾವಣೆ ಮೇಲೆ ಜನತೆ ಹೆಚ್ಚಿನ ಬೆಂಬಲ ನೀಡಲಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ, ಮೋದಿ ಗ್ಯಾರಂಟಿ ಶಾಶ್ವತ ಎಂಬುದನ್ನು ಮತದಾರರಿಗೆ ಅರಿವಾಗಿದೆ ಎಂದರು.
ರಾಜ್ಯದಲ್ಲಿ 25 ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ.
ನನ್ನ ವಿರುದ್ಧ ಕೆ.ಎಸ್.ಈಶ್ವರಪ್ಪ ಚುನಾವಣಾಧಿಕಾರಿಗೆ ದೂರು ನೀಡಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.