Rahul Gandhi ಶಿವಮೊಗ್ಗದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿಯವರು ದೇಶದ ಸಂಪತ್ತನ್ನು 22 ಜನರ ಕೈಗೆ ನೀಡಿದ್ದಾರೆ.ಇದೀಗ ಮಹಿಳೆಯರನ್ನು ಲಕ್ಷಾಧಿಪತಿಗಳನ್ನು ಮಾಡಲು ಹೊರಟಿದ್ದಾರೆ.
ರೇಪಿಸ್ಟ್ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಲು ಬಿಜೆಪಿ ಕಾರಣ.ಅವರ ಬಳಿ ಎಲ್ಲಾ ಸಂಸ್ಥಗಳಿದ್ದಾಗ್ಯೂ ಪ್ರಜ್ವಲ್ ಸುಲಭವಾಗಿ ಜರ್ಮನಿಗೆ ಹೋಗಲು ನೆರವಾಗಿದ್ದಾರೆ ಎಂದರು.
ರಾಜ್ಯದಲ್ಲಿ ನಾವು ೫ ಗ್ಯಾರಂಟಿ ಜಾರಿಗೊಳಿಸಿದ್ದೇವೆ.ಅದೇ ರೀತಿ ರಾಷ್ಟ್ರಮಟ್ಟದಲ್ಲೂ ಗ್ಯಾರಂಟಿ ಯೋಜನೆ ಜಾರಿಗೊಳಿಸಲಿದ್ದೇವೆ.ಮಹಾಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 10 ಸಾವಿರ ನೀಡಲಿದ್ದೇವೆ.ಏಕೆಂದರೆ ಬಿಜೆಪಿಯವರು ದೇಶದ ಜನರನ್ನು ಬಡವರನ್ನಾಗಿ ಮಾಡಿದ್ದಾರೆ.ಈ ಯೋಜನೆಗಳಿಂದ ಮೋದಿಗೆ ಬೇಜಾರಾಗಿದೆ.ಏಕೆಂದರೆ ಅವರ 22 ಜನ ಶ್ರೀಮಂತರಿಗೆ ಈ ಯೋಜನೆಯ ನೆರವು ಸಿಗುವುದಿಲ್ಲ.ಅದೇ ರೀತಿ ಯುವ ಸಮೂಹಕ್ಕೆ ನೆರವು ನೀಡಲಿದ್ದೇವೆ.ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ 1 ಲಕ್ಷ ನೀಡಲಿದ್ದೇವೆ ಎಂದು ತಿಳಿಸಿದರು.
Rahul Gandhi ತೆರವಾಗಿರುವ ೩೦ ಲಕ್ಷ ಹುದ್ದೆ ಭರ್ತಿ ಮಾಡಲಿದ್ದೇವೆ.ನರೇಗಾ ಯೋಜನೆಯಡಿ 250 ಕೂಲಿಯನ್ನು 400ಕ್ಕೆ ಹೆಚ್ಚಿಸಲಿದ್ದೇವೆ.ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲಾಗುವುದು.ರೈತರ ಸಾಲ ಮನ್ನಾ ಮಾಡಲಾಗುವುದು.ದೇಶದ ಪ್ರತಿಯೊಂದು ಕ್ಷೇತ್ರವನ್ನೂ ಬಿಜೆಪಿ ಖಾಸಗೀಕರಣ ಮಾಡಲು ಹೊರಟಿದೆ ಎಂದರು.
ಈ ಮೂಲಕ ಯುವಕರಿಗೆ ಸಿಗಬೇಕಿರುವ ಉದ್ಯೋಗಾವಕಾಶವನ್ನು ಕಸಿದುಕೊಳ್ಳಲು ಹೊರಟಿದೆ.
ಆದರೆ ಕಾಂಗ್ರೆಸ್ ಇದಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ.ಬಿಜೆಪಿಯ ವಿರುದ್ಧ ಸಂಘಟಿತ ಹೋರಾಟ ನಡೆಸಲಿದೆ ಎಂದು ತಿಳಿಸಿದರು.