Rahul Gandhi ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಐತಿಹಾಸಿಕವಾಗಿ, 2019 ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿಯ ಸ್ಮೃತಿ ಇರಾನಿ ಅವರನ್ನು ಸೋಲಿಸುವವರೆಗೂ ಅಮೇಥಿ ಗಾಂಧಿ ಕುಟುಂಬಕ್ಕೆ ಮೀಸಲಾಗಿದ್ದಂತೆ ಕಂಡುಬಂದಿತ್ತು.
ಈ ಸ್ಥಾನವನ್ನು 2004 ರಿಂದ 2019 ರವರೆಗೆ ಸಂಸತ್ತಿನ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರತಿನಿಧಿಸಿದ್ದರು.
ಗಾಂಧಿ ಕುಟುಂಬದವರನ್ನೇ ಬಹುತೇಕ ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರದ ಜನತೆ
ಪ್ರತೀ ಲೋಕಸಭಾ ಚುನಾವಣೆಯಲ್ಲಿ ಆರಿಸಿ ಕಳಿಸುತ್ತಿತ್ತು.
ಆದರೆ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಅಮೇಥಿ ಲೋಕಸಭಾಕ್ಷೇತ್ರ 2019 ರ ಚುನಾವಣೆಯಲ್ಲಿ
ರಾಹುಲ್ ಗಾಂಧಿ ಅವರ ಎದುರಾಳಿಯಾಗಿ
ಸ್ಮೃತಿ ಇರಾನಿ ಅವರನ್ನ ನಿಲ್ಲಿಸಲಾಯಿತು. ಮೋದಿ ಅಲೆಯಲ್ಲಿ
ರಾಹುಲ್ ಗಾಂಧಿ ಪರಾಜಿತರಾದರು.
ಆದರೆ ಕೇರಳದ ವಯ್ನಾಡಿನ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದರು.
ರಾಯ್ ಬರೇಲಿ ಕ್ಷೇತ್ರದಲ್ಲಿ ಈವರೆಗೂ
ಸೋನಿಯಾ ಗಾಂಧಿ ಆರಿಸಿ ಬರುತ್ತಿದ್ದರು.
ಈ ಚುನಾವಣೆಯಲ್ಲಿ ಅವರು ಸ್ಪರ್ಧಿಸದೇ ರಾಜ್ಯಸಭೆ ಸದಸ್ಯರಾದರು.
ಆದ್ದರಿಂದ ರಾಯ್ ಬರೇಲಿಗೆ ಸಾಂಪ್ರದಾಯಿಕವಾಗಿ
ಕಾಂಗ್ರೆಸ್ ಸ್ಪರ್ಧಿ ನೆಹರು ಗಾಂಧಿ ಕುಟುಂಬದವರತ್ತಲೇ
ಕಾಂಗ್ರೆಸ್ ದೃಷ್ಟಿಯಿರಿಸಿದೆ.
Rahul Gandhi ಪ್ರಿಯಾಂಕ ವಾದ್ರಾ ಅವರು ಚುನಾವಣೆ ಸ್ಪರ್ಧೆಗೆ ಮನಸ್ಸು ಮಾಡಿಲ್ಲ. ನಿರಾಕರಿಸಿದರು ಎನ್ನಲಾಗಿದೆ.
ಈಗಾಗಲೇ ಮತ್ತೆ ರಾಹುಲ್ ಗಾಂಧಿ ಅವರಿಗೆ ರಾಯ್ ಬರೇಲಿ ಇಂದ ಸ್ಪರ್ಧಿಸುವಂತೆ ಪಕ್ಷದ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಇಂದು ಮೇ 3 ರಂದು ನಾಮಪತ್ರ ಸಲ್ಲಿಸಬೇಕು.
ಸೊನಿಯಾ, ಪ್ರಿಯಾಂಕ ಅವರ ಸ್ಪರ್ಧೆ ಇಲ್ಲ. ರಾಹುಲ್ ಗಾಂಧಿ ನಿಲ್ಲುತ್ತಾರೆ.
ಬಿಜೆಪಿ ಎದುರಾಳಿಯಾಗಿ
ವರುಣ್ ಗಾಂಧಿ ಅವರಿಗೆ ಪಕ್ಷ ಪ್ರಸ್ತಾವನೆ ನೀಡಿತ್ತು.
ಆದರೆ ವರುಣ್ ಏಕೋ ನಿರಾಕರಿಸಿದರು.
ಈಗ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳು
ಮತ್ತೆ ರಾಜಕೀಯ ಚುನಾವಣಾ ಪರದೆಯಲ್ಲಿ ಹೊಸ ಆಟವನ್ನೇ ತೋರಿಸಲಿವೆ.