Madhu Bangarappa ಫ್ರೀ ರಿಚಾರ್ಜ್ ವಿಚಾರ ಬಳಸಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸಹೋದರ, ಮಾಜಿ ಶಾಸಕ ಕುಮಾರ ಬಂಗಾರಪ್ಪ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಕುಮಾರ ಬಂಗಾರಪ್ಪ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂಬ ಪ್ರಶ್ನೆ ಕೇಳುತ್ತಿದ್ದಂತೆ, ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ”ನೋಡಿ, ನಾವಿಬ್ಬರು ಪಕ್ಕದಲ್ಲೇ ನಿಂತಿರುತ್ತೇವೆ. ಪಕ್ಕದಲ್ಲೇ ಕೊಚ್ಚೆ ಇರುತ್ತದೆ. ಬಹಳ ವಾಸನೆ. ಅದಕ್ಕೆ ಕಲ್ಲು ಹಾಕಿದರೆ ನಮಗೂ ಅಹಸ್ಯ, ಪ್ರಶ್ನೆ ಕೇಳುವ ನಿಮಗೂ ಅಸಹ್ಯ. ಎರಡೇ ವಿಚಾರ.. ಯಾಕೆ ಸೋತ್ರಿ, ಇಷ್ಟು ದಿನ ಎಲ್ಲಿದ್ರಿ.. ಎಂಬ ಎರಡಕ್ಕೆ ಉತ್ತರ ತಗೊಳ್ಳಿ. ಮತ್ತೆ ನನಗೆ ಪ್ರಶ್ನೆ ಹಾಕಬೇಡಿ. ಜನರಿಗೆ ಪ್ರಶ್ನೆ ಮಾಡಬೇಕು ಅವ್ರು.. ನೀವು ನನಗೆ ಕೇಳಿದ್ರೆ ಉಪಯೋಗವಿಲ್ಲ” ಎಂದು ಗರಂ ಆದರು.
Madhu Bangarappa ”ಅದಕ್ಕೇ ಕೊಚ್ಚೆ ಮೇಲೆ ಕಲ್ಲು ನೀವೂ ಹಾಕಬೇಡಿ, ನಾನೂ ಹಾಕ್ಕೋಳೋಕೆ ಹೋಗೊಲ್ಲ. ಇಂತಹ ಸಂದರ್ಭದಲ್ಲಿ ಅದೆಲ್ಲ ಅಸಹ್ಯ. ಶರಾವತಿ ಡೆಂಟಲ್ ಕಾಲೇಜು ಎದುರುಗಡೆ ಟೆಂಟ್ ಹಾಕೋದು.. ಎಲೆಕ್ಷನ್ ಬಂದಾಗ ಇವೆಲ್ಲ ಇರ್ತವೆ. ಘನತೆ, ಗೌರವ ಉಳಿಸಿಕೊಳ್ಳಬೇಕು” ಎಂದು ಸಹೋದರನಿಗೆ ಟಾಂಗ್ ನೀಡಿದರು.
ರಿಚಾರ್ಜ್ ಗಿರಾಕಿ ಎಂದು ಟೀಕೆ: ”ಸಾಮಾನ್ಯವಾಗಿ ರಿಚಾರ್ಜ್ ಫ್ರಿ ಆಗಿ ಮಾಡ್ತಾರ ಅಥವಾ ದುಡ್ಡು ಕಟ್ಟುತ್ತಾರಾ? ರಿಚಾರ್ಜ್ ಫ್ರೀ ಅಗಿ ಯಾರೂ ಮಾಡಲ್ಲ. ಕೆಲವು ಗಿರಾಕಿಗಳು ಹಾಗೆಯೇ ಇರುತ್ತಾರೆ. ಈ ಮುಂಚೆ ಜಿಯೋ ಫ್ರೀ ಆಗಿ ಕೊಡುತ್ತಿದ್ದರು, ಅಷ್ಟೇ..” ಎಂದು ಸಹೋದರನ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.