Lok sabha Election ರಾಷ್ಟ್ರದ 140 ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ 800 ವರ್ಷಗಳ ಹಿಂದಿನ ತುಘಲಕ್ ದರ್ಬಾರಿನ ಆಡಳಿತವನ್ನು ನೆನಪಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.
ಸೊರಬ ಪಟ್ಟಣದ ಬಂಗಾರಧಾಮದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು.
Lok sabha Election ಕಾಂಗ್ರೆಸ್ 60 ವರ್ಷಗಳ ಆಡಳಿತದಲ್ಲಿ ಭ್ರಷ್ಟರನ್ನು ಕಟ್ಟಿಕೊಂಡು ಅಧಿಕಾರ ನಡೆಸಿದ ಎಂದು ಆರೋಪಿಸಿ ಬಿಜೆಪಿಗೆ ಕೇವಲ 60 ತಿಂಗಳು ಅಧಿಕಾರ ನೀಡಿ. ರಾಷ್ಟ್ರವನ್ನು ಬಲಿಷ್ಟವಾಗಿ ಕಟ್ಟುತ್ತೇನೆ. ಅಭಿವೃದ್ಧಿಯ ಮಹಾಪೂರವನ್ನೇ ಹರಿಸುತ್ತೇನೆ. ಭ್ರಷ್ಟತೆಯನ್ನು ತೊಲಗಿಸುತ್ತೇನೆ. ಮತ್ತು ದೇಶದಲ್ಲಿನ ಕಪ್ಪು ಹಣವನ್ನು ತಂದು ಬಡವರಿಗೆ ಹಂಚುತ್ತೇನೆ ಎಂದು ಜನತೆ ಎದುರು ವಾಗ್ದಾನ ಮಾಡಿದ್ದ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 10 ವರ್ಷಗಳು ಕಳೆದಿವೆ. ಆದರೆ ಯಾವ ಅಭಿವೃದ್ಧಿ ಮಾಡಿದ್ದಾರೆ. ಪೆಟ್ರೋಲ್, ಸಿಲಿಂಡರ್ ಬೆಲೆ ಏರಿಕೆಯಾಗಿದೆ. ವಶಪಡಿಸಿಕೊಂಡು ಕಪ್ಪು ಹಣ ಎಲ್ಲಿದೆ ಎನ್ನುವ ಲೆಕ್ಕ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ದೇಶದ ಜನರಲ್ಲಿ ಮತೀಯ ಭಾವನೆಗಳನ್ನು ಕೆರಳಿಸಿ, ಮನುಷ್ಯ ಸಂಬಂಧಗಳ ನಡುವೆ ದ್ವೇಷದ ಕಿಚ್ಚು ಹೆಚ್ಚುವ ಮೂಲಕ ಮತದಾರರ ಗಮನ ಬೇರೆಡೆಗೆ ಸೆಳೆಯುವಂತೆ ಮಾಡುತ್ತಿದ್ದಾರೆ. 60 ತಿಂಗಳಿನಲ್ಲಿ ದೇಶದ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದವರು 2047ಕ್ಕೆ ದೇಶ ವಿಕಾಸ ಮಾಡುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
Lok sabha Election ನರೇಂದ್ರ ಮೋದಿ ಬಂದು ಹತ್ತು ವರ್ಷವಾಗಿವೆ, ಯಾವ ಅಭಿವೃದ್ದಿ ಮಾಡಿದ್ದಾರೆ?- ಮಂಜುನಾಥ ಭಂಡಾರಿ
Date: