Saturday, December 6, 2025
Saturday, December 6, 2025

Organization of Backward Castes ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಬೇಕು-ಪ್ರೊ.ರವಿವರ್ಮ ಕುಮಾರ್

Date:

Organization of Backward Castes ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಆದಷ್ಟು ಶೀಘ್ರವೆ ಸಂಪುಟ ಸಭೆಯ ಮುಂದೆ ತಂದು ಸಾವ೯ಜನಿಕವಾಗಿ ಬಿಡುಗಡೆಗೊಳಿಸಿ ಮುಕ್ತ ಚಚೆ೯ಗೆ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್ ಹಾಗು ಹೈಕೋರ್ಟ್ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ ರಾಜ್ಯದ ಹಿಂದುಳಿದ ಜಾತಿ-ವಗ೯ಗಳ ಸಂಘಟನೆಗಳು ಹಾಗು ಮುಖಂಡರುಗಳು ವರದಿ ಹೊರತರುವ ಕಾಯ೯ದಲ್ಲಿ ನಿರಂತರವಾಗಿ ಸಕಾ೯ರದೊಂದಿಗೆ ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು.

ಹಿಂದುಳಿದ ಜನ ಜಾಗೃತಿ ವೇದಿಕೆ ನಿನ್ನೆ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏಪ೯ಡಿಸಿದ್ದ “ಕಾಂತರಾಜ ಆಯೋಗದ ವರದಿ” ಜಾರಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂತರಾಜ ಅವರ ನೇತೃತ್ವದ ಸಮಿತಿ ವರದಿ ಸಿದ್ಧಪಡಿಸುವ ಹಂತದಲ್ಲಿ ಎಲ್ಲ ಮಾನದಂಡಗಳನ್ನು ಅಳವಡಿಸಿಕೊಂಡು ನಿಯಮಾನುಸಾರ ಕಾಯ೯ನಿವ೯ಹಿಸಿರುವುದನ್ನು ತಾವು ಗಮನಿಸಿರುವುದಾಗಿ ಹೇಳಿದರು.

ಪ್ರಸ್ತುತ ಸಕಾ೯ರಕ್ಕೆ ಸಲ್ಲಿಸಲ್ಪಟ್ಟಿರುವ ವರದಿ ಆಡಳಿತಾತ್ಮಕವಾಗಿ ಕಾಂತರಾಜ ಆಯೋಗದ ವರದಿಯೊ ಅಥವ ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿಯೊ ಎಂಬ ಗೊಂದಲವಿದೆಯಾದರೂ ಈ ಬಗ್ಗೆ ಸಂಘಟನೆಗಳು ಮತ್ತು ಮುಖಂಡರುಗಳು ಧೃತಿಗೆಡದೆ ಅಂತಿಮವಾಗಿ ಸಕಾ೯ರದ ಕೈ ಸೇರಿರುವ “ಹಿಂದುಳಿದ ವಗ೯ಗಳ ಆಯೋಗದ ವರದಿ” ಅನುಷ್ಠಾನದತ್ತ ಗಮನ ನೀಡಬೇಕೆಂದು ಅವರು ಸಲಹೆ ನೀಡಿದರು.

Organization of Backward Castes ಸಂವಾದದಲ್ಲಿ ಕಾಂತರಾಜ ಆಯೋಗದ ಸಮಿತಿ ಸದಸ್ಯರಾಗಿದ್ದ ನ್ಯಾಯವಾದಿ ಎನ್.ಪಿ.ಧಮ೯ರಾಜ್ ವರದಿ ಸಿದ್ಧಪಡಿಸಲು ಕೈಗೊಂಡ ಮಾನದಂಡಗಳ ಕುರಿತು ವಿವರಣೆ ನೀಡಿದರು, ಹಿಂದುಳಿದ ಜನಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ ಅಧ್ಯಕ್ಷ ತೀ.ನ. ಶ್ರೀನಿವಾಸ್ ಬಿ. ಜನಮೇಜಿರಾವ್, ಚನ್ನವೀರಪ್ಪ ಗಾಮನಗಟ್ಟಿ, ಪ್ರೊ. ಕಲ್ಲನ ರೈತ ಸಂಘದ ಕುಗ್ವೆ ಶಿವಾನಂದ ಎನ್.ಡಿ. ವಸಂತಕುಮಾರ್ ಇತರರು ಉಪಸ್ಥಿತರಿದ್ದರು ಆರಂಭದಲ್ಲಿ ಸಂಚಾಲಕ ಆರ್.ಟಿ. ನಟರಾಜ್ ಸವ೯ರನ್ನೂ ಸ್ವಾಗತಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...