Thursday, March 19, 2026
Thursday, March 19, 2026

Ayanur Manjunath ಹಾಸನ ಪೆನ್ ಡ್ರೈವ್ ಪ್ರಕರಣ, ಶಿವಮೊಗ್ಗ ಬಿಜೆಪಿ ನಾಯಕರು ಯಾರೂ ಪ್ರತಿಕ್ರಿಯೆ ನೀಡಿಲ್ಲ, ಯಾಕೆ?- ಆಯನೂರು ಮಂಜುನಾಥ್ ಪ್ರಶ್ನೆ

Date:

Ayanur Manjunath ಪ್ರಸ್ತುತ ಹಾಸನ ಪೆನ್ ಡ್ರೈವ್ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಮಹಿಳೆಯರ ಜೊತೆ ಯುವ ರಾಜಕಾರಣಿಯ ಅಶ್ಲೀಲ ವೀಡಿಯೋಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ನಡುವೆ ಸದರಿ ರಾಜಕಾರಣಿಯ ವಿರುದ್ದ ಕಾಂಗ್ರೆಸ್ ವಕ್ತಾರ , ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಕರಣದ ಕುರಿತಂತೆ ಸಮಾಜದ ದಿವ್ಯ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಶನಿವಾರ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ‘ಮನಸ್ಸು ಖೇದಗೊಳಿಸುವ ಪ್ರಕರಣ ಹಾಸನ ಜಿಲ್ಲೆಯಲ್ಲಿ ನಡೆದಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಮನೆ ಕೆಲಸಕ್ಕೆ ಬರುವ ಬಡ ಹೆಣ್ಣು ಮಕ್ಕಳಿಂದಿಡಿದು, ಹಲವರ ಮೇಲೆ ಅತ್ಯಾಚಾರ ಎಸಗಲಾಗಿದೆ. ಕಣ್ಣೀರಿಟ್ಟು ಗೋಗರೆದರೂ ದೌರ್ಜನ್ಯ ನಡೆಸಲಾಗಿದೆ. ನೂರಾರು ಮಹಿಳೆಯರ ಬದುಕು ಹಾಳು ಮಾಡಲಾಗಿದೆ. ಇದನ್ನು ಮಾಡಿರುವುದು ಓರ್ವ ರಾಜಕಾರಣಿ ಎಂಬುವುದು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದೆ ಎಂದು ದೂರಿದ್ದಾರೆ.
Ayanur Manjunath ಒಬ್ಬ ರಾಜಕಾರಣಿ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕಾಗಿ, ಸಮಾಜವು ಎಲ್ಲೋ ಒಂದು ಕಡೆ ಮೌನವಹಿಸಿದೆಯೋನೋ ಎಂಬ ಭಾವನೆ ಕಂಡುಬರುತ್ತಿದೆ. ನೇಹಾ ಹಿರೇಮಠ ಪ್ರಕರಣದಲ್ಲಿ ರಾಜಕಾರಣಿಗಳು ಉದ್ವೇಗದಿಂದ ಹೋರಾಟ ನಡೆಸಿದ್ದೆವು. ಇದರ ಅವಶ್ಯಕತೆಯಿತ್ತು. ಈ ಬಗ್ಗೆ ತಾವು ಟೀಕೆ ಮಾಡುವುದಿಲ್ಲ. ಆದರೆ ಹಾಸನ ಪ್ರಕರಣದಲ್ಲಿ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆ. ಅಸಹಾಯಕ ಬಡ ಹೆಣ್ಣು ಮಕ್ಕಳ ಮೇಲೆಯೂ ಅತ್ಯಾಚಾರ ಎಸಗಲಾಗಿದೆ. ಆದರೆ ಈ ಬಗ್ಗೆ ರಾಜಕಾರಣಿಗಳು ಏಕೆ ಮಾತನಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಪ್ರಕರಣದಲ್ಲಿ ಬಲವಂತವಾಗಿಯೋ, ಸ್ವಇಚ್ಛೆಯಿಂದಲೋ ಅಥವಾ ರಾಜಕೀಯ ಆಮಿಷದಿಂದಲೋ ಮಹಿಳಾ ಪೊಲೀಸ್ ಅಧಿಕಾರಿಯೋರ್ವರು ಕೂಡ ರಾಜಕಾರಣಿಯ ದೈಹಿಕ ವಾಂಛೆಗೆ ಒಳಗಾಗಿದ್ದಾರೆ. ಇದನ್ನು ಗಮನಿಸಿದರೆ ನಾವು ಕರ್ನಾಟಕದಲ್ಲಿದ್ದೆವೆಯೋ ಅಥವಾ ಎಲ್ಲಿದ್ದೆವೆಯೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ಕುರಿತಂತೆ ಕೆ.ಎಸ್.ಈಶ್ವರಪ್ಪ ಬಿ.ವೈ.ರಾಘವೇಂದ್ರ ಹೆಚ್.ಡಿ.ಕುಮಾರಸ್ವಾಮಿ ಅವರೆಲ್ಲ ಏಕೆ ಮಾತನಾಡುತ್ತಿಲ್ಲ. ಮಹಿಳಾ ಸಂಘಟನೆಗಳೇಕೆ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಇದೇ ವೇಳೆ ಆಯನೂರು ಮಂಜುನಾಥ್ ತರಾಟೆಗೆ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...