Saturday, December 6, 2025
Saturday, December 6, 2025

Shivamogga Police ಗಾಜನೂರು ಬಳಿ ಅಪಘಾತ ಬೈಕ್ ಸವಾರ ಸಾವು

Date:

ಗಾಜನೂರು ಬಳಿಯಲ್ಲಿ ನಿನ್ನೆ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈತ ಸೊರಬದ ಮೂಲದವರು ಎನ್ನಲಾಗಿದ್ದು, ಆತನ ವಿವರ ತಿಳಿದುಬಂದಿಲ್ಲ.

ಗಾಜನೂರು ಸಮೀಪದ ವೀರಾಪುರದ ಬಳಿ ಸಿಗುವ ಕ್ರಾಸ್‌ ಹತ್ತಿರ ಈ ಘಟನೆ ಸಂಭವಿಸಿದೆ. ಟೈಲ್ಸ್‌ ತುಂಬಿಕೊಂಡು ಬರುತ್ತಿದ್ದ ಆಪೆ ಗಾಡಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದೆ.

Shivamogga Police ಪರಿಣಾಮ ಬೈಕ್‌ ಸವಾರನಿಗೆ ಗಂಭೀರ ಪೆಟ್ಟು ಬಿದ್ದು ‍ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆ ಭೀಕರತೆ ಎಷ್ಟಿತ್ತು ಎಂದರೇ , ಬೈಕ್‌ ಸವಾರನ ಒಂದು ಕೈ ಸಂಪೂರ್ಣವಾಗಿ ತುಂಡಾಗಿ ರಸ್ತೆ ಬದಿಗೆ ಹಾರಿ ಬಿದ್ದಿತ್ತು. ಇನ್ನೂ ತಲೆಯಿಂದ ತೀವ್ರ ರಕ್ತಸ್ರಾವವಾಗಿ ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ.
ಸ್ಥಳೀಯರು ತುರ್ತುಕರೆ ಮಾಡಿ ಆಂಬುಲೆನ್ಸ್‌ಗೆ ಬರುವಂತೆ ತಿಳಿಸಿದ್ದರಾದರೂ ಅಷ್ಟರಲ್ಲಿ ಬೈಕ್‌ ಸವಾರನ ಜೀವ ಹೋಗಿತ್ತು. ಇನ್ನೂ ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...