Tata Nano Electric Car ಟಾಟಾ ನ್ಯಾನೋ ಇಲೆಕ್ಟ್ತಿಕ್ ಕಾರ್ ಈಗ ಸುದ್ದಿಯಲ್ಲಿದೆ.
ಹಿಂದೆ ನ್ಯಾನೋ ಕಾರ್ ತಯಾರಿಸಿದ್ದ ಟಾಟಾ ಕಂಪನಿ ಆಗ ಆಟೊಮೊಬೈಲ್ ಕ್ಷೇತ್ರದಲ್ಲಿ ಒಂದು ಸುನಾಮಿಯನ್ನೇ ಎಬ್ಬಿಸಿತ್ತು.
ಒಂದು ಸ್ಕೂಟರ್ ಬೆಲೆಗೆ ಕಾರು ಸಿಗುತ್ತೆ.ಅದೂ ನಾಕುಮಂದಿಯಿರುವ ಕುಟುಂಬಕ್ಕೆ ಅಂದರೆ ಯಾರುಗೆ ಬೇಡ ಹೇಳಿ.
ಯಾಕೋ ಏನೋ ಉತ್ಪಾದನೆಯ ವೆಚ್ಚದಲ್ಲಿ ಏರಿಕೆಯೊ?
ಗ್ರಾಹಕರ ಆಲಸ್ಯವೋ ಬಹಳ ವರ್ಷ ಈ ಕಾರಿನ ಕ್ರೇಜ್ ಉಳಿಯಲಿಲ್ಲ.
ಆದರೂ ಸ್ಮಾಲ್ ಕಾರ್ ಬಗ್ಗೆ ನಮ್ಮಲ್ಲಿ ಇನ್ನೂ “ಬಹುತ್ ಪ್ಯಾರ್ ” ಇದೆ.
ಈಗ ಟಾಟಾ ಕಂಪನಿಯು ಸಣ್ಣಕುಟುಂಬದ ಬಗ್ಗೆ ತನ್ನ ಕಾಳಜಿಬಿಟ್ಟು ಕೊಟ್ಡಿಲ್ಲ ಎನ್ನುವುದಕ್ಕೆ ಈಚೆಗೆ ಅದು ನ್ಯಾನೋ ಹೆಸರಿನ ಸರಣಿಯಲ್ಲೇ ಪುಟ್ಟ ವಿದ್ಯುಚ್ಚಾಲಿತ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ನಾವು ಭಾರತೀಯರು ಯಾವುದೇ ಉತ್ಪನ್ನ ಮಾರುಕಟ್ಟೆಗೆ ಬಂದಾಕ್ಷಣ ಬೆಲೆ ಎಷ್ಟಿರಬಹುದು? ಎಂದು ಕುತೂಹಲ ತಾಳುತ್ತೇವೆ.
ಸುದ್ದಿಮೂಲದ ಪ್ರಕಾರ ಮೂರುಲಕ್ಷ ರೂಪಾಯಿಗಿಂದ ಆಚೆ -ಈಚೆ ಇರಬಹುದೇನೊ?.
Tata Nano Electric Car ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಆದರೂ ಸ್ವಂತ ವಾಹನಗಳಲ್ಲಿ ಪ್ರಯಾಣ ಯಾರೂ ಕಡಿಮೆ ಮಾಡಿಲ್ಲ. ಇವತ್ತು ಕಾರು ಐಷಾರಾಮಿ ಅಗತ್ಯಗಳ ಪಟ್ಟಿಯಿಂದ. ಕಾರು ಉತ್ಪಾದಕರು ಪುಟ್ಟ ಕಾರ್ ಗಳನ್ನ ಹೊರಗಿಡುವಂತೆ ಜಾಹೀರಾತು ನೀಡುವ ಪರಿಪಾಠ ಆರಂಭಿಸಿದ್ದಾರೆ.
ಉದಾಹರಣೆಗೆ “ನ್ಯಾನೋ ಇಲೆಕ್ಟ್ರಿಕ್ ಕಾರ್ ಬಡವರ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ ಎಂದು ನಿರೂಪಿಸುತ್ತಾರೆ.
ಮಾದರಿ ಜಾಹೀರಾತು..
Tata Nano EV: ಬಡವರು ಕಾತುರದಿಂದ ಕಾಯುತ್ತಿರುವ Tata Nano ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೊಸ ಅಪ್ಡೇಟ್! ಜನ ಮುಗಿಬಿಳೋದು ಖಚಿತ
ಎಂದು ಮಾಧ್ಯಮಗಳಲ್ಲಿ ಬರೆಯುವ ಮಂದಿ ಈ ರೀತಿ ಶೀರ್ಷಿಕೆ ಹಾಕಿ ಬರೆಯಲಾರಂಭಿಸಿದ್ದಾರೆ.
ಬಡವರು ಎಂಬ ವ್ಯಾಖ್ಯೆ,ವ್ಯಾಪ್ತಿ ಬಗ್ಗೆ ನಾವು ಪುನರಾಲೋಚಿಸಬೇಕೆರನೊ?
ಏನೇ ಆಗಲಿ ನ್ಯಾನೋ ಇಲೆಕ್ಟ್ರಿಕ್ ಇವಿ ಕಾರು
ಬರಲಿ…ಅಲ್ಲವೆ?