Saturday, December 6, 2025
Saturday, December 6, 2025

SVEEP Shivamogga ಜೋಗ ನೋಡಲು ವೈಭೋಗ.ಮತದಾನ ಮಾಡುವುದು ಸುಯೋಗ” ವಿವಿಧ ಬ್ಯಾಂಕ್ ನೌಕರರಿಂದ ವಿಶಿಷ್ಟ ಮತದಾನ ಜಾಗೃತಿ ವಾಕಥಾನ್

Date:

SVEEP Shivamogga ಜೋಗ ನೋಡಲು ವೈಭೋಗ.ಮತದಾನ ಮಾಡುವುದು ಸುಯೋಗ” ವಿವಿಧ ಬ್ಯಾಂಕ್ ನೌಕರರಿಂದ ವಿಶಿಷ್ಟ ಶಿವಮೊಗ್ಗದಲ್ಲಿ ಇದೆ ಮೊದಲ ಬಾರಿಗೆ ವಿವಿಧ ಬ್ಯಾಂಕ್ ನೌಕರರಿಂದ ಮತದಾನ ಜಾಗೃತಿಗಾಗಿ ವಾಕಥಾನ್ ನಡೆಯುತು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳು, ಜಿಲ್ಲಾ ಸ್ವೀಪ್ ಸಮಿತಿ, ಮತದಾನ ಜಾಗೃತಿ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮ ಶಿವಮೊಗ್ಗದ ಸೈನ್ಸ್ ಮೈದಾನದಿಂದ ಆರಂಭವಾಗಿ‌, ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳ ಮೂಲಕ ಸಾಗುತ್ತ, ಮತದಾರರ ಜಾಗೃತಿ ಘೋಷಣೆಗಳನ್ನು ಪ್ರಚಾರ ಮಾಡಲಾಯಿತು.

ಸೈನ್ಸ್ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಬ್ಯಾಂಕ್ ನೌಕರರು, ಶಿವಪ್ಪ ನಾಯಕ ವೃತ್ತ, ಹಮ್ಮಿರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್ ಮೂಲಕ ಮಹಾವೀರ ವೃತ್ತದ ವರೆಗೆ ವಾಕಥಾನ್ ಮಾಡಿದರು.

“ಜೋಗ ನೋಡಲು ವೈಭೋಗ, ಮತದಾನ ಮಾಡುವುದು ಸುಯೋಗ”, ” ನಾವು ಶಿವಮೊಗ್ಗ ಜನ, ಮಾಡೇ ಮಾಡ್ತೀವಿ ಮತದಾನ” ಇನ್ನೂ ಮುಂತಾದ ಘೋಷಣೆಗಳನ್ನು ಗಟ್ಟಿಯಾಗಿ ಸಾರುತ್ತಾ ಅತ್ಯಂತ ಉತ್ಸಾಹದಲ್ಲಿ ಬ್ಯಾಂಕ್ ನೌಕರರು ಸಾಗಿದರು. ಮತದಾನದ ಜಾಗೃತಿ ಗೀತೆಗಳನ್ನು ದಾರಿಯುದ್ದಕ್ಕೂ ಹಾಡಿದರು.

ವಾಕಥಾನ್‌ನಲ್ಲಿ ಭಾಗವಹಿಸಿದ್ದ ನೌಕರರು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನೈತಿಕ ಮತದಾನದ ಪ್ರತಿಜ್ಞೆಯನ್ನು ಸ್ವೀಕರಿಸಿದರು.

SVEEP Shivamogga ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ವೀಪ್ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಎಲ್ಲಾ ನೌಕರರು ಬ್ಯಾಂಕ್ ಗೆ ಬರುವ ಸಾರ್ವಜನಿಕರಲ್ಲಿ ಮತದಾನದ ಅರಿವು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಲೀಡ್ ಬ್ಯಾಂಕ್ ಎಜಿಎಂ ಅಮರನಾಥ್, ಬ್ಯಾಂಕ್ ಆಫ್ ಬರೋಡ ಎಜಿಎಂ ರವಿ, ಕೆನರಾ ಬ್ಯಾಂಕ್ ಡಿಎಂ ಪದ್ಮಜ , ಕರ್ನಾಟಕ ಗ್ರಾಮೀಣ ಬ್ಯಾಂಕ್ ರೀಜನಲ್ ಮ್ಯಾನೇಜರ್ ಶಾರದಮ್ಮ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿವಿಜನಲ್ ಮ್ಯಾನೇಜರ್ ರಂಗಸ್ವಾಮಿ, ಯೂನಿಯನ್ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ಎಂ ಕೆ ಮುರಳಿ, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ನಾಗರಾಜ್, ಲೀಡ್ ಬ್ಯಾಂಕ್‌ನ ಅಧಿಕಾರಿ ನೆಲ್ಸನ್,‌ ವಾರ್ತಾಧಿಕಾರಿ ರಾಜು ಆರ್, ರಾಜ್ಯಮಟ್ಟದ ಸ್ವೀಪ್ ತರಬೇತಿದಾರ ನವೀದ್ ಅಹಮದ್ ಪರ್ವಿಜ್ , ಸೇರಿದಂತೆ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು, ನೌಕರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...