Saturday, December 6, 2025
Saturday, December 6, 2025

B.Y.Vijayendra ಕೇವಲ ಜಾಹೀರಾತಿಗೆ ಕಾಂಗ್ರಸ್ ಸೀಮಿತವಾಗಿದೆ. ರಾಜ್ಯದಲ್ಲಿ ಬಿಜೆಪಿ ಅಲೆ ಇದೆ- ಬಿ.ವೈ.ವಿಜಯೇಂದ್ರ

Date:

B.Y.Vijayendra ಕಾಂಗ್ರೆಸ್ ಕೇವಲ ಜಾಹಿರಾತಿಗೆ ಸೀಮಿತವಾಗಿದೆ. ೬೫ ವರ್ಷದಲ್ಲಿ ದೇಶಕ್ಕೆ ಅವರ ಕೊಡುಗೆ ಏನು ಎಂಬುದನ್ನು ಚೊಂಬು ಮೂಲಕ ತೋರಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ರಾಜ್ಯದ ಮತದಾರರು ಸೊಪ್ಪು ಹಾಕುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಅಭಿವೃದ್ಧಿ, ಭವಿಷ್ಯ ಅಂದ್ರೆ ಮೋದಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ನವರು ಬೊಬ್ಬೆ ಹೊಡೆಯುತ್ತಿದ್ದಾರೆ. ಅವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ರಾಜ್ಯದ ೨೮ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲುತ್ತದೆ. ಮತ ಎಣಿಕೆ ದಿನ ಮತದಾರರ ಭಾವನೆ ಏನು ಅಂತಾ ಗೊತ್ತಾಗುತ್ತದೆ. ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ರಾಜ್ಯಕ್ಕೆ ಹೆಚ್ಚೆಚ್ಚು ಬರಬೇಕು. ಇಲ್ಲದಿದ್ದರೆ ರಾಜ್ಯದ ಜನ ಮರೆತು ಬಿಡುತ್ತಾರೆಂದು ವ್ಯಂಗ್ಯವಾಡಿದರು.
ನೇಹಾ ಹತ್ಯೆ ಪ್ರಕರ ಆಕಸ್ಮಿಕ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿರುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನಡುವಳಿಕೆ ಏನು ಅಂತ ಹೊರಬಿದ್ದಿದೆ. ಘಟನೆಗಳು ಆಕಸ್ಮಿಕವಿರಬಹುದು ಆದರೆ ತನಿಖೆಗೆ ಆದೇಶಿಸದೆ ಇದು ವೈಯುಕ್ತಿಕ ಘಟನೆ ಎಂಬ ಸಿಎಂ ಹೇಳಿಕೆ ನಿರ್ಲಕ್ಷö್ಯದಿಂದ ಕೂಡಿದೆ ಎಂದರು.
B.Y.Vijayendra ಬರ ಪರಿಹಾರದ ವಿಚರದಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂಬ ಆರೋಪಕ್ಕೂ ಉತ್ತರಿಸಿದ ರಾಜ್ಯಧ್ಯಾಕ್ಷ ವಿಜೇಂದ್ರ ಬಿಜೆಪಿ ಆಡಳಿತದಲ್ಲಿ ಎನ್ ಡಿ ಆರ್ ಎಫ್ ಹಣವನ್ನು ಒಂದು ಲಕ್ಷದಿಂದ ೪ ಲಕ್ಷಕ್ಕೆ ಏರಿಸಲಾಗಿದೆ. ಯಡಿಯೂರಪ್ಪ ಸರಕಾರದಲ್ಲಿ ಸಂಭವಿಸಿದ ಅತಿವೃಷ್ಠಿಯಲ್ಲಿ ರಾಜ್ಯ ಸರ್ಕಾರವೇ ಕೈಗೊಂಡಿತ್ತು. ಆದರೆ ಕಾಂಗ್ರೆಸ್ ಏನೂ ಕ್ರಮಕೈಗೊಳ್ಳದೆ ಕೇಂದ್ರದ ಕಡೆ ಮುಖಮಾಡಿರುವುದರಿಂದ ಸಮಸ್ಯೆಯಾಗಿದೆ. ಎಸ್ ಸಿ ಪಿಟಿ ಹಣವನ್ನೂ ಬೇರೆಡೆ ಬಳಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...