Dr. Raj Kumar ತಮ್ಮ ಐವತ್ತು ವರ್ಷಗಳ ಕಲಾಯಾನದಲ್ಲಿ ಇನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟನೆ, ಹನ್ನೊಂದು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ಎರಡು ಬಾರಿ ಅತ್ಯುತ್ತಮ ಗಾಯಕ ಪ್ರಶಸ್ತಿ,ಪದ್ಮಭೂಷಣ, ಡಾಕ್ಟರೇಟ್ ಮತ್ತು ನಾಡೋಜ ಪ್ರಶಸ್ತಿ, ದಾದಾ ಸಾಹೇಬ್ ಪ್ರಶಸ್ತಿಗಳಿಸಿದ ಈ ನಟ ಸರಳತೆಯ ಸಾಕಾರ ಮೂರ್ತಿ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ತಿಳಿಸಿದರು.
ಅವರು ಸೀನಿಯರ್ ಜೇಸಿಯವರು ರವೀಂದ್ರ ನಗರ. ರೇಣುಕಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ಚಿತ್ರರಂಗದ ಧ್ರುವತಾರೆ ಎನಿಸಿದ ಡಾ.ರಾಜಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಡಾ.ರಾಜ್ ಅವರ ಜೀವನದ ಕೆಲ ಘಟನೆಗಳನ್ನು ಮೆಲುಕು ಹಾಕಿದರು. ತಮ್ಮ ನಟನಾ ಚಾತುರ್ಯದಿಂದ ಮತ್ತು ಕಂಠ ಸಿರಿ ಯಿಂದ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಗಳಿಸಿ ಅಮರರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
Dr. Raj Kumar ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಲ್ಲಿ ಮೈಮರೆತು ಲೀಲಾಜಾಲವಾಗಿ ನಟಿಸಿ ಪ್ರಸಿದ್ಧರಾಗಿದ್ದರು ಎಂದು ತಿಳಿಸಿ ಅವರ ಸ್ಮರಣೆ ಇಂದು ನಡೆಯುತ್ತಿರುವುದು ಸಮಯೋಚಿತವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಜೇಸಿ ಅಧ್ಯಕ್ಷ ಲಕ್ಷ್ಮೀಕಾಂತ್ ವಹಿಸಿದ್ದರು. ವೇದಿಕೆಯಲ್ಲಿ ಜಿ.ವಿಜಯಕುಮಾರ್ ಉಪಸ್ಥಿತರಿದ್ದರು.
ಶಶಿಕಾಂತ್ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೆಲ ಭಕ್ತಿಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಜೆಸಿಯ ಅಣಜಿ ಬಸವರಾಜ್. ವೆಂಕಟರಮಣ ಜೋಯ್ಸ್.. ಮುರಳೀಧರ. ರಮೇಶ್ ಜಾದವ್. ಉಪಸ್ಥಿತರಿದ್ದರು
ನಂತರ ಅನೇಕ ಕಲಾವಿದರು ರಾಜ್ ಕುಮಾರ್ ಅವರು ಹಾಡಿದ ಕೆಲವು ಗೀತೆಗಳನ್ನು ಹಾಡಿ ರಂಜಿಸಿದರು.