Lok Sabha Election ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ 3ನೇ ಹಂತದಲ್ಲಿ ಚುನಾವಣೆ ನಡೆಯುವ ಇತರೆ ಕ್ಷೇತ್ರದ ಮತದಾರರಾಗಿದ್ದು ಶಿವಮೊಗ್ಗ ಕ್ಷೇತ್ರದಲ್ಲಿ ಚನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರಕ್ಕಾಗಿ ನಮೂನೆ-12 ಸಲ್ಲಿಸಲು ಮತ್ತು ಶಿವಮೊಗ್ಗ ಕ್ಷೇತ್ರದ ಮತದಾರರಾಗಿದ್ದಲ್ಲಿ ನಮೂನೆ 12ಎ ಇಡಿಸಿ(ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್) ಸಲ್ಲಿಸಿ, ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ನೌಕರರು ನಮೂನೆ 12 ಮತ್ತು 12ಎ ಇಡಿಸಿ ಸಲ್ಲಿಸಲು ಏ.26ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಪಿಆರ್‍ಓ, ಎಪಿಆರ್‍ಓ, ಪಿಓ, ಪೊಲೀಸ್ ಸಿಬ್ಬಂದಿಗಳು, ಹೋಂ ಗಾಡ್ರ್ಸ್, ಸೆಕ್ಟರ್ ಆಫೀಸರ್, ಎಫ್‍ಎಸ್.ಟಿ, ಎಸ್‍ಎಸ್‍ಟಿ, ವಾಹನ ಚಾಲಕರು, ಸ್ವಚ್ಚತಾಗಾರರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಈ ಅವಕಾಶ ಕಲ್ಪಿಸಲಾಗಿದೆ.
12ಎ ಸಲ್ಲಿಸಬೇಕಾದ ಅಧಿಕಾರಿ/ನೌಕರರು:
Lok Sabha Election ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಾಗಿ ನೋಂದಣಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ ನೌಕರರು
ನಮೂನೆ-12ಎ ರೊಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಆದೇಶ ಮತ್ತು ಎಪಿಕ್ ಕಾರ್ಡ್ ನೊಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ದಿನಾಂಕ : 26.04.2024 ರೊಳಗೆ ಸಲ್ಲಿಸುವುದು.
ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಂದ ಇಡಿಸಿ(ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್) ಯನ್ನು ಪಡೆದು ಚುನಾವಣೆಗೆ ನಿಯೋಜಿಸಿದ ಮತಗಟ್ಟೆಯಲ್ಲಿ ಮತ್ತು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳು ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದ ಹತ್ತಿರವಿರುವ ಮತಗಟ್ಟೆಯಲ್ಲಿ ಆಯಾ ಪಿಆರ್‍ಓ ರವರಿಗೆ ಸಲ್ಲಿಸಿ ಮತದಾನ ಮಾಡುವುದು.
ನಮೂನೆ 12 ಸಲ್ಲಿಸಬೇಕಾದ ಅಧಿಕಾರಿ ನೌಕರರು:
3ನೇ ಹಂತದಲ್ಲಿ ಮತದಾನ ನಡೆಯುತ್ತಿರುವ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದು, ಬೇರೆ ಲೋಕಸಭಾ ಕ್ಷೇತ್ರದ ಮತಪಟ್ಟಿಯಲ್ಲಿ ನೊಂದಾಯಿತ ನಿಯೋಜಿತ ಚುನಾವಣಾ ಸಿಬ್ಬಂದಿಗಳು ನಮೂನೆ 12 ಸಲ್ಲಿಸಿ ಅಂಚೆಮತ್ರ ಪಡೆಯಬಹುದು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೋಂದಣಿಯಾಗಿ ಬೇರೆ ಲೋಕಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಯೋಜಿತ ಚುನಾವಣಾ ಸಿಬ್ಬಂದಿಗಳು ನಮೂನೆ-12 ರೊಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಆದೇಶ ಮತ್ತು ಎಪಿಕ್ ಕಾರ್ಡ್ ನೊಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ದಿನಾಂಕ : 26.04.2024ರೊಳಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
Lok Sabha Election ಕರ್ತವ್ಯ ನಿರತ ನೌಕರರು ಮತದಾನ ಸೌಲಭ್ಯಕ್ಕೆ ನಮೂನೆ 12ಎ ಇಡಿಸಿ ಸಲ್ಲಿಸಿ ಮತ ಚಲಾಯಿಸಬಹುದು
Date: