Kuvempu Rangamandira ಮಂಡ್ಯದ ಜನದನಿ ತಂಡವು ಕುವೆಂಪು ರಂಗಮಂದಿರದಲ್ಲಿ ಎ. 25ರ ಸಂಜೆ 6 ಗಂಟೆಗೆ “ನಿತ್ಯ ಸಚಿವ” ಎಂಬ ನಾಟಕವನ್ನು ಪ್ರದರ್ಶಿಸಲಿದೆ.
ಇದು ಶಿಕ್ಷಣ ತಜ್ಞ, ಸಹಕಾರಿ ಧುರೀಣ, ಸಾಂಸ್ಕೃತಿಕ ವ್ಯಕ್ತಿ, ರಾಜಕಾರಣಿ ಕೆ ವಿ ಶಂಕರೇಗೌಡ ಅವರ ಬದುಕನ್ನಾಧರಿಸಿದ ನಾಟಕವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಪ್ಪ ದಳವಾಯಿ ರಚನೆಯ, ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ಈ ನಾಟಕದ ಪ್ರಮುಖ ಪಾತ್ರದಲ್ಲಿ ಶಿವಮೊಗ್ಗದ ನೀನಾಸಂ ಅಜಯ್ ನಟಿಸಿದ್ದಾರೆ. ಉಳಿದಂತೆ ಸುಮಾರು 21 ಪಾತ್ರಗಳಿವೆ. ಉಚಿತ ಪ್ರದರ್ಶನದ ಈ ನಾಟಕಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಜಿಲ್ಲಾ ಕಸಾಪ, ಸಹ್ಯಾದ್ರಿ ರಂಗತರಂಗ, ರಾಜ್ಯ ರೈತ ಸಂಘ ಮತ್ತು ಮಲೆನಾಡು ಕೋ ಆಪರೇಟಿವ್ ಸೊಸೈಟಿ ಈ ನಾಟಕ ಪ್ರದರ್ಶನವನ್ನು ಏರ್ಪಡಿಸಿವೆ ಎಂದರು.
Kuvempu Rangamandira ಪ್ರಸ್ತುತ ನಾಟಕದಲ್ಲಿ ಶಂಕರೇಗೌಡರ ಕುರಿತಾಗಿ 3 ಹಂತದ ಕಥೆಗಳನ್ನು ನೇಯಲಾಗಿದೆ. ಗಾಂಧೀಜಿ ಕರೆಯಂತೆ ಸತ್ಯಾಗ್ರಹಕ್ಕೆ ಧುಮುಕಿ ಜೈಲುವಾಸ ಅನುಭವಿಸುವಲ್ಲಿಂದ ನಾಟಕ ಆರಂಭವಾಗುತ್ತದೆ. ನಂತರ ಹೋರಾಟದಲ್ಲಿ ಭಾಗವಹಿಸುತ್ತಲೇ ಮಂಡ್ಯದ ಬದುಕಿನಲ್ಲಿ ಸಮಗ್ರ ಬದಲಾವಣೆ ತರುವ ತಮ್ಮ ವಕೀಲಿ ವೃತ್ತಿಗೆ ವಿದಾಯ ಹೇಳುತ್ತಾರೆ. ತಾವು ನಂಬಿದ ಧ್ಯೇಯದತ್ತ ಅವರು ಹೊರಳುತ್ತ್ತಾರೆ. ಸಹಕಾರ, ಶಿಕ್ಷಣ, ಸಂಸ್ಕೃತಿಯ ಪುನರುಜ್ಜೀವನ ಮತ್ತು ರಾಜಕಾರಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು.