K.S.Eshwarappa ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಇನ್ನೂ ಎಳಸು. ಆತನಿಗೆ ಪಕ್ಷದ ಬಗ್ಗೆ ಅರಿವಿಲ್ಲ. ಅವನು ಅಪ್ಪನ ನೆರಳಲ್ಲಿ ಬಂದವನು. ಪ್ರಭಾವದಿಂದ, ಹಠ ಮಾಡಿ ಪಟ್ಟ ಪಡೆದಿದ್ದಾನೆ. ಆತ ನನ್ನನ್ನು ಉಚ್ಛಾಟಿಸಿದ್ದಾನೆ. ಆದರೆ ನನ್ನ ಉಚ್ಚಾಟನೆ ತಾತ್ಕಾಲಿಕ, ನನಗೆ ಬಿಜೆಪಿಗೆ ತಾಯಿ ಇದ್ದಂತೆ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವರು ನನಗೆ ಕರೆ ಮಾಡಿ ಪಕ್ಷದಿಂದ ಹೊರಹಾಕಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅನ್ಯಾಯವಾಗಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಅಪ್ಪ-ಮಕ್ಕಳಿಂದ ಹಾಗೂ ಹಿಂದುತ್ವಕ್ಕೆ ಅನ್ಯಾಯವಾಗಿದೆ. ಹೀಗಾಗಿ ಬೂತ್‌ನಲ್ಲ್ಲಿ ಇದಕ್ಕೆ ಉತ್ತರ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದರು. ನಾನು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ. ಮತ್ತೆ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಇಲ್ಲಿ ರಾಘವೇಂದ್ರ ಸೋತು ಮನೆಗೆ ಮನೆಗೆ ಹೋಗುತ್ತಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರೆ. ಅಪ್ಪ-ಮಕ್ಕಳ ಕೈಯಿಂದ ಪಕ್ಷ ತಪ್ಪುತ್ತದೆ, ಶುದ್ಧೀಕರಣವಾಗುತ್ತದೆ ಎಂದರು.
K.S.Eshwarappa ಬಿಜೆಪಿಯಿಂದ ನನ್ನ ಉಚ್ಚಾಟನೆ ಬಳಿಕ ನನ್ನ ಸ್ಪರ್ಧೆ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಸಿಕ್ಕಿದೆ. ಇದಕ್ಕಾಗಿ ವಿಜಯೇಂದ್ರ ಧನ್ಯವಾದ ತಿಳಿಸುತ್ತೇನೆ. ದಿನೇ ದಿನೇ ನನಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ ಎಂದ ಅವರು, ವಿಜಯೇಂದ್ರ, ರಾಘವೇಂದ್ರ ಈಶ್ವರಪ್ಪ ವಾಪಸ್ ಪಡೆಯುತ್ತಾರೆ ಎಂದು ಪದೇ ಪದೇ ಹೇಳುತ್ತಾ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದರು.
ಈಗ ಪಕ್ಷದಿಂದ ಉಚ್ಚಾಟನೆ ಆಗಿದೆ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂಬುದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ ಎಂಧರು.