Saturday, December 6, 2025
Saturday, December 6, 2025

B.Y.Raghavendra ಮುಂಚೆ ಕೆಲವೇ ರೈಲುಗಳಿದ್ದವು. ಸಂಸದನಾದ ನಂತರ ಶಿವಮೊಗ್ಗಕ್ಕೆ ರೈಲುಗಳ ಸಂಪರ್ಕ ಹೆಚ್ಚಾಗಿವೆ- ಬಿ.ವೈ.ರಾಘವೇಂದ್ರ

Date:

B.Y.Raghavendra ಮೂರು ಬಾರಿ ಸಂಸದರಾದ ಅವಧಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೇ, ರನ್‌ವೇ ಹಾಗೂ ಹೈವೇ ಮೂರು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಅವಧಿಯಲ್ಲಿ ಮತ್ತಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಲು ಈಬಾರಿಯೂ ಮತ್ತಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಲು ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ನನಗೆ ಹೆಚ್ಚಿನ ಬೆಂಬಲ ನೀಡಬೇಕೆಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಭಾನುವಾರ ಬೆಳಿಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣಿಕರನ್ನು ಭೇಟಿ ಮಾಡಿ ತಮ್ಮ ಸಾಧನೆಯ ಸಮಗ್ರ ಪ್ರತಿಯನ್ನು ಪ್ರಯಾಣಿಕರಿಗೆ ನೀಡುವ ಮೂಲಕ ಮತಯಾಚಿಸಿದರು. ಕೇಂದ್ರ ಸರ್ಕಾರದಿಂದ ಸಾಕಷ್ಟು ಅಭಿವೃದ್ದಿ ಯೋಜನೆಗಳನ್ನು ತರುವ ಗುರಿ ಹೊಂದಿದ್ದೇನೆ. ಇದು ಕೇವಲ ಟ್ರೈಲರ್ ಮಾತ್ರ ಇನ್ನೂ ಪಿಕ್ಚರ್ ಬಾಕಿಯಿದೆ. ಅದನ್ನು ನಿಮ್ಮೆಲ್ಲ ರ ಆಶೀರ್ವಾದದಿಂದ ಪೂರೈಸುತ್ತೇನೆ ಎಂಬ ವಿಶ್ವಾಸವಿದೆ ಎಂದರು.
B.Y.Raghavendra ನಾನು ಸಂಸದನಾಗುವ ಮೊದಲು ಕೇಲವ ಬೆರಳೆಣಿಕೆಯಷ್ಟು ರೈಲುಗಳು ಶಿವಮೊಗ್ಗ ನಗರಕ್ಕೆ ಬರುತ್ತಿದ್ದವು, ಈಗ ಮಹಾನಗರಗಳೂ ಸೇರಿದಂತೆ ಹಲವು ನಗರ ಹಾಗೂ ಜಿಲ್ಲೆಗಳಿಗೆ ಶಿವಮೊಗ್ಗ ನಗರದಿಂದ ರೈಲ್ವೇ ಸಂಪರ್ಕವನ್ನು ಕಲ್ಪಿಸಲಾಗಿದೆ. ಇದು ರೈಲ್ವೇ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ಮಾಡಿದ ಸಾಧನೆಯಾಗಿದೆ ಎಂದು ಹೇಳಿದರು.
ನಂತರ ಬಿ.ವೈ.ರಾಘವೇಂದ್ರರವರು ಭದ್ರಾವತಿ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿರುವ ವಿಶ್ವೇಶ್ವರಯ್ಯ ಪುತ್ತಳಿಗೆ ಮಾಲಾರ್ಪಣೆ ಮಾಡಿ ಅಲ್ಲಿ ನೆರೆದಿದ್ದ ಮತದಾರ ಜನರನ್ನು ಸಂಪರ್ಕಿಸಿ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಶಾಂತ್ ಕುಕ್ಕೆ, ಭದ್ರಾವತಿ ಬಿಜೆಪಿ ಮುಖಂಡ ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ರಾಹುಲ್ ಬಿದರೆ, ಆನಂದ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...