Saturday, December 6, 2025
Saturday, December 6, 2025

Lok Sabha Election ಬೈಂದೂರಿನ ಜನತಾ ಕಾಲನಿಯಲ್ಲಿ ಗೀತಾ ಶಿವರಾಜ್ ಕುಮಾರ್ ಮತಯಾಚನೆ

Date:

Lok Sabha Election ಬೈಂದೂರಿನ ಜನತಾ ಕಾಲನಿಯಲ್ಲಿ ಗೀತಾ ಶಿವರಾಜ್ ಕುಮಾರ್ ಮತಯಾಚನೆ ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಭಾನುವಾರ ತಾಲ್ಲೂಕಿನ ಶಂಕರನಾರಾಯಣದ ಬೆದ್ರಕಟ್ಟೆಯ ಜನತಾ ಕಾಲೋನಿಗೆ ಭೇಟಿ ನೀಡಿ ಕೊರಗ ಸಮುದಾಯದ ಮುಖಂಡರೊದಿಗೆ ಮಾತುಕತೆ ನಡೆಸಿದರು.
ಕಾಲೋನಿಯಲ್ಲಿ ೭೦ ಕ್ಕೂ ಹೆಚ್ಚು ಕುಟುಂಬಗಳು ಬದುಕು ನಡೆಸುತ್ತಿದ್ದಾರೆ. ಆದರೆ, ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿವೆ. ಈ ಭಾಗದ ಜನರಿಗೆ ಪ್ರಮುಖ ಸಮಸ್ಯೆಯಾದ ಮನೆ ನಿರ್ಮಾಣಕ್ಕೆ ಭೂಮಿಯ ಸಮಸ್ಯೆ ತೀರದ ದಾಹದಂತಿದೆ. ಅದೇ ರೀತಿ, ಕುಡಿಯುವ ನೀರು, ರಸ್ತೆ, ಭೂ- ಹಕ್ಕು ಪತ್ರ ಸೇರಿದಂತೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿ ತಲೆ ದೂರಿವೆ. ಆದರೆ, ಇಲ್ಲಿಯವರೆಗೆ, ಯಾವುದೇ ಸಂಸದರು ಈ ಕಾಲೂನಿಗೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಈ ಭಾಗದಲ್ಲಿ ಹೆಚ್ಚಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಬುಟ್ಟಿ ನೇಕಾರರು, ಚೆಂಡೆ ವಾದ್ಯ ವಾದಕರು ಸೇರಿ ಇನ್ನಿತರ ಕುಲಕಸುಬು ನಂಬಿಕೊAಡು ಬದುಕ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಇಲ್ಲಿಯವರೆ ಯಾವುದೇ, ರೀತಿಯ ಮಕ್ಕಳ ಉದ್ಯೋಗ, ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಿಲ್ಲ. ಆದ್ದರಿಂದ, ಈ ಭಾಗದ ಜನರಿಗೆ ಸಮರ್ಪಕವಾದ ಸೌಲಭ್ಯ ಕಲ್ಪಿಸಿಕೊಡುವಂತೆ ಕಾಲೋನಿಯ ಜನರು ಮನವಿ ಮಾಡಿದರು.
Lok Sabha Election ಇದಕ್ಕೆ, ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು, ಇಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಮುಂದಿನ ದಿನದಲ್ಲಿ ಸಮಾಜದೊಂದಿಗೆ ಇರುವುದಾಗಿ ಭರವಸೆ ನೀಡಿದರು.
ಇದೇ ವೇಳೆ, ಕಾಲೋನಿಯ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರೂಪ ಅಕ್ಷಯ್ ಅವರ ಗೃಹ ಪ್ರವೇಶಕ್ಕೆ ಭೇಟಿ ನೀಡಿದರು.
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಪಂಚಾಯಿತಿ ಸದಸ್ಯ ಗುರುದತ್ ಷೇಟ್, ಸಂಕೇತ್ ಶೆಟ್ಟಿ, ಕೃಷ್ಣ ನಾಯ್ಕ್, ರಾಮಚಂದ್ರ ದೇವಾಡಿಗ, ಎ.ಪಿ ಶೆಟ್ಟಿ, ಬಿ.ಕೆ.ಶ್ರೀನಿವಾಸ, ಜಿ.ಎಸ್.ಹರಿಪ್ರಸಾದ್ ಆಚಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಪಿಗೇಡಿ ಸಂಜೀವ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ ಸೇರಿ ಅನೇಕ ಕಾರ್ಯಕರ್ತರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...