Irrigation Advisory Committee ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ 1 ಲಕ್ಷಕ್ಕೂ ಹೆಚ್ಚಿಗೆ ಎಕರೆಯಲ್ಲಿ ಬೆಳೆ ಬೆಳೆದಿರುವ ತೋಟಗಳಿಗೆನಾಲೆ ಮುಖಾಂತರ ಕುಡಿಯುವ ನೀರಿಗೆ ನೀರನ್ನು ಹಂಚಿಕೆ ಮಾಡಿ ಪ್ರಕಟಣೆ ಮಾಡಲಾಗಿದೆ.ಆದರೆ ಅಣೆಕಟ್ಟಿನಲ್ಲಿ ನೀರು ಕಡಿಮೆ ಇರುವುದರಿಂದ ನೀರು ಬಿಡಬಾರದು. ನೀರು ಬಿಟ್ಟರೆ ಲಕ್ಷಾಂತರ ಎಕ್ರೆ ಅಡಿಕೆ ಫಸಲು ಮಾರಣ ಹೋಮವಾಗುತ್ತದೆ ಎಂದು ರಾಜ್ಯ ರೈತ ಸಂಘ ಹೇಳಿದೆ.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್. ಆರ್. ಬಸವರಾಜಪ್ಪ, ಈ ದಿನದ ಭದ್ರಾ ಅಣೆಕಟ್ಟೆಯ ನೀರಿನ ಮಟ್ಟ 124.8ಅಡಿ ಇದೆ. ಒಟ್ಟು 17.5 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ 13 ಟಿಎಂಸಿ ನೀರು ಉಪಯೋಗಕ್ಕೆ ಬಾರದ ನೀರನ್ನು ಮುಖಾಂತರ ಹರಿಸಬಹುದಾಗಿದೆ. ಇದರಲ್ಲಿ ನಾಲ ಮುಖಾಂತರ ಕುಡಿಯುವ ನೀರಿಗೆ 1.5 ಟಿಎಂಸಿ ನೀರು ಹರಿಸಬೇಕು. ಉಳಿದ 3 ಟಿಎಂಸಿ ನೀರು 10 ದಿನಗಳಿಗೆ ಸಾಕಾಗುತ್ತದೆ ಎಂದರು.
Irrigation Advisory Committee ನೀರು ಹರಿಸುವ ಒಂದು ಕಂತು ಇನ್ನೂ ಬಾಕಿ ಇದೆ. ಆದರೆ ಬೆಳೆದು ನಿಂತ ತೋಟಗಳಿಗೆ ನೀರು ಹರಿಸಿದರೆ 4 ದಿನದ ಕೊರತೆ ಎದುರಾಗುತ್ತದೆ. ಆದರೆ ಇಲ್ಲಿಯವರೆಗೆ ಕುಡಿಯುವ ನೀರಿಗಾಗಿ ಕಾಯ್ದಿರಿಸುವುದಕ್ಕಿಂತ 1 ಟಿಎಂಸಿ ನೀರನ್ನು ಹೆಚ್ಚಿಗೆ ಬಿಡಲಾಗಿದೆ. ಈಗ ನದಿ ಮುಖಾಂತರ ಬಿಡಲು ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿಲ್ಲ. ದಿನಾಂಕ 30-03-2024ರಿಂದ 06-04-2024ರವರೆಗೆ 7 ದಿನಗಳ ಕಾಲ ನೀರು ಹರಿಸಿದ್ದು ಗದಗ, ಬೆಟಗೇರಿ ಕುಡಿಯುವ ನೀರಿಗೆ 12-04-2024ರವರೆಗೆ ನೀರು ಹರಿಸಿದೆ ಎಂದು ಮಾಹಿತಿ ನೀಡಿದರು.