Thursday, October 3, 2024
Thursday, October 3, 2024

Pariniti Kalakendra ಸಾಗರದಲ್ಲಿ ಕಲೆ,ಸಂಗೀತ ಸಾಹಿತ್ಯಕ್ಕೆ ಹೆಚ್ಚಿನ ಅವಕಾಶ ದೊರೆಯುತ್ತಿದೆ- ಆರ್.ಯತೀಶ್

Date:

Pariniti Kalakendra ಕಲಾ ಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೆ ಶ್ರದ್ಧೆ, ಏಕಾಗ್ರತೆ ಬಹಳ ಮುಖ್ಯ. ಯುವಜನರು ನಿರಂತರ ಪರಿಶ್ರಮ ವಹಿಸಿ ಅಭ್ಯಾಸ ಮಾಡಬೇಕು ಎಂದು ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.

ಸಾಗರದಲ್ಲಿ ಪರಿಣಿತಿ ಕಲಾಕೇಂದ್ರದ ವತಿಯಿಂದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ 16ನೇ ಪರಿಣಿತಿ ವರ್ಷೋತ್ಸವ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭರತನಾಟ್ಯವು ಸಂಗೀತ, ಸಾಹಿತ್ಯ, ನೃತ್ಯವನ್ನು ಒಳಗೊಂಡಿರುವ ಕಲೆ. ಇದಕ್ಕೆ ತನ್ನದೇ ಆದ ಮಹತ್ವವಿದೆ. ಗುರು ಶಿಷ್ಯ ಪರಂಪರೆಯ ಮೂಲಕ ಅದು ವ್ಯವಸ್ಥಿತವಾಗಿ ಬೆಳೆದುಕೊಂಡು ಬಂದಿದೆ. ಭರತನಾಟ್ಯ ಭಕ್ತಿ, ಆಧ್ಯಾತ್ಮವನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತ ಬಂದಿದೆ ಎಂದು ತಿಳಿಸಿದರು.

ಸಾಗರದಲ್ಲಿ ಕಲೆ, ಸಂಗೀತ, ಸಾಹಿತ್ಯಕ್ಕೆ ಹೆಚ್ಚಿನ ಅವಕಾಶವು ದೊರೆಯುತ್ತಿದೆ. ಕಲಾ ಪ್ರೇಕ್ಷಕರು ಕಲಾವಿದರನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಇಂತಹ ಉತ್ಸವಗಳು ಯುವ ಸಮೂಹದ ಕಲಿಕೆಗೆ ಸಹಕಾರಿಯಾಗಿದೆ ಎಂದರು.

ವಿದ್ವಾನ್ ಎಂ.ಗೋಪಾಲ್ ಮಾತನಾಡಿ, ಭರತನಾಟ್ಯದ ಜತೆಯಲ್ಲಿ ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯಗಳನ್ನು ಕಲಿಸುವ ಮತ್ತು ಆಸಕ್ತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಶಿಕ್ಷಣದ ಜತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿಯೂ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು. ಅಂಕದ ಬೆನ್ನೇರಿದರೆ ಬದುಕನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಪ್ರತಿ ವರ್ಷ ರಾಷ್ಟ್ರೀಯ ಉತ್ಸವಗಳನ್ನು ನಡೆಸಿಕೊಡುವ ಮೂಲಕ ವಿವಿಧ ರಾಜ್ಯಗಳ ಕಲಾಪ್ರಕಾರಗಳನ್ನು ಯುವಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Pariniti Kalakendra ಪತ್ರಕರ್ತ ದೀಪಕ್ ಸಾಗರ ಮಾತನಾಡಿ, ರಾಮಾಯಣ, ಮಹಾಭಾರತದಂತಹ ಕಾವ್ಯಗಳನ್ನು ಯುವಜನರಿಗೆ ತಲುಪಿಸುವಲ್ಲಿ ಮತ್ತು ಆಸಕ್ತಿ ಮೂಡಿಸುವಲ್ಲಿ ಭರತನಾಟ್ಯ ಕಲೆ ನೀಡಿರುವ ಕಲೆ ದೊಡ್ಡದು. ಇಂದು ಯುವಜನರು ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಕಾಣುತ್ತಿದ್ದು, ಭರತನಾಟ್ಯದ ಕಲೆಯಲ್ಲಿಯೂ ಪ್ರಾವೀಣ್ಯತೆ ಪಡೆದು ಮುನ್ನಡೆಯುತ್ತಿದ್ದಾರೆ. ಆದರೆ ಕಲಿಕೆಗಿಂತ ಪ್ರಸಿದ್ಧಿಗೆ ಹೆಚ್ಚು ಚಿಂತಿಸುವುದು ಅಪಾಯಕಾರಿ. ಸಿದ್ಧಿ ಇಲ್ಲದ ಪ್ರಸಿದ್ಧಿ ಒಳ್ಳೆಯದಲ್ಲ ಎಂದು ತಿಳಿಸಿದರು.

ನಾಟ್ಯಾಚಾರ್ಯ ಗೋಪಾಲ್ ಅವರು ತುಂಬಾ ವ್ಯವಸ್ಥಿತವಾಗಿ ಭರತನಾಟ್ಯ ಕಲೆಯನ್ನು ಕಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇರೆ ಬೇರೆ ರಾಜ್ಯದ ಕಲೆಗಳನ್ನು ಬಗ್ಗೆ ಮಕ್ಕಳಿಗೆ ಪರಿಣತಿ ನೀಡಿ ಕಲಾಸೇವೆ ಮಾಡುತ್ತಿದ್ದಾರೆ ಎಂದರು.

ಉದ್ಯಮಿ ಟಿ.ವಿ.ಪಾಂಡುರಂಗ ಮಾತನಾಡಿ, ಆಧುನಿಕ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಿಸುತ್ತಿದ್ದು, ಕಲಾಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿದೆ. ಯಾವುದೇ ವಿದ್ಯೆ ಸುಲಭವಾಗಿ ದಕ್ಕಿದರೆ ಮಹತ್ವ ನಮಗೆ ತಿಳಿಯುವುದಿಲ್ಲ. ಗುರುವಿನ ಮುಖೇನ ಅಭ್ಯಾಸ ಮಾಡಿದರೆ ಮಾತ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.

ಪರಿಣಿತಿ ಕಲಾಕೇಂದ್ರದ ವಿದ್ಯಾರ್ಥಿಗಳು ಭರತನಾಟ್ಯ ಹಾಗೂ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿ ಜನಮನ ಬೆಳೆಸಿದರು. ಪರಿಣ ತಿ ಕಲಾಕೇಂದ್ರ ಅಧ್ಯಕ್ಷ ಸೋಮಶೇಖರ್, ಗೌರವಾಧ್ಯಕ್ಷೆ ವೀಣಾ ಬೆಳೆಯೂರು, ವಿದ್ಯಾರಣ್ಯ ಫೌಂಡೇಷನ್ ಕಾರ್ಯದರ್ಶಿ ಬಿ.ಎನ್.ರತ್ನಾವತಿ, ಮಮತಾ ರಾಜ್‌ಕುಮಾರ್, ರಕ್ಷಿತ್, ಜಿ.ಎಸ್.ಅಮೃತ, ಆರ್.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...