B.S.Yediyurappa ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಪ್ರಗತಿಯಲ್ಲಿದೆ. ರಾಘವೇಂದ್ರ ಅವರನ್ನು ಗೆಲ್ಲಿಸುವ ಮೂಲಕ ಮತದಾರರು ಪಕ್ಷಕ್ಕೆ ಶಕ್ತಿ ನೀಡಬೇಕೆಂದು ಮಾಜಿ ಸಿಎಮ್ ಬಿ ಎಸ್ ಯಡಿಯೂರಪ್ಪ ಕರೆ ನೀಡಿದರು.
ಬೂತ್ ಮಟ್ಟದಲ್ಲಿ ಪ್ರತಿ ಮನೆಮನೆಗೆ ಹೋಗಿ ಬಿಜೆಪಿ ಮಾಡಿದ ಸಾಧನೆ, ಅಭಿವೃದ್ಧಿ ಬಗ್ಗೆ ವಿವರಿಸಬೇಕು. ಘೋಷಿಸಿರುವ ಯೋಜನೆಗಳನ್ನು ತಿಳಿಸಬೇಕೆಂದರು.
ಅಭ್ಯರ್ಥಿ ಬಿ ವೈ ರಾಘವೇಂದ್ರ ಮಾತನಾಡಿ, ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತೇನೆ., ಕಾಂಗ್ರೆಸ್‌ನಿಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಬಿಜಪಿ ಸೇರುತ್ತಿದ್ದಾರೆ. ವಿರೋಧಿಗಳ ಅಪಪ್ರಚಾರವೇ ನನಗೆ ಆಶೀರ್ವಾದ ಎಂದು ಭಾವಿಸಿದ್ದೇನೆ. ಶಿವಮೊಗ್ಗ ಕ್ಷೇತ್ರವನ್ನು ಗೆದ್ದು ನರೇಂದ್ರ ಮೋದಿ ಅವರಿಗೆ ಅರ್ಪಿಸುತ್ತೇನೆ ಎಂದರು.
ಮೂವರು ಮಾಜಿ ಸಿಎಂಗಳ ಸಾಥ್ :
ಬಿ.ವೈ ರಾಘವೇಂದ್ರರವರ ನಾಮಪತ್ರ ಸಲ್ಲಿಕೆಗೆ ಕುಮಾರ್ ಬಂಗಾರಪ್ಪ, ಮಾಳವಿಕಾ ಅವಿನಾಶ್, ಭಾರತೀ ಶೆಟ್ಟಿ , ಅರುಣ್ ಪುತ್ತಿಲ, ಮುನಿಸ್ವಾಮಿ ಸೇರಿದಂತೆ ಹಲವು
ಸಂಸದ ಬಿವೈ ರಾಘವೇಂದ್ರವರ ನಾಮಪತ್ರ ಸಲ್ಲಿಕೆಗೆ ಮೂವರು ಮಾಜಿ ಸಿಎಂಗಳು ಸಾಥ್ ನೀಡಿದ್ದಾರೆ ಜೆಡಿಎಸ್‌ನಿಂದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಜರಾಗಿದ್ದಾರೆ. ಮಗನ ನಾಮಪತ್ರ ಸಲ್ಲಿಕೆಗಾಗಿ ತಂದೆ ಬಿಎಸ್ ಯಡಿಯೂರಪ್ಪ ಕಮಲದ ಚಿಹ್ನೆಯನ್ನು ಹಿಡಿದು ಮೆರವಣಿಗೆ ವಾಹನವೇರಿದ್ದಾರೆ. ದಾರಿಯುದ್ದಕ್ಕೂ ಬಿಜೆಪಿ ಚಿಹ್ನೆಯನ್ನು ಪ್ರದರ್ಶಿಸುತ್ತಿರುವ ಬಿಎಸ್‌ವೈ ಕಾರ್ಯಕರ್ತರ ಘೋಷಣೆಗಳಿಗೆ ದನಿಗೂಡಿಸಿದ್ದು ವಿಶೇಷವಾಗಿತ್ತು.
ಮುಖಂಡರು ಮೆರವಣಿಗೆಯ ವಾಹವನ್ನು ಏರಿದ್ದಾರೆ. ಈ ಪೈಕಿ ಅರುಣ್ ಕುಮಾರ್ ಪುತ್ತಿಲ ಅವರ ಹಾಜರಾತಿ ಮತ್ತು ಕುಮಾರ್ ಬಂಗಾರಪ್ಪರವರ ಉಪಸ್ಥಿತಿ ವಿಶೇಷವಾಗಿ ಗಮನ ಸೆಳೆದಿದೆ.
೨ ನಾಮಪತ್ರ ಸಲ್ಲಿಸಿದ ಬಿವೈ ರಾಘವೇಂದ್ರ :
ವಿಶೇಷ ಎಂದರೆ ಮೆರವಣಿಗೆಯ ನಡುವೆ ಹಾಲಿ ಸಂಸದ ಬಿವೈ ರಾಘವೇಂದ್ರ ಎರಡು ಬಾರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೊದಲು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ್ , ಬಿಜೆಪಿ ಹಿರಿಯ ಮುಖಂಡರಾದ ಭಾನು ಪ್ರಕಾಶ್ ಹಾಗು ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತು ತಮ್ಮ ಪತ್ನಿಯ ಜೊತೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆಯವರಿಗೆ ಸಂಸದ ರಾಘವೇಂದ್ರರವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಇದಾದ ಕೆಲವೇ ಹೊತ್ತಿನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಅಶೋಕ್ ನಾಯ್ಕ್, ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರ ಮತ್ತು ಬಿಜೆಪಿ ಮುಖಂಡ ರುದ್ರೇಗೌಡರ ಸಮ್ಮುಖದಲ್ಲಿ ಡಿಸಿ ಗುರುದತ್ತ ಹೆಗೆಡೆಯವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
B.S.Yediyurappa ಮುಸ್ಲಿಮ್ ನಾಯಕರಿಂದ ಹಾರ ಸನ್ಮಾನ :
ಇನ್ನೊಂದೆಡೆ ಸಂಸದ ರಾಘವೇಂದ್ರರವರ ಮೆರವಣಿಗೆಯ ವಾಹನ ಗಾಂಧಿ ಬಜಾರ್‌ನ ತುದಿಗೆ ಬರುವ ಹೊತ್ತಿಗೆ ಅಲ್ಲಿಯೇ ಜೆಸಿಬಿ ಬಕೆಟ್‌ನಲ್ಲಿ ತಯಾರಾಗಿ ನಿಂತಿದ್ದ ಮುಸ್ಲಿಮ್ ನಾಯಕರುಗಳು ಬಿಡಿ ಹೂವುಗಳನ್ನ ವಾಹನದ ಮೇಲೆ ಹಾಕಿ ಘೋಷಣೆ ಕೂಗಿದರು. ಬಕೆಟ್‌ನ್ನು ಮೇಲಕ್ಕೆ ಎತ್ತಿ ನಾಯಕರು ಹಾಗೂ ಕಾರ್ಯಕರ್ತರು ಸೇವಂತಿ ಹೂವುಗಳನ್ನ ವಾಹನದ ಮೇಲೆ ಹಾಕಿ ಖುಷಿಪಟ್ಟು ಬೆಂಬಲ ವ್ಯಕ್ತಪಡಿಸಿದರು. ಪ್ರತಿಯಾಗಿ ಬಿಎಸ್‌ವೈ ಮತ್ತು ಹೆಚ್ ಡಿ ಕುಮಾರಸ್ವಾಮಿ ಮುಸ್ಲಿಮ್ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.
ಮೆರವಣಿಗೆ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ , ಗಾಂಧಿ ಬಜಾರ್ ಮೂಲಕ ಶಿವಪ್ಪನಾಯಕ ಸರ್ಕಲ್, ಅಮೀರ್ ಅಹಮದ್ ಸರ್ಕಲ್ , ನೆಹರೂ ರೋಡ್ ಮೂಲಕ ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ವೃತ್ತಕ್ಕೆ ಬಂದು ತಲುಪಿ ಅಲ್ಲಿ ಸಾರ್ವಜನಿಕ ಸಭೆ ನಡೆಯಿತು.