National Pension Scheme ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರು, ನೌಕರರಿಗೆ ಮರು ಜಾರಿ ಮಾಡುವುದು, ಏಳನೇ ವೇತನ ಆಯೋಗವನ್ನು ಸಂಪೂರ್ಣವಾಗಿ ಜಾರಿ ಮಾಡುವುದು, ಗೌರವ, ಅತಿಥಿü, ಅರೆಕಾಲಿಕ ಮತ್ತು ಇತರ ತಾತ್ಕಾಲಿಕ ಶಿಕ್ಷಕರು, ಉಪನ್ಯಾಸಕರನ್ನು ಖಾಯಂಗೊಳಿಸುವ ಬಗ್ಗೆ ತಾನು ಹೋರಾಡುವುದಾಗಿ ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಉಮೇದುರವಾರ ಕೆ ಕೆ ಮಂಜುನಾಥಕುಮಾರ್ ಭರವಸೆ ನೀಡಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಡ್ತಿ ಶಿಕ್ಷಷರ ಸಮಸ್ಯೆಯನ್ನು ಪರಿಹರಿಸಲು ಕ್ರಮ ಜರುಗಿಸಲಾಗುವುದು, ಭಡ್ತಿ ಹೊಂದಿದವರು ಅವೈಜ್ಞಾನಿಕ ಕ್ರಮದಿಂದ ಮಾಸಿಕ ಕಡಿಮೆ ವೇತನ ಪಡೆಯುತ್ತಿದ್ದಾರೆ.
National Pension Scheme ಅತಿಥಿ ಉಪನ್ಯಸಕರಿಗೆ ಗೌರವ ವೇತನ ಹೆಚ್ಚಿಸುವುದು, ಸೇವಾ ಭದ್ರತೆ ಕೊಡುವುದು, ೧೦ ಗಂಟೆಗಿಂತ ಹೆಚ್ಚು ಅವಧಿ ಬೋಧನೆ ಮಾಡಿದವರಿಗೆ ಬೋಧನಾ ಅವಧಿಗನುಗುಣವಾಗಿ ವೇತನ ನಿಗದಿ ಮಾಡುವುದು, ಅನುದಾನಿತ ಮತ್ತು ಅಲ್ಪಸಂಖ್ಯಾತರ ಸಂಸ್ಥೆಗಳು ಶಿಕ್ಷಕರು ಮತ್ತು ನೌಕರರು ಅನುಮೋದನೆ ಪಡೆಯಲು ವಿದ್ಯಾರ್ಥಿಗಳ ಸಂಖ್ಯೆ ಸರಕಾರದ ನಿಗದಿಕ್ಕಿಂತ ಶೇ. ೨೫ರಷ್ಟಿರಬೇಕೆನ್ನುವ ನಿಯಮ ತೆಗೆದುಹಾಕುವ ಬಗ್ಗೆ ಕೆಲಸ ಮಾಡುವುದಾಗಿ ವಿವರಿಸಿದರು.