Thursday, April 9, 2026
Thursday, April 9, 2026

Shivamogga Police ಅನಾಮಧೇಯ ವ್ಯಕ್ತಿ ಸಾವು.ತುಂಗಾ ನಗರ ಪೊಲೀಸ್ ಠಾಣಾ ಮಾಹಿತಿ

Date:

Shivamogga Police ಸೊರಬ ತಾಲ್ಲೂಕು ಆನವಟ್ಟಿ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಅವರ ಪೂರ್ವಪರ ಹಾಗೂ ಸಂಬಂಧಿಕರ ಗುರುತಿಗಾಗಿ ಶಿವಮೊಗ್ಗದ ತುಂಗಾನಗರ ಪೊಲೀಸರು ಪ್ರಕಟನೆಯನ್ನ ಹೊರಡಿಸಿದ್ದಾರೆ.
ಅನಾಮಿಕ ಮೃತ ವ್ಯಕ್ತಿಯ ವಾರಸ್ಸುದಾರರ ಪತ್ತೆಗೆ ಮನವಿ
ಕಳೆದ ಮಾ.28 ರಂದು ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸವರಾಜ್ ಬಿನ್ ಬಸವಣ್ಯಪ್ಪ ಎಂಬ 40 ವರ್ಷದ ವ್ಯಕ್ತಿಯು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಆನವಟ್ಟಿಯ ನೆರಲಗಿ ಗ್ರಾಮದಿಂದ 15 ವರ್ಷದ ಹಿಂದೆ ಮನೆಬಿಟ್ಟು ಬಂದಿರುವುದಾಗಿ ಹೇಳಿಕೊಂಡಿದ್ದರು.
Shivamogga Police ಆತನ ಸ್ಥಿತಿಯನ್ನು ಗಮನಿಸಿ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ಏಪ್ರಿಲ್‌ 07 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆತನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈತನ ಚಹರೆ ಸುಮಾರು 05.06 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ಮೃತನ ಬಲ ಕೈಯಲ್ಲಿ ತಂದೆ-ತಾಯಿ ಎಂಬ ಹಚ್ಚೆ ಗುರುತಿದೆ. ಕೊರಳಲ್ಲಿ ಕಪ್ಪು ಬಣ್ಣದ ರುದ್ರಾಕ್ಷಿ ಮತ್ತು ಶಿವನ ಚಿತ್ರವಿರುವ ದಾರವಿದೆ.
ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ತುಂಗಾನಗರ ಪೊಲೀಸ್ ಠಾಣೆ, ದೂ.ಸಂ.: 9141289308/ 9480803370 / 9480803377 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...