Union Public Service Commission ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ್ ಅಗ್ರಸ್ಥಾನ ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಾನ್ನುರದ ಐಐಟಿಯಲ್ಲಿ ಅಧ್ಯಯನ ಮಾಡಿರುವ ಆದಿತ್ಯ ಶ್ರೀವಾಸ್ತವ ಅಗ್ರಸ್ಥಾನ ಪಡೆದಿದ್ದಾರೆ.ಅನಿಮೇಶ್ ಪ್ರಧಾನ್ ಮತ್ತು ಡೋಣೂರು ಅನನ್ಯಾ ರೆಡ್ಡಿ ಕ್ರಮವಾಗಿ ಎರಡು ಮತ್ತು ಮೂರನೇ ರಾಂಕ್ ಪಡೆದಿದ್ದಾರೆ.
1,016 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ 664 ಪುರುಷರು ಮತ್ತು 352 ಮಹಿಳೆಯರು. ಇವರನ್ನು ವಿವಿಧ ಸೇವೆಗಳಿಗೆ ಆಯೋಗ ಶಿಫಾರಸು ಮಾಡಿದೆ. ಅರ್ಹತೆ ಪಡೆದಿರುವ ಅಗ್ರ 25 ಮಂದಿಯಲ್ಲಿ 10 ಮಹಿಳೆಯರಾಗಿದ್ದರೆ, 15 ಪುರುಷರು.
ಆಯ್ಕೆಯಾಗಿರುವ 1,016 ಅಭ್ಯರ್ಥಿಗಳ ಪೈಕಿ 347 ಮಂದಿ ಸಾಮಾನ್ಯ ವರ್ಗದವರು, 115 ಜನ ಆರ್ಥಿಕವಾಗಿ ದುರ್ಬಲ ವರ್ಗದವರು, 303 ಇತರ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿಗೆ ಸೇರಿದ 165 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 86 ಮಂದಿ ಇದ್ದಾರೆ ಎಂದು ಯುಪಿಎಸ್‌ಸಿ ತಿಳಿಸಿದೆ.
Union Public Service Commission ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ್ ಅಗ್ರಸ್ಥಾನ ಆ ಪೈಕಿ 180 ಅರ್ಹರಿಗೆ ಐಎಎಸ್, 37 ಮಂದಿಗೆ ಐಎಫ್‌ಎಸ್ ಮತ್ತು 200 ಅಭ್ಯರ್ಥಿಗಳಿಗೆ ಐಪಿಎಸ್ ಸಿಗಲಿದೆ. ಉಳಿದಂತೆ ಕೇಂದ್ರೀಯ ಗ್ರೂಪ್ ‘ಎ’ ಸೇವೆಗಳಿಗೆ ಸೇರಿದ 613, ಗ್ರೂಪ್ ‘ಬಿ’ ಸೇವೆಗಳಿಗೆ ಸೇರಿದ 113 ಹುದ್ದೆಗಳು ದೊರೆಯಲಿವೆ. 240 ಅಭ್ಯರ್ಥಿಗಳ ಹೆಸರನ್ನು ಕಾಯ್ದಿರಿಸಿದ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಯುಪಿಎಸ್‌ಸಿ ತಿಳಿಸಿದೆ.