Saturday, November 23, 2024
Saturday, November 23, 2024

Sahachetana Natyalaya ತಾಯಿ,ತಾಯ್ನೆಲ & ತಾಯ್ನುಡಿಗೆ ಭಾರತೀಯ ಸಂಸ್ಕೃತಿಯಲ್ಲಿ ಪರಮೋಚ್ಛ ಸ್ಥಾನ- ಶ್ರೀಕೂಡಲಿ ಶ್ರೀ

Date:

Sahachetana Natyalaya ಕಲೆ ಸಂಸ್ಕೃತಿ ಸಾಹಿತ್ಯ ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ. ಹಬ್ಬಹರಿದಿನಗಳ ಸಾಲಿನಲ್ಲಿ ಬಗೆಬಗೆಯ ಭಕ್ಷ್ಯ ಭೋಜನಗಳ ಜೊತೆ ಜ್ಞಾನದಾಹಕ್ಕೆ ಕನ್ನಡ ಸಾಹಿತ್ಯವನ್ನು ಜೊತೆಯಾಗಿಸಿದರೆ ಹಬ್ಬದ ರಸದೌತಣ ಇಮ್ಮಡಿಗೊಳ್ಳುತ್ತದೆ.

ಕಳೆದ 14 ವರ್ಷಗಳಿಂದ ಸಹಚೇತನ ನಾಟ್ಯಾಲಯ ತಮ್ಮ ಕವಿ ಕಂಡ ಯುಗಾದಿಯ ಕಲ್ಪನೆಯನ್ನು ಕನ್ನಡ ಕವನಗಳ ಜಿಜ್ಞಾಸುಗಳಿಗೆ ಇದೇ ರೀತಿ ಹಂಚುತ್ತಾ ಸಾಗಿದ್ದಾರೆ. ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ಮಠದಲ್ಲಿ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಕವನಸಂಕಲನವನ್ನು ಬಿಡುಗಡೆ ಮಾಡಿ ತಾಯಿ, ತಾಯ್ನೆಲ ಹಾಗೂ ತಾಯ್ನುಡಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪರಮೋಚ್ಛ ಸ್ಥಾನವನ್ನು ನೀಡಲಾಗಿದೆ.

ಕ್ಯಾಲೆಂಡರ್ ಹೊಸವರ್ಷದ ಆಚರಣೆಯ ಬದಲು ನಮ್ಮ ಭಾರತೀಯ ಪರಂಪರೆಯನ್ನು, ಕನ್ನಡ ಭಾಷೆಯನ್ನು ಪಸರಿಸುವ ನಿಟ್ಟಿನಲ್ಲಿ ಸಹಚೇತನ ಸಂಸ್ಥೆ ಕಳೆದ 14 ವರ್ಷಗಳಿಂದ ಇಂತಹ ಶ್ರದ್ಧೆಯ ಕಾರ್ಯವನ್ನು ಕೈಗೊಂಡು ಬಿಡದಂತೆ ನಡೆಸಿಕೊಂಡು ಬಂದಿದ್ದಾರೆ.

ಇದರಿಂದಾಗಿ ನಮ್ಮ ಯುವಪೀಳಿಗೆ ಇಂದಿಗೂ ನಮ್ಮ ಸಂಸ್ಕೃತಿಯ ಉಳಿವು ಹರಿವಿನ ಬಗ್ಗೆ ಕಾಯೋನ್ಮುಖರಾಗಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದರು. ಮನುಷ್ಯ ಬರವಣ ಗೆ, ಭಾಷೆ, ಚಿಂತನೆಗಳ ಬಗೆಗೆ ಕಾರ್ಯೋನ್ಮುಖನಾದಾಗ ಮಾತ್ರ ಒಬ್ಬ ಯೋಗ್ಯ ಮನುಜನಾಗುತ್ತಾನೆ. ಇಲ್ಲದ ಪಕ್ಷದಲ್ಲಿ ಈ ಗಣಕ ಕೇಂದ್ರಿತ ಯುಗದಲ್ಲಿ ಅದನ್ನು ಚಾಲನೆ ಮಾಡುವ ಚಾಲಕನಾಗಿಯೇ ಉಳಿಯುತ್ತಾನೆ ಹೊರತು ಅದರ ಯೋಚನೆಯನ್ನು ಮೀರಿ ಹೊಸತನ್ನು ಕಲ್ಪಿಸಿಕೊಳ್ಳುವ ಕ್ರಿಯಾಶೀಲತೆಯನ್ನು ಸ್ವಯಂ ತಾನೇ ನಾಶಪಡಿಸಿಕೊಳ್ಳುತ್ತಾನೆ ಎಂದರು.

ಈ ರೀತಿಯ ಸಾಹಿತ್ಯಿಕ ಸೇವೆ ಮನೆಮನೆಗಳಲ್ಲೂ ಮೈಗೂಡಲಿ ಎಂದು ಹರಸಿದರು.
ಕಳೆದ ಹಲವಾರು ವರ್ಷಗಳಿಂದ ದೇಶ ವಿದೇಶದಾದ್ಯಂತ ಯುವ ಕವಿ ಮನಸ್ಸಿನ ಕವಿಗಳು ಸಹಚೇತನದ ಕವನ ಸಂಕಲನಕ್ಕೆ ಕವನವನ್ನು ಕಳಿಸುತ್ತಲೇ ಬರುತ್ತಿದ್ದಾರೆ. ಅಮೇರಿಕ, ಇಂಗ್ಲೆಂಡ್, ಪ್ಯಾರಿಸ್, ಸಿಂಗಾಪೋರ್, ಜೊತೆಗೂಡಿ ಭಾರತದ ಮೂಲೆ ಮೂಲೆ ರಾಜ್ಯಗಳಿಂದಲೂ ಕನ್ನಡಿಗರು ಇವರ ಕವನ ಸಂಕಲನದಲ್ಲಿ ತಮ್ಮ ಕವನ ಪ್ರಕಟಗೊಳ್ಳುವುದಕ್ಕೆ ಕಾತರರಾಗಿರುತ್ತಾರೆ. ಇವರ ಕವನಸಂಕಲದ ಓದಿಗೆ ಮರುಳಾಗಿ ಇತ್ತೀಚಿನ ದಿನಗಳಲ್ಲಿ 6-7 ನೇ ತರಗತಿಯ ಮಕ್ಕಳೂ ಕೂಡ ಯುಗಾದಿಯ ಬಗೆಗೆ ಕನ್ನಡ ಕವನವನ್ನು ಬರೆಯುತ್ತಿರುವುದು ಮುಂದಿನ ಪೀಳಿಗೆಗೆ ಕನ್ನಡದ ಬಗೆಗೆ ಆಸ್ಥೆಯನ್ನು ಬೆಳೆಸಿದಂತಾಗಿದೆ.

Sahachetana Natyalaya ಈ ಬಾರಿಯ ಕವನಸಂಕಲನದಲ್ಲಿ 2 ಮಕ್ಕಳು ಈ ರೀತಿಯ ಕವನವನ್ನು ರಚಿಸಿದ್ದು ಒಟ್ಟು 95 ಗುಣಾತ್ಮಕ ಕವನಗಳ ಸಂಗ್ರಹ ಇದರಲ್ಲಿದೆ. ಹಳೆಯ ತಲೆಮಾರಿನ ಪ್ರಬುದ್ಧ ಕವಿಗಳ ಕವಿತೆಗಳ ಜೊತೆಗೆ ಹೊಸ ತಲೆಮಾರಿನ ಕವಿಗಳ ಚಿಂತನೆಯ ಯುಗಾದಿ ಸಂಬಂಧಿತ ಕವನಗಳು ಇದರಲ್ಲಿ ಅಡಕವಾಗಿವೆ. ಸುಮಾರು ಕೇವಲ ಸಾಹಿತ್ಯಾಸಕ್ತ ಬಂಧುಗಳಿಗೆ ನೃತ್ಯ ಗುರು ಸಹನಾ ಚೇತನ್ ದಂಪತಿಗಳು ಉಚಿತವಾಗಿ ಹಂಚುತ್ತಿದ್ದಾರೆ.

ಈ ಸಂದರ್ಭದಲ್ಲಿ ಚೇತನ್ ಎಸ್, ಡಾ. ನಾಗಮಣ , ಆನಂದರಾಮ್, ದಿನೇಶ್ ಆಚಾರ್ಯ, ವಿನಯ್ ಶಿವಮೊಗ್ಗ, ಸಿಂಧುಶ್ರೀ, ಸೇಜಲ್, ರಕ್ಷಿತ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...