University Of Agriculture ಲಂಚದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಟ್ರ್ಯಾಪ್ ಆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಇಲ್ಲಿನ ಎಇಇ ಲೋಹಿತ್ ಪ್ರಶಾಂತ್ ಕುಮಾರ ಮತ್ತು ಅಕೌಂಟ್ ಅಸಿಸ್ಟೆಂಟ್ ಗಿರೀಶ್ ಜಿ.ಆರ್, ಇವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು.
ಪ್ರಕರಣದ ವಿವರ;
ಶಿವಮೊಗ್ಗದ ಪ್ರಿಯಾಂಕಾ ಲೇಔಟ್‌ನಲ್ಲಿರುವ ಕ್ಲಾಸ್ ಒನ್ ಕಾಂಟ್ರಾಕ್ಟರ್ ಸತೀಶ್‌ಚಂದ್ರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಹಿರಿಯೂರಿನ ಕೆ.ವಿ.ಕೆ ರಬ್ಬರ್ ಫಾರ್ಮ್ ಆಡಳಿತ ವಿಭಾಗದ ಕಛೇರಿಯ ಮೇಲ್ಬಾವಣಿಯನ್ನು ನಿರ್ಮಿಸುವ ಟೆಂಡರ್ ಪಡೆದಿದ್ದರು. ನಿಗದಿಯಂತೆ ಕಾಮಗಾರಿ ಮುಗಿಸಿ, ಬಿಡ್‌ನ ಡಿಫರೆನ್ಸ್ ಅಮೌಂಟ್ ೬೩,೯೪೬ ರೂ. ವಾಪಸ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಎಇಇ ಲೋಹಿತ್ ಪ್ರಶಾಂತ್‌ಕುಮಾರ್ ತಮಗೆ ಕಾಮಗಾರಿಗೆ ಸಂಬಂಧಿಸಿದಂತೆ ೪೦ ಸಾವಿರ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಜೊತೆಗೆ ಡಿಫರೆನ್ಸ್ ಹಣ ಬಿಡುಗಡೆ ಮಾಡದೆ ಪೆಂಡಿಂಗ್ ಇಟ್ಟಿದ್ದರು ಎನ್ನಲಾಗಿದೆ.
University Of Agriculture ಈ ಸಂಬಂಧ ಆಡಿಯೋ ವಾಯ್ಸ್ ರೆಕಾರ್ಡಿಂಗ್ ಇಟ್ಟುಕೊಂಡಿದ್ದ ಕಾಂಟ್ರಾಕ್ಟರ್ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-೧೯೮೮ (ತಿದ್ದುಪಡಿ ಕಾಯ್ದೆ-೨೦೧೮) ರ ಪ್ರಕಾರ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಕಚೇರಿಯಲ್ಲಿ ದೂರು ದಾಖಲಿಸಿದ್ದರು. ಇಂದು ಮಧ್ಯಾಹ್ನ ೩೦ ಸಾವಿರ ರೂ ಲಂಚವನ್ನು ಗಿರೀಶ್ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ೩೦ ಸಾವಿರ ರೂಪಾಯಿ ಲಂಚ ಸಮೇತ ಬಂಧಿಸಿದ್ದಾರೆ.
ಈ ದಾಳಿಯನ್ನು ಡಿಎಸ್ಪಿ ಉಮೇಶ್ ನಾಯ್ಕ, ಇನ್ಸ್‌ಪೆಕ್ಟರ್ ಪ್ರಕಾಶ್ ಮಾರ್ಗದರ್ಶನದಲ್ಲಿ ನಡೆಸಲಾಯಿತು.