B.R.Ambedkar ವಿಐಎಸ್‌ಎಲ್ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಭದ್ರಾ ಅತಿಥಿಗೃಹದಲ್ಲಿ ದಿನಾಂಕ 14-04-2024ರಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಅರುಣ್ ಎಸ್. ನಾಯಕ್, ಮಹಾಪ್ರಬಂಧಕರು (ವಾಣ ಜ್ಯ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ಗಿISಐ ಕಾರ್ಮಿಕರ ಸಂಘ, ಶ್ರೀ ವಿಕಾಸ್ ಬಸೇರ್, ಪ್ರಧಾನ ಕಾರ್ಯದರ್ಶಿ, ಅಧಿಕಾರಿಗಳ ಸಂಘ, ಶ್ರೀ ಎಸ್.ಸಿ.ಓ. ಶ್ರೀನಿವಾಸ್, ಅಧ್ಯಕ್ಷರು, ಶ್ರೀ ನವೀನ್ ರಾಹುಲ್, ಹಿರಿಯ ಪ್ರಬಂಧಕರು (ಸಿಬ್ಬಂದಿ) ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ|| ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪಗಳನ್ನು ಸಮರ್ಪಿಸುವ ಮೂಲಕ ನಮನ ಸಲ್ಲಿಸಿದರು.
ಶ್ರೀ ನವೀನ್ ರಾಹುಲ್, ಹಿರಿಯ ಪ್ರಬಂಧಕರು (ಸಿಬ್ಬಂದಿ) ಸ್ವಾಗತಿಸಿದರು ಮತ್ತು ವಂದನಾರ್ಪನೆಗೈದರು.
ಶ್ರೀ ಬಿ.ಎಲ್. ಚಂದ್ವಾನಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಅವರ ಜೀವನದಿಂದ ಸಂಕ್ಷಿಪ್ತ ಕಲಿಕಾ ಅಂಶಗಳನ್ನು ನೀಡಿದರು ಮತ್ತು ಗಿISಐ ನಲ್ಲಿ Sಅ/Sಖಿ ನೌಕರರಿಗೆ ವಿಸ್ತರಿಸಿದ ಕಲ್ಯಾಣ ಕ್ರಮಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೆ.ಎಸ್. ಸುರೇಶ್, ಶ್ರೀ ಜೆ. ಜಗದೀಶ, ಶ್ರೀ ವಿಕಾಸ್ ಬಸೇರ್ ಮತ್ತು ಶ್ರೀ ಎಸ್.ಸಿ.ಓ. ಶ್ರೀನಿವಾಸ್ ಮಾತನಾಡಿದರು.
B.R.Ambedkar ಶ್ರೀ ನಾಗೇಂದ್ರಪ್ಪ, ಶ್ರೀ ಜಗದೀಶ್ ಬಡಿಗೇರ್, ಶ್ರೀ ನಿತಿನ್, ಕು. ಪ್ರತೀಕ ಮತ್ತು ಕು. ಲಿಶಿಕ, ಕು.ಜಾನವಿ ಮತ್ತು ಶ್ರೀ ಯೋಗೇಶ್ವರಿ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
೨೦೨೩-೨೪ನೇ ಸಾಲಿನಲ್ಲಿ ಗಿISಐ ನಲ್ಲಿ ಉನ್ನತ ಸಾಧನೆಗೈದ Sಅ/Sಖಿ ನೌಕರರಿಗೆ ಮತ್ತು ಶೈಕ್ಷಣ ಕವಾಗಿ ಸಾಧಿಸಿದ ಅವರ ಮಕ್ಕಳಿಗೆ ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾದ ರಸಪ್ರಶ್ತೆ ಸ್ಪರ್ಧೆಯಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ನೀಡಲಾಯಿತು.
ಶ್ರೀಮತಿ ಗಿರಿಜಾ, ಸುರಕ್ಷತಾ ಇಲಾಖೆ ಕಾರ್ಯಕ್ರಮವನ್ನು ನಿರೂಪಿಸಿದರು. ಗಿISಐ ಸಿಬ್ಬಂದಿ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿತ್ತು.