Malenada Utsava ಬಂಗಾರಮಕ್ಕಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವಿಶ್ವ ವೀರಾಂಜನೇಯ ಮಹಾ ಸಂಸ್ಥಾನದಲ್ಲಿ ಏ. 17ರ ಶ್ರೀ ರಾಮ ನವಮಿಯಿಂದ ಏ. 23ರ ಹನುಮ ಜಯಂತಿವರೆಗೆ ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ-2024 ಆಯೋಜನೆಗೊಂಡಿದೆ.
ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.) ವತಿಯಿಂದ ‘ಜಾತ್ರಾ ಮಹೋತ್ಸವ’ ಮತ್ತು ಸಿಲೆಕ್ಟ್ ಫೌಂಡೇಶನ್ (ರಿ.) ಸಹಭಾಗಿತ್ವದಲ್ಲಿ ನಡೆಯಲಿರುವ ಈ ವಿಶೇಷ ವಾರ್ಷಿಕ ಕಾರ್ಯಕ್ರಮದಲ್ಲಿ ಏ.17ರಂದು ಶ್ರೀ ರಾಮನವಮಿ ಜಾತಾ ಉತ್ಸವ, ಏ. 18ರಿಂದ 20ರವರೆಗೆ ಶರಾವತಿ ಆರತಿ, ಶರಾವತಿ ಕುಂಭ ಮಹೋತ್ಸವ ಏ. 22ರಂದು ಶ್ರೀ ದೇವರ ಪುಷ್ಪ ರಥೋತ್ಸವ, ಏ. 23ರಂದು ಶ್ರೀ ದೇವರ ಬ್ರಹ್ಮ ರಥೋತ್ಸವ ನಡೆಯಲಿದೆ.
ಶರಾವತಿ ಕುಂಭ ಮಲೆನಾಡ ಉತ್ಸವದಲ್ಲಿ ಏಳು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ವಿಶೇಷವಾಗಿ ಶ್ರೀ ಕ್ಷೇತ್ರದ ಧರ್ಮಾಽಕಾರಿ ಶ್ರೀ ಮಾರುತಿ ಗುರೂಜಿಯವರಿಂದ ಸತ್ಸಂಗ, ಭಕ್ತಿ ಸಂಗೀತ, ಭಜನೆ, ಗಾಯನ, ನೃತ್ಯ ವೈಭವ, ವಿವಿಧ ಶೈಲಿಯ ಕುಣಿತಗಳು ಪ್ರದರ್ಶನಗೊಳ್ಳಲಿದ್ದು, ಏ. 20 ರಂದು ಮಕ್ಕಳ ಸಾಹಿತ್ಯ ಸಮ್ಮೇಳನ, ಏ. 21ರಂದು ಮಕ್ಕಳ ಕವಿ-ಕಾವ್ಯ ಸಮ್ಮೇಳನಗಳು, ಏ. 22 ರಂದು ಗ್ರಾಮೀಣ ಕ್ರೀಡಾ ಸ್ಪರ್ಧೆ ಮತ್ತು ಏ.23 ರಂದು ದಂತ ಹಾಗೂ ಕಣ್ಣಿನ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.
Malenada Utsava ವೈದ್ಯರ ಶಿಫಾರಸ್ಸಿನ ಅನ್ವಯ ಅಗತ್ಯವಿರುವವರಿಗೆ ಹೆಚ್ಚುವರಿ ದಂತ ಚಿಕಿತ್ಸೆ, ಕಣ್ಣಿನ ಸರ್ಜರಿ ಹಾಗೂ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು.
ಉತ್ಸವದ ವಿಶೇಷವಾಗಿ ವಸ್ತು ಪ್ರದರ್ಶನ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಇರಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿ ಹಾಗೂ ದೇವಾಲಯ ಆಡಳಿತ ಮಂಡಳಿ ಪದಾದಿಕಾರಿಗಳು ಕೋರಿದ್ದಾರೆ.