K. S. Eshwarappa ಸ್ವತಂತ್ರ‍್ಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧಿಸಲಿದ್ದು ಏ.12 ರಂದು ನಾಮಪತ್ರ ಸಲ್ಲಿಸಲಾಗುತ್ತಿದೆ ಎಂದು ಮಾಜಿ ಕಾರ್ಪೊರೇಟರ್ ವಿಶ್ವಾಸ್ ತಿಳಿಸಿದರು.
K. S. Eshwarappa ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮೋದಿ ಸ್ಪರ್ಧೆ ಬೇಡ ಅಂದರೂ ಸ್ಪರ್ಧಿಸುವುದಾಗಿ ಈಶ್ವರಪ್ಪ ತೀರ್ಮಾನಿಸಿದ ಮೇಲೆ ಮತ್ತೆ ದೆಹಲಿಗೆ ಹೋದಾಗ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದಾಗ ವಾಪಾಸ್ ಆಗಿ ತಮ್ಮ ಸ್ಪರ್ಧೆಯನ್ನು ಈಶ್ವರಪ್ಪನವರು ಗಟ್ಟಿ ಮಾಡಿದರು ಎಂದರು.
ಏ.12 ರಂದು10 ಗಂಟೆಯಿoದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಆರಂಭಿಸಿ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಮಾಜದ ಮುಖಂಡರು,ಈ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆಗೆ ಅವಕಾಶವಿಲ್ಲದ ಕಾರಣ, ವಾಹನದಲ್ಲಿ ಸ್ಪೀಕರ್ ಬಳಸಿ ಈಶ್ವರಪ್ಪ ಭಾಷಣ ಮಾಡಲಿದ್ದಾರೆ. ನಂತರ ನಾಮಪತ್ರ ಸಲ್ಲಿಸಲಾಗುವುದು. ಪಕ್ಷ ಶುದ್ಧೀಕರಣದ ಮಾತನಾಡಿರುವ ಈಶ್ವರಪ್ಪ ಅವರನ್ನು ಈ ಬಾರಿ ಚುನಾವಣೆಯಲ್ಲಿ2ಲಕ್ಷ ಮತಗಳಿಂದ ಗೆಲ್ಲಿಸಲಾಗುವುದು ಎಂದರು.
ಕರಪತ್ರದಲ್ಲಿಯೂ ಮೋದಿಯವರ ಫೋಟೊ ಬಳಸಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು. ಮನವೊಲಿಸುವ ಭರವಸೆ ಹಿನ್ನೆಲೆಯಲ್ಲಿ ದೆಹಲಿಗೆ ಹೊದರೂ ಅಮಿತ್ ಶಾ ದೆಹಲಿಗೆ ಹೋದಾಗ ಭೇಟಿಯಾಗದೆ ಅವಮಾನಿಸಿದರು ಎಂದ ಅವರು, ಮೋದಿ ಪೋಟೊ ಬಳಕೆ ವಿಚಾರವಾಗಿ ನ್ಯಾಯಾಲಯದಲ್ಲಿ ಕೆವಿಟ್ ಹಾಕಲಾಗಿದೆ. ನ್ಯಾಯಾಲಯ ಏನು ಸೂಚಿಸಲಿದೆ ಎನ್ನುವುದರ ಮೇಲೆ ಮುಂದೆ ತೀರ್ಮಾನಿಸಲಾಗುವುದು. ನಾಮಪತ್ರ ಸಲ್ಲಿಕೆಯ ನಂತರದ ವಿಚಾರ ಅದು ಮೋದಿ ಫೋಟೊ ಬಳಸಬಾರದು ಎಂದರು ಮನಸ್ಸಿನಿಂದ ತೆಗೆಯಲು ಸಾಧ್ಯವಿಲ್ಲ ಎಂದರು.