Saturday, December 6, 2025
Saturday, December 6, 2025

Malnad Cancer Hospital ಮಹಿಳೆಯ ದೇಹದಿಂದ 9 ಕೆಜಿ ಗಡ್ಡೆ ಹೊರತೆಗೆದು ಯಶಸ್ವಿಯಾದ ಮಲೆನಾಡು ಆಸ್ಪತ್ರೆಯ ವೈದ್ಯಗಣ

Date:

Malnad Cancer Hospital ಶಿವಮೊಗ್ಗ ನಗರದ ಮಲ್ನಾಡು ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ಮಹಿಳೆಯ ದೇಹದಿಂದ ಬರೋಬ್ಬರಿ 9 ಕೆಜಿ ತೂಕದ ಗಡ್ಡೆಯನ್ನು ಹೊರಕ್ಕೆ ತೆಗೆದಿದ್ದಾರೆ.

ಆಸ್ಪತ್ರೆಗೆ ಮಹಿಳೆಯೊಬ್ಬರು ಹೊಟ್ಟನೋವಿನ ಕಾರಣಕ್ಕೆ ದಾಖಲಾಗಿದ್ದರು. ಅವರು ಕಡೂರು ತಾಲ್ಲೂಕಿನವರು. ವೈದ್ಯರು ಪರೀಕ್ಷೆ ನಡೆಸಿದಾಗ ಅವರ ಗರ್ಭಾಶಯದಲ್ಲಿ ಗಡ್ಡೆಯು ಬೆಳೆದಿತ್ತು. ಕೆಲವು ಮಹಿಳೆಯರಿಗೆ ಈ ರೀತಿಯ ಗಡ್ಡೆಗಳು ಬೆಳೆದು ಅವರ ಜೀವಕ್ಕೆ ಮುಳುವಾಗುತ್ತದೆ ಎಂದು ಮಹಿಳೆಗೆ ಮಾಹಿತಿ ನೀಡಿದರು.

ನಂತರ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದರು. ಕ್ಯಾನ್ಸರ್ ಶಸ್ತ್ರ ಚಿಕಿತ್ಸಕರಾದ ಡಾ.ದೀಪಕ್ ಎಚ್.ಎಲ್ , ಡಾ. ಸಂದೇಶ್ ಕೆ.ಆರ್ (ಶಸ್ತ್ರ ಚಿಕಿತ್ಸಾ ತಜ್ಞರು) ಹಾಗೂ ಡಾ. ವಾದಿರಾಜ್ ಕುಲಕರ್ಣಿ, ಅರವಳಿಕೆ ತಜ್ಞ ಡಾ. ಅರ್ಜುನ್ ಭಾಗವತ್ ಹಾಗೂ ಸಿಬ್ಬಂದಿ ಅಂತಿಮವಾಗಿ ಯಶಸ್ವಿ ಆಪರೇಷನ್‌ ನಡೆಸಿದ್ದಾರೆ.

Malnad Cancer Hospital ಗರ್ಭಾಶಯದಲ್ಲಿದ್ದ 9 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆದ ವೈದ್ಯರು, ಮಹಿಳೆಯ ಆತಂಕವನ್ನು ದೂರ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...