Noble World Record Organization ಏಪ್ರಿಲ್ 28 ರಂದು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಮೊದಲ ಬಾರಿಗೆ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಯೋಜಕರಲ್ಲೊಬ್ಬರಾಗಿರುವ ಶಶಿಕುಮಾರ್,
ನೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ದೇಶದಲ್ಲಿ ವಿಶೇಷ ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಇದು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿದೆ. ವಿಶೇಷ ಸಾಧನೆ ತೋರುವ ಹಾಗೂ ವೈಶಿಷ್ಟ್ಯತೆ ಇರುವ ವ್ಯಕ್ತಿಗಳನ್ನು ಪ್ರಶಂಸಿಸಿ ಪಬ್ಲಿಕೇಶನ್ ಮಾಡಲಿದೆ ಎಂದರು.
ಶಿವಮೊಗ್ಗದಲ್ಲಿ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಬಯಸುವ ಜನರು ಹಾಗೂ ವೈಶಿಷ್ಟ್ಯತೆಯನ್ನು ಹೊಂದಿರುವ ವ್ಯಕ್ತಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಏಪ್ರಿಲ್ 20ರ ಒಳಗೆ ದೂರವಾಣಿ ಮುಖಾಂತರ 9900933653 ಆಯೋಜಕರನ್ನು ಸಂಪರ್ಕಿಸಬಹುದಾಗಿದೆ ಎಂದರು.
Noble World Record Organization ಏಪ್ರಿಲ್ 28ರಂದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಹೆಸರಾಂತ ಚೆಸ್ ಪಟು, ಏಷಿಯನ್ ಪ್ಯಾರಾ ಗೇಮ್ಸ್ ಪದಕ ವಿಜೇತ ಕಿಶನ್ ಗಂಗೊಳ್ಳಿ ಮಾಡಲಿದ್ದು ಕಾರ್ಯಕ್ರಮಕ್ಕೆ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಕರ್ನಾಟಕ ರಾಜ್ಯ ನಿರ್ದೇಶಕರು ಡಾ.ಎಸ್ ಕೃಷ್ಣ ಮೂರ್ತಿ ಆಗಮಿಸುವರು. ಈ ರೆಕಾರ್ಡ್ ಅಟೆಂಪ್ಟ್ ನೋಡಲು ಬಹಳ ಕುತೂಹಲಕರವಾಗಿ ಆಕರ್ಷಕವಾಗಿ ಇರುವುದರಿಂದ ಜನತೆ ಹೆಚ್ಚು ಸಂಖ್ಯೆಯಲ್ಲಿ ಬಂದು ಪ್ರೋತ್ಸ್ಸಾಹಿಸಲು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಯೋಜಕರಾದ ಶರವಣ, ಶ್ರೇಯಸ್, ಹರ್ಷಿತ್, ರಾಘವೇಂದ್ರ, ಮೀನಾಕ್ಷಿ ಮೊದಲಾದವರಿದ್ದರು.